ಸಮುದಾಯ ಭವನ ನಿರ್ಮಾಣಕ್ಕೆ ವಿರೋಧ: ಗೊಂದಲದ ವಾತಾವರಣ ನಿರ್ಮಾಣ

ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.19:ನಗರದ ಇಕ್ಲಾಸಖಾನ್ ಮಸೀದಿ ಬಳಿಯ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಸಮುದಾಯ ಭವನ ನಿರ್ಮಾಣಕ್ಕೆ
ಮುಸ್ಲಿಂ ಸಮುದಾಯದವರು ಈ ಜಾಗೆಯಲ್ಲಿ
ಸಮುದಾಯ ಭವನ ನಿರ್ಮಾಣ ಮಾಡಬಾರದೆಂದು ವಿರೋಧ ವ್ಯಕ್ತಪಡಿಸಿದರು.
ಮಸೀದೆ ಭಾರತೀಯ ಪುರಾತತ್ವ ಇಲಾಖಾ ವ್ಯಾಪ್ತಿಯ ಸಂರಕ್ಷಿತ ವಲಯದಲ್ಲಿರುವುದರಿಂದ ಈ ಜಾಗೆಯಲ್ಲಿ
ಸಮುದಾಯ ಭವನ ನಿರ್ಮಾಣ ಮಾಡುತ್ತೇವೆಂದು ದಲಿತ ಪರ ಸಂಘಟನೆ ಹಾಗೂ ಜನರು ಒತ್ತಾಯಿಸಿದರು.
ಆಗ ಸ್ಥಳದಲ್ಲಿ ಎರಡೂ ಸಮುದಾಯದ ಮುಖಂಡರು, ಯುವಕರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದರು. ಇದರಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಗೋಳ ಗುಮ್ಮಟ ಪೆÇಲೀಸ್ ಠಾಣೆಯ ಸಿಪಿಐ ಮಹಾಂತೇಶ ಮಠಪತಿ ಹಾಗೂ ಇತರ ಸಿಬ್ಬಂದಿ ಆಗಮಿಸಿದರು.
ಸ್ಥಳದಲ್ಲಿ ಜಮಾಯಿಸಿದ್ದವರನ್ನು ಪೆÇಲೀಸರು ಚದುರಿಸಿ
ಸೂಕ್ತ ದಾಖಲಾತಿಗಳನ್ನು ತರಲು ಉಭಯ ಸಮುದಾಯದ ಮುಖಂಡರಿಗೆ, ಜನರಿಗೆ ಪೆÇಲೀಸರು ಸೂಚಿಸಿದರು.
ಬಳಿಕ ಎರಡೂ ಸಮಾಜದ ಜನರಿಗೆ ಸಮಾಧಾನಪಡಿಸಿದ ಪೆÇಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಗೋಳ ಗುಮ್ಮಟ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.