ಸಮೂಹ ಚಿತ್ರ ಪ್ರದರ್ಶನ 17 ರಿಂದ

ಕಲಬುರಗಿ,ಜ.14-ಎ.ಎ.ಅಲಮೇಲಕರ (1920-2020) ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಇಂಡಿಯನ್ ರಾಯಲ್ ಅಕಾಡೆಮಿ ಕಲೆ ಮತ್ತು ಸಂಸ್ಕ್ರತಿ ವತಿಯಿಂದ ಭರವಸೆಯ ಹೊಸ ಕಿರಣ
20 ಕಲಾವಿದರಿಂದ ಚಿತ್ರಕಲಾ, ಛಾಯಾಚಿತ್ರ, ವ್ಯಂಗ್ಯ ಚಿತ್ರ ಸಮೂಹ ಪ್ರದರ್ಶನ ಓಂ ನಗರದ ಎಂ. ಬಿ. ಲೋಹಾರ ಆರ್ಟ ಗ್ಯಾಲರಿಯಲ್ಲಿ ಜ. 17 ರಂದು ಏರ್ಪಡಿಸಲಾಗಿದೆ.
ಹಿರಿಯ ಪತ್ರಕರ್ತ ಎಸ್.ಆರ್. ಮಣ್ಣೂರ ಅವರು ಮುಂಜಾನೆ 11 ಗಂಟೆಗೆ ಚಿತ್ರ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಎಚ್. ಬಂಟನೂರ ಅವರು ಮುಖ್ಯ ಅತಿಥಿಗಳಾಗಿ ಅಗಮಿಸಲಿದ್ದಾರೆ.
ಇಂಡಿಯನ್ ರಾಯಲ್ ಅಕಾಡೆಮಿ ಕಲೆ ಮತ್ತು ಸಂಸ್ಕ್ರತಿ ಅಧ್ಯಕ್ಷ ಡಾ ರೆಹಮಾನ ಪಟೇಲ್, ಕಾಂಪೆಕ್ಟ್ ಇಂಟೀರಿಯರ್ ಫರನೀಚರ್ ಆಯಿಂಡ್ ಡೆಕಾರೆಟರ್ಸ್ ಮಾಲೀಕರಾದ ಇಮರಾನ್ ಖಾಲೀಕ್ ಉಪಸ್ಥಿತರಿರುವರು.
ಭಾಗವಹಿಸುವ ಕಲಾವಿದರು
ಕಲಾವಿದರಾದ ಸುಬ್ಬಯ್ಯಾ ಎಂ. ನೀಲಾ, ಮಹ್ಮದ ಅಯಾಜುದ್ದೀನ್ ಪಟೇಲ್, ಹಾಜಿ ಮಲ್ಲಂಗ್, ನಾರಾಯಣ.ಎಂ. ಜೋಶಿ, ರೆಹಮಾನ್ ಪಟೇಲ್, ರಾಮಗಿರಿ.ಪಿ. ಪೋಲಿಸ ಪಾಟೀಲ, ಎಂ. ಸಂಜೀವ, ಜಿತೇಂದ್ರ ಕೋಥಳಿಕರ, ನಾಗರಾಜ ಕುಲಕರ್ಣಿ, ಅಣ್ಣಾರಾಯ ಹಂಗರಗಿ, ಸಂತೋಷ್ ರಾಠೋಡ, ಗಿರೀಶ ಕುಲಕರ್ಣಿ, ಅವಿನಾಷ್ ಎಸ್. ತುಮಕಾರ, ಸುನೀಲ ಲೋಹಾರ, ನಾಗರಾಜ ಕುಂಬಾರ, ನಿಂಗಣ್ಣಗೌಡ ಸಿ.ಪಾಟೀಲ, ಶಾಹೀದ್ ಪಾಶಾ, ಖಾಜಾ ಪಟೇಲ್, ರೇವಣ್ಣ ಸಿದ್ದಪ್ಪಾ ಹೊಟ್ಟಿ, ಮಹೇಶ ವಾರದ ಅವರು ಭಾಗವಹಿಸಲಿದ್ದಾರೆ.
ಸಮೂಹ ಪ್ರದರ್ಶನ ಜನೆವರಿ 17 ರಿಂದ 19 ರವರೆಗೆ ಮುಂಜಾನೆ 11:30 ರಿಂದ ಸಂಜೆ 5:30 ರವರೆಗೆ ನಡೆಯಲಿದ್ದು, ಕಲಾ ಆಸಕ್ತರು, ಕಲಾ ಪೋಷಕರು, ಸಾರ್ವಜನಿಕರು ವೀಕ್ಷಿಸಬಹುದು ಎಂದು ಚಿತ್ರಕಲಾವಿದ ಮತ್ತು ಛಾಯಾಚಿತ್ರಕಾರ ನಾರಾಯಣ.ಎಂ. ಜೋಶಿ ಅವರು ತಿಳಿಸಿದ್ದಾರೆ.