ಸಮೃದ್ಧಿ ತರುವ ನಾಗರ ಪಂಚಮಿ ಹಬ್ಬ

ಶಹಾಬಾದ:ಆ.22:ಭಾರತೀಯರಿಗೆ ಅತ್ಯಂತ ಪ್ರಮುಖವಾದ ಶ್ರಾವಣ ಮಾಸದ ನಾಗರಪಂಚಮಿ ಹಬ್ಬದ ನಿಮಿತ್ತ ಭಕ್ತರು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುವ ವಾಡಿಕೆ ಇದೆ. ತಮ್ಮ ಸಂಕಷ್ಟಗಳು ನಿವಾರಣೆಯಾಗಲಿ ಎಂದು ಹಾರೈಸಿ ಹುತ್ತಕ್ಕೆ ಹಾಲೇರೆಯುವ ಹಬ್ಬ ನಾಗರ ಪÀಂಚಮಿಯಾಗಿದೆ. ನಗರದ ಪ್ರಸಿದ್ಧ ನಾಗದೇವತೆಯ ದೇವಸ್ಥಾನಗಳಾದ ರೈಲ್ವೆ ಕಾಲೋನಿ, ಶ್ರೀ ಜಗದಂಭಾ ದೇವಸ್ಥಾನ, ಹನುಮಾನ ನಗರದ, ಶ್ರೀ ಶರಣಬಸವೇಶ್ವ ದೇವಸ್ಥಾನದಲ್ಲಿ ಹಾಗೂ ತಾಲೂಕಿನ ವಿವಿಧ ಕಡೆಯಲ್ಲಿ ಈ ವರ್ಷ ಅತ್ಯಂತ ಶ್ರದ್ಧಾ ಭಕ್ತಿಯಿಂದ ಸಾಲಾಗಿ ದರುಶನ ಮಾಡಿದರು. ಮಹಿಯರು ತಮ್ಮ ಮಕ್ಕಳೊಂದಿಗೆ ನೈವಿದ್ಯ ತಂದು ನಾಗದೇವತೆಗೆ ಪೂಜೆ ಸಲ್ಲಿಸಿ ನೈವಿದ್ಯ ಅರ್ಪಿಸುವ ಮೂಲಕ ಶ್ರದ್ದಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ ಮಾಡಲಾಯಿತು. ಇದೇ ಸಂದರ್ಭಲ್ಲಿ ತಾಲೂಕಿನಲ್ಲಿ ಮಹಿಳೆಯರು ಜೋಕಾಲಿ, ಪುರುಷರು ಜಿದಾಜಿದ್ದಿನ ಆಟಗಳನ್ನು ಆಡುವ ಮೂಲಕ, ಹೆಣ್ಣು ಹುಡುಗಿಯರಿಗೆ ಹೊಸ ಬಟ್ಟೆಗಳನ್ನು ಧರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಸಂಭ್ರಮ ಸಡಗರದಿಂದ ನಾಗರ ಪಂಚಮಿ ಹಬ್ಬ ಆಚರಣೆ ಮಾಡಿದರು.