
ಕೋಲಾರ,ಮಾ.೨೮: ೮ನೇ ಕೋಲಾರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನರಸಾಪುರದಲ್ಲಿ ಶಾಸಕರಾದ ಶ್ರೀನಿವಾಸಗೌಡ ಚಾಲನೆ ನೀಡಿದರು. ಸಿ.ಎಂ.ಆರ್ ಶ್ರೀನಾಥ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮ್ಮೇಳನಾಧ್ಯಕ್ಷ ಎನ್.ಆರ್.ಜ್ಞಾನಮೂರ್ತಿ ಬೈಜಾತ ಮೂಲಕ ಪಲ್ಲಕ್ಕಿಯಲ್ಲಿ ಸಾಗಿದರು. ಪೂರ್ಣ ಕುಂಭ ಕಳಶ ಹೊತ್ತ ಶಾಲಾ ಮಕ್ಕಳು ಅವರನ್ನು ಸ್ವಾಗತಿಸಿದರು. ಮೆರವಣಿಗೆ ನರಸಾಪುರದ ಪ್ರಮುಖ ಬೀದಿಗಳಲ್ಲಿ ಸಾಗಿತು.
ಈ ಸಂದರ್ಭದಲ್ಲಿ ಕವಿಗಳಾದ ಡಾ.ಷರೀಫ, ಕಸಾಪ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ, ಕ.ಸಾ.ಪ ಕೋಲಾರ ತಾಲ್ಲೂಕು ಅಧ್ಯಕ್ಷ ಶಂಕರೇಗೌಡ ನರಸಾಪುರ, ಜೆ.ಜಿ ನಾಗರಾಜ್, ಸತೀಶ್, ಹೋಬಳಿ ಅಧ್ಯಕ್ಷ ಸತೀಶ್, ಟಿ.ಸುಬ್ಬರಾಮಯ್ಯ, ಕೋ.ನಾ.ಪರಮೇಶ್ವರನ್, ಶ್ರೀನಾಥ್ ಹೊಲ್ಲಂಬಳ್ಳಿ, ನಾರಾಯಣಪ್ಪ ಪಿ, ವೇಣುಸುಂದರ್‌ಗೌಡ ಎಂ.ಆರ್, ವೆಂಕಟರಾಮೇಗೌಡ, ಶ್ರೀನಾಥ್, ಮಹಮ್ಮದ್ ಯುಸುಫ್, ಸಂಗಮೇಶ್, ಜಗದೀಶ್, ಸುಜಾತ, ಮಾಯಾ ಬಾಲಚಂದ್ರ, ವಿನಯ್ ಗಂಗಾಪುರ, ವೆಂಕಟಾಚಲಪತಿ, ಕ.ಸಾ.ಪ ಪದಾಧಿಕಾರಿಗಳು, ಕನ್ನಡ ಮನಸ್ಸುಗಳು ಕನ್ನಡಾಭಿಮಾನಿಗಳು ಹಾಜರಿದ್ದರು.