ಸಮುದಾಯ ಭವನ ನಿರ್ಮಾಣಕ್ಕೆ ಜಮೀನು ಮಂಜೂರಾತಿಗೆ ಮನವಿ

ರಾಯಚೂರು, ಫೆ.೨೭- ನಗರ ಹೋಬಳಿ ಮತ್ತು ಸೀಮಾಂತರ ವ್ಯಾಪ್ತಿಯ ಸರ್ವೆನಂ ೧೦೫, ೧ ರಲ್ಲಿ ಬರುವ ವಿಸ್ತೀರ್ಣ ೦೧ ಗುಂಟೆ ಜಮೀನನ್ನು ದರ್ವೇಶ್ ಅಲೆಮಾರಿ ಜನತೆಯ ಸಮುದಾಯ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಬೇಕೆಂದು ಕರ್ನಾಟಕ ರಾಜ್ಯ ದರ್ವೇಶ್ ಅಲೆಮಾರಿಗಳ ಕ್ಷೇಮಾಭಿವೃದ್ಧಿ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ದರ್ವೇಶ್ ಅಲೆಮಾರಿ ಸಮುದಾಯದ ಜನರು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದಾರೆ. ಸಮುದಾಯದವರು ಆರ್ಥಿಕ ಪರಿಸ್ಥಿತಿಯಿಂದ ತೀರಾ ಕಡುಬಡವರಾಗಿದ್ದು ಹಾಗೂ ಸಮುದಾಯದವರಿಗೆ ಯಾವದೇ ಕಾಯಕ್ರಮಗಳು ಮತ್ತು ವಿವಾಹ ಮಾಡಿಕೊಳ್ಳಲು ಭವನ ಇರುವುದಿಲ್ಲ. ಇದರಿಂದ ಕಾರ್ಯಕ್ರಮಗಳು ಮಾಡಿಕೊಳ್ಳುವದಕ್ಕೆ ತೊಂದರೆಯಾಗಿರುತ್ತದೆ ಎಂದು ಮನವಿ ಮಾಡಿದರು.
ನಗರದ ಹೋಬಳಿ, ಹಾಗೂ ಸೀಮಾಂತರದ ಸರ್ವೆನಂ ೧೦೫, ೧ ವಿಸ್ತೀರ್ಣ ೦೧ ಗುಂಟೆ ಜಮೀನು ಖಾಲಿ ಇದ್ದು ಈ ಜಮೀನನ್ನು ನಮ್ಮ ಜನರಿಗೆ ಸಮುದಾಯಭವನಕ್ಕಾಗಿ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹ್ಮದ್ ಅಲಿ, ಮೌಲಾ ಸಾಬ
ಜಮಾಲ್ ಸಾಬ್,ಚಂದ್ ಪಾಷ ಮಹ್ಮದ್ ಹುಸೇನ್ ಸೇರಿದಂತೆ ಉಪಸ್ಥಿತರಿದ್ದರು.