ಸಮ್ಮೇಳನ ಯಶಸ್ವಿಗೆ ಶಿಸ್ತು ಪಾಲನಾ ಸಮಿತಿಯ ಕಾರ್ಯ ಮಹತ್ವದ್ದು- ರಾಯಚೂರಕರ್

ರಾಯಚೂರು.ನ.೦೩- ಸಮ್ಮೇಳನಗಳು ಯಶಸ್ವಿ ಹೊಂದಬೇಕಾದರೆ ಶಿಸ್ತು ಬಹುಮುಖ್ಯವಾಗಿದೆ. ಸಮಾರಂಭದಲ್ಲಿ ಎಲ್ಲರೂ ಶಿಸ್ತಿನಿಂದ ಕಾರ್ಯಕ್ರಮ ನಿರ್ವಹಿಸಿದಲ್ಲಿ ಹೆಚ್ಚಿನ ಮಹತ್ವ ಸಮ್ಮೇಳನಕ್ಕೆ ಬರುತ್ತದೆ ಎಂದು ಶ್ರೀನಿವಾಸ ರಾಯಚೂಕರ್ ಹೇಳಿದರು. ಅವರು ಬುಧವಾರದಂದು ಕನ್ನಡ ಭವನದಲ್ಲಿ ರಾಯಚೂರು ತಾಲೂಕ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶಿಸ್ತು ಪಾಲನ ಮತ್ತು ಆರೋಗ್ಯ ಉಪ ಸಮಿತಿಯ ಸದಸ್ಯರ ಹಾಗೂ ಕಾಲೇಜು ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಮ್ಮೇಳನದಲ್ಲಿ ಪ್ರತಿಯೊಂದು ಕಾಲೇಜಿನಿಂದ ವಿದ್ಯಾರ್ಥಿಗಳು ಭಾಗವಹಿಸಿ ಸಮ್ಮೇಳನದಲ್ಲಿ ಹಮ್ಮಿಕೊಂಡಿರುವ ಮೆರವಣಿಗೆ, ಧ್ವಜಾರೋಹಣ, ವೇದಿಕೆ ಕಾರ್ಯಕ್ರಮಗಳು, ಊಟ- ಉಪಹಾರದ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ಶಿಸ್ತಿನಿಂದ ಕಾರ್ಯ ನಿರ್ವಹಿಸಲು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ವೆಂಕಟೇಶ್ ಬೇವಿನ ಬೆಂಚಿ, ಪ್ರಾಂಶುಪಾಲರುಗಳಾದ ಹೇಮರೆಡ್ಡಿ ಪಾಟೀಲ್ ಎಂ.ಜಿ. ಮಾರುತಿ ಆಂಜನೇಯ ಓಬಳೇಶ್ ಸಂದೀಪ್ ಕಾರ್ಬಾರಿ, ಮಂಜುನಾಥ್, ಗಿರಿಯಪ್ಪ ನಾಯಕ್, ಹಳ್ಳಪ್ಪ ನಾಯಕ್, ಮಹಾದೇವಪ್ಪ, ಈರಣ್ಣ ಪೂಜಾರಿ, ಮುರಳಿಧರ್ ಕುಲಕರ್ಣಿ, ಭೀಮಣ್ಣ ಗಂಗಾವರ್, ಬಜಾರಪ್ಪ, ಲಕ್ಷ್ಮಣ, ಶಶಿಧರ್, ಮಹದೇವ್, ಶ್ರೀಧರ್ ಹೂಗಾರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.