ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರ ರಕ್ಷಣೆ

ಉಡುಪಿ, ನ.೧೦- ಮಲ್ಪೆ ಕಡಲತೀರದಲ್ಲಿ ಮುಳುಗುತ್ತಿದ್ದ ಬೆಂಗಳೂರು ಮೂಲದ ಮೂವರನ್ನು ರಕ್ಷಿಸಿದ ಘಟನೆ ನಿನ್ನೆ ನಡೆದಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  

ನಿನ್ನೆ ಬೆಳಗ್ಗೆ ಬೆಂಗಳೂರಿನ 10 ಜನ ಪ್ರವಾಸಿಗರು ಮಲ್ಪೆಯ ಕಡಲತೀರಕ್ಕೆ ಆಗಮಿಸಿದ್ದರು. ಈ ಪೈಕಿ ಐದಾರು ಜನ ನೀರಿಗಿಳಿದು ಮೋಜು ಮಸ್ತಿಯಲ್ಲಿ ತೊಡಗಿದ್ದರು. ಮೊದಲು ಯುವತಿಯೊಬ್ಬರು ನೀರಿನಲ್ಲಿ ಮುಳುಗಿದ್ದರು. ಆಕೆಯ ರಕ್ಷಣೆಗೆ ಇನ್ನಿಬ್ಬರು ನೀರಿಗೆ ಹಾರಿದ್ದಾರೆ. ಈ ವೇಳೆ ಮೂವರು ಕೂಡ ಅಪಾಯಕ್ಕೆ ಸಿಲುಕಿದ್ದರು. ದಡದಲ್ಲಿ ಇದ್ದ ವರು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ ಸಮುದ್ರ ತೀರದಿಂದ ಸುಮಾರು 20 ಮೀಟರ್ ದೂರದಲ್ಲಿ ಮುಳುಗುತ್ತಿದ್ದ ಅವರನ್ನು ರಕ್ಷಿಸಲು ಜೆಟ್ ಸ್ಕೀ ಮತ್ತು ಪ್ರವಾಸಿ ದೋಣಿಯ ಚಾಲಕರು ಬಂದಿದ್ದಾರೆ. ಜೆಟ್ಸ್ಕಿ ಬೋಟ್ ನ ಮೂಲಕ ಮೊದಲು ರಕ್ಷಣೆ ಮಾಡಿ ಪ್ರವಾಸಿಗರು ಸೈಂಟ್ ಮೇರಿಸ್ ತೆರಳುವ ದೋಣಿಗೆ ಹಾಕಿದ್ದಾರೆ. ಈ ಮೂಲಕ ಅಪಾಯದಲ್ಲಿದ್ದ ಮೂವರನ್ನೂ ರಕ್ಷಣೆ ಮಾಡಲಾಯ್ತು. ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪ್ರತಿದಿನ 11:36 ಸುಮಾರಿನಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ವಿಪರೀತವಾಗಿ ಕಡಲು ಪ್ರಕ್ಷುಬ್ಧ ಇರುತ್ತದೆ. ಈ ಸಂದರ್ಭ ಪ್ರವಾಸಿಗರು ಕಡಲಿಗೆ ಇಳಿಯಬಾರದು ಅಂತ ಎಷ್ಟು ಹೇಳಿದರೂ ಕೂಡ ಮಾತನ್ನು ಧಿಕ್ಕರಿಸಿ ಪ್ರವಾಸಿಗರು ನೀರಿಗಿಳಿಯುತ್ತಾರೆ.

ಸ್ವಿಮ್ಮಿಂಗ್ ಪೂಲ್, ನದಿಯಲ್ಲಿ ಈಜಲು ಕಲಿತವರು ಸಮುದ್ರಕ್ಕೆ ತಿಳಿದು ಈಜುತ್ತವೆ ಎಂದು ಅಂದುಕೊಂಡಿದ್ದರೆ ಅದು ಮೂರ್ಖತನ.

ವಿಠಲ ಕಾಂಚನ್, ಸ್ಥಳೀಯ ಮೀನುಗಾರ