ಸಮ್ಮತಿ ಮೇಳ ಉದ್ಘಾಟಿಸಿದ ಆನಂದ್ ಸಿಂಗ್

ಸಮ್ಮತಿ ಮೇಳವನ್ನು ಅರಣ್ಯ ಸಚಿವ ಆನಂದ್ ಸಿಂಗ್ ಉದ್ಘಾಟಿಸಿದರು. ಕಾಸಿಯಾ ಅಧ್ಯಕ್ಷ ಅರಸಪ್ಪ ಸೇರಿದಂತೆ, ಮತ್ತಿತರರು ಇದ್ದಾರೆ.

ಬೆಂಗಳೂರು,ಸೆ.೧೬- ನಗರದಲ್ಲಿ ಆಯೋಜಿಸಿದ್ದ ಸಮ್ಮತಿ ಮೇಳವನ್ನು ಅರಣ್ಯ ಮತ್ತು ಪರಿಸರ ಸಚಿವ ಆನಂದ್ ಸಿಂಗ್ ಉದ್ಘಾಟಿಸಿದರು.
ಈ ವೇಳೆ ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ಸೇರಿದಂತೆ, ಅನೇಕರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಅರಸಪ್ಪ ಉದ್ಯಮಗಳು ಹೊರಸೂಸುತ್ತಿರುವ ತ್ಯಾಜ್ಯವನ್ನು ಸಂಸ್ಕರಿಸಲು ಸ್ಥಾವರ ನಿರ್ಮಾಣ ಕಾರ್ಯ ಚುರುಕೊಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಸುಮಾರು ೬.೫ ಲಕ್ಷ ನೋಂದಾಯಿತ ಮತ್ತು ೨ ಲಕ್ಷ ಮತ್ತು ನೋಂದಾಯಿಸದ ಎಂಎಸ್‌ಎಂಇ ಘಟಕಗಳನ್ನು ಪ್ರತಿನಿಧಿಸುತ್ತದೆ.
ಎಂಎಸ್‌ಎಂಇ ವಲಯ ಕರ್ನಾಟಕದಲ್ಲಿ ೩೦ ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಒದಗಿಸುತ್ತಿದೆ, ಇದು ಉದ್ಯೋಗ ಉತ್ಪಾದನೆಯ ದೃಷ್ಟಿಯಿಂದ ಕೃಷಿ ಕ್ಷೇತ್ರದ ನಂತರ ದೊಡ್ಡ ಕ್ಷೇತ್ರವಾಗಿದೆ ಈ ಹಿನ್ನೆಲೆಯಲ್ಲಿ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಆನಂದ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.
ಸಣ್ಣ ಕೈಗಾರಿಕೆಗಳಿಗೆ ಸಮ್ಮತಿ ಶುಲ್ಕವನ್ನು ಯಂತ್ರೋಪಕರಣಗಳ ಮೌಲ್ಯದ ಆಧಾರದ ಮೇಲೆ ನಿಗದಿಪಡಿಸಬೇಕು. ಭೂಮಿ ಮತ್ತು ಕಟ್ಟಡದ ವೆಚ್ಚ ಮತ್ತು ಕಛೇರಿ ಉಪಕರಣಗಳು, ಪೀಠೋಪಕರಣಗಳು, ಗಣಕಯಂತ್ರ, ಸಾಫ್ಟ್‌ವೇರ್ ಇತ್ಯಾದಿ ಮಾಲಿನ್ಯರಹಿತ ಆಸ್ತಿಗಳನ್ನು ಒಳಗೊಂಡಿರಬಾರದು.ಬಾಡಿಗೆ ಕಟ್ಟಡಗಳ ಪ್ರಕರಣಗಳಲ್ಲಿ, ೧೦ ವರ್ಷಗಳ ಬಾಡಿಗೆ ಮೌಲ್ಯವನ್ನು ಭೂಮಿ ಮತ್ತು ಕಟ್ಟಡದ ವೆಚ್ಚವೆಂದು ಪರಿಗಣಿಸಲಾಗುತ್ತಿದೆ. ಇದನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಮೌಲ್ಯಗಳನ್ನು ಬ್ಯಾಲೆನ್ಸ್ ಶೀಟ್ ಮೌಲ್ಯದ ಬದಲಾಗಿ ಘಟಕದ ಪ್ರಾರಂಭದಿಂದ ಅವುಗಳ ಇನ್‌ವಾಯ್ಸ್ ಮೌಲ್ಯದ ಸಂಚಿತ ಮೌಲ್ಯದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತಿದೆ. ಮೌಲ್ಯವನ್ನು ಸವಕಳಿ ಇಲ್ಲದೆ ಲೆಕ್ಕ ಹಾಕಲಾಗುತ್ತಿದೆ. ಇದನ್ನು ಸರಿಪಡಿಸಬೇಕಾಗಿದೆ ಎಂದಿದ್ದಾರೆ.