
ರಾಯಚೂರು,ಮಾ.೦೬- ಗಾಣಿಗ ಸಮುದಾಯ ಭವನ ನಿರ್ಮಾಣಕ್ಕೆ ೧೫ ಲಕ್ಷ ರೂ. ಅನುದಾನ ನೀಡುವುದಾಗಿ ಶಾಸಕ ಡಾ. ಶಿವರಾಜ ಪಾಟೀಲ್ ಹೇಳಿದರು.
ರವಿವಾರ ನಗರದ ವಿದ್ಯಾನಗರದ ಈಶ್ವರ ದೇವಸ್ಥಾನದಲ್ಲಿ ರಾಯಚೂರು ತಾಲೂಕ ಗಾಣಿಗ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದ ಅಮರಾವತಿ ಬಡಾವಣೆಯಲ್ಲಿ ಸಮಾಜದವರಿಗೆ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೀಡಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ೧೫ ಲಕ್ಷ ರೂ. ಅನುದಾನ ನೀಡುವುದಾಗಿ ಹೇಳಿದರು.
ಭಾರತದ ಸಂಸ್ಕೃತಿ ಇತಿಹಾಸದಲ್ಲಿ ಪರಂಪರೆ ಕಲಿಯುಗದಲ್ಲಿ ಗಾಣಿಗ ಸಮುದಾಯದವರು ದೇಶದ ಅಭಿವೃದ್ದಿಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಸಮಾಜದ ಸಂಘಟನೆ ಇಲ್ಲದಿದ್ದರೆ ಯಾರು ಕೇಳುವುದಿಲ್ಲ. ಸಮಾಜದ ಅಭಿವೃದ್ದಿಗಾಗಿ ಸರ್ಕಾರ ನಿಗಮ ಮಂಡಳಿ ಸ್ಥಾಪಿಸಿದ್ದು, ನಾವೇಲ್ಲರೂ ಸೇರಿ ವೀರಶೈವ ಸಮಾಜದ ಅಭಿವೃದ್ದಿಗೆ ಶ್ರಮಿಸೋಣ. ವೀರಶೈವ ಸಮಾಜ ಆಲದ ಮರವಿದ್ದಂತೆ. ನಾವೇಲ್ಲರೂ ಅದರ ಬೇರುಗಳು. ಅಂದರೆ ವೀರಶೈವ ಸಮಾಜದ ಒಳಪಂಗಡಗಳಾಗಿವೆ.
ಸರ್ಕಾರ ಶೈPಣಿಕ ಪ್ರಗತಿಗೆ ಸಾಕಷ್ಟು ಹಣ ವೆಚ್ಚ ಮಾಡಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದರ ಫಲ ವಿದ್ಯಾರ್ಥಿಗಳಿಗೆ ಮುಟ್ಟಬೇಕಾದರೆ ಶಿPಕರು, ಪಾಲಕ-ಪೋಷಕ ವರ್ಗದವರ ಜೊತೆಗೆ ಸಮಾಜದವರು ಸಕ್ರಿಯ ಭಾಗವಹಿಸುವಿಕೆ, ಸಹಕಾರ ಅವಶ್ಯಕವಾಗಿದೆ. ಪ್ರತಿಯೊಂದು ಮಗುವಿನಲ್ಲಿ ಒಂದು ಪ್ರತಿಭೆ ಹುದುಗಿದ್ದು, ಅದನ್ನು ಗುರ್ತಿಸಿ, ಬೆಳೆಸುವ ಕಾರ್ಯವಾಗಬೇಕು.
ಜಗದ ಎ ರೋಗ ರುಜುನಗಳಿಗೆ ಶಿPಣವೇ ಮದ್ದು. ಸಮಯ ಮತ್ತು ಅವಕಾಶ ಬದುಕಿನಲ್ಲಿ ಅಮೂಲ್ಯವಾದದ್ದು. ಓದುವ ಸಮಯ, ಸಾಧಿಸುವ ಅವಕಾಶ ಸದಾ ಬದುಕಿನಲ್ಲಿ ಸಿಗುವುದಿಲ್ಲ. ಸಿಗುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ಜೀವನದಲ್ಲಿ ಏನೇ ಸಾಧನೆ ಸಾಧ್ಯವಾಗುತ್ತದೆ ಎಂದಾದರೇ ಅದು ನಮ್ಮ ಓದಿನ ಹಪಹಪಿಯಿಂದ ಮಾತ್ರ. ಹಿಂದೆ ಯಾಗಗಳ ಮೂಲಕ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸಲಾಗುತ್ತಿತ್ತು.
ಇಂದು ವಿದ್ಯೆಯ ಮೂಲಕ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಯಾಗ ನಡೆಯುತ್ತಿದೆ. ಸ್ವಾಭಿಮಾನದ ಬದುಕು ನಡೆಸಲು ಗಾಣಿಗ ಸಮುದಾಯ ಕುಲಕಸುಬುದಾರರ ಉದ್ಯೋಗವನ್ನು ಉನ್ನತೀಕರಿಸಲು ಕಾಯಕ ಯೋಜನೆಯನ್ನು ರೂಪಿಸಲಾಗಿದೆ. ದುಡಿಯುವ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಜಾತಿ ಮತ ಬೇಧವಿಲ್ಲದೇ ಜನಸಮುದಾಯಕ್ಕೆ ಒಳಿತಾಗುವಂತಹ ಕಾರ್ಯಕ್ರಮಗಳು, ಸಮುದಾಯ ಅಭಿವೃದ್ಧಿಗೊಳಿಸುವ ಕಲ್ಪನೆಯನ್ನು ಸಾಧ್ಯವಾಗಿಸಿzರೆ ಎಂದು ಹೇಳಿದರು.
ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಮಾತನಾಡಿ, ಗಾಣಿಗ ಸಮಾಜವು ದೇಶಕ್ಕೆ ಉತ್ತಮ ನಾಯಕರನ್ನು ನೀಡಿದೆ. ವಿಶ್ವಕ್ಕೆ ದೀಪ ಬೆಳಗಲು ಎಣ್ಣಿ ನೀಡುವ ಸಮಾಜವು ಚಂದ್ರಗುಪ್ತ ಮೌರ್ಯ, ಮಹಾತ್ಮಾಗಾಂಧಿ ಸೇರಿದಂತೆ ದೇಶವನ್ನು ವಿಶ್ವ ಗುರು ಸ್ಥಾನಕ್ಕೇರಿಸಿದ ಪ್ರಧಾನ ನರೇಂದ್ರ ಮೋದಿ ಅವರು ಗಾಣಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆಂದು ಹೇಳಲು ಸಂತೋಷವಾಗುತ್ತದೆ.
ಇಂತಹ ಸಮುದಾಯದ ಕುಲಕಸುಬು ಅವನತಿಯತ್ತ ಸಾಗಿದೆ. ಇದನ್ನರಿತ ರಾಜ್ಯ ಸರ್ಕಾರವು ಇತ್ತೀಚಿಗೆ ಗಾಣಿಗ ಅಭಿವೃದ್ದಿ ನಿಗಮ ಸ್ಥಾಪಿಸುವ ಮೂಲಕ ಸಮಾಜದ ಅಭಿವೃದ್ದಿಗೆ ಮುಂದಾಗಿದೆ ಎಮದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಗಾಣಿಗ ಸಮಾಜದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ರಾಜ್ಯ ಕಾರ್ಯಾಧ್ಯಕ್ಷ ಅಮರಗುಂಡಪ್ಪ ಮೇಟಿ ಮಾತನಾಡಿ, ಸಮಾಜದ ಸಂಘಟನೆಗೆ ಎಲ್ಲರೂ ಶ್ರಮಿಸಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳನ್ನು ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳ ಹಾಗೂ ಉಡಮಗಲ್ಲ ಶ್ರೀ ವೀರಸಂಗಮೇಶ್ವರ ಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರವನ್ನು ರಾವುತರಾವ್ ಬರೂರು, ಮಹಾದೇವ ಪಾಟೀಲ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು, ರಾಯಚೂರು ನಗರಸಭೆ ಅಧ್ಯಕ್ಷೆ ಲಲಿತಾ ಅಂಜನೇಯ್ಯ ಕಡಗೋಳ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ತಿಮ್ಮಪ್ಪ ನಾಡಗೌಡ, ನಗರಸಭೆ ಮಾಜಿ ಅಧ್ಯಕ್ಷ ಈ ವಿನಕುಮಾರ, ಆರ್‌ಡಿಎ ಮಾಜಿ ಅಧ್ಯಕ್ಷ ವೈ. ಗೋಪಾಲಕೃಷ್ಣ, ತಾಲೂಕ ಗಾಣಿಗ ಸಮಾಜದ ಅಧ್ಯಕ್ಷ ಬಸಪ್ಪ ಹಳ್ಳಿ, ಜಿಲ್ಲಾಧ್ಯಕ್ಷ ಚನ್ನಪ್ಪ ಸಜ್ಜನ್, ಶ್ರೀಮತಿ ಶಕುಂತಲಾ ಅಣ್ಣಾರಾವ್ ಪಾಟೀಲ್, ಶ್ರೀ ಮತಿ ಲಕ್ಷ್ಮಿಬಾಯಿ ರಕ್ಕಸಗಿ, ಶಶಿರಾಜ ಮಸ್ಕಿ, ಪರ್ವತ ರೆಡ್ಡಿ ಹತ್ತಿಗುಡ್ಡ, ಅಣ್ಣಾರಾವ್ ಪಾಟೀಲ್, ವಿಜಯಗುಮಾರ ಸಜ್ಜನ, ನಾಗರಾಜಗೌಡ ಉಡಮಗಲ್ಲ, ಉದಯಕುಮಾರ ಉಡಮಗಲ್, ಚಂದ್ರಶೇಖರ ಸಜ್ಜನ್ ಕಲಮಲ, ಅಮರೇಗೌಡ ಪಾಟೀಲ್ ಶಕ್ತಿನಗರ, ಮಲ್ಲೇಶ ಗಾಣಗೇರ ಗೋಡಿಹಾಳ, ರವಿಕುಮಾರ ಗೋಡಿಹಾಳ, ಜಿ. ಮಲ್ಲಿಕಾರ್ಜುನ ಖಾನಾಪೂರು, ಬಸವರಾಜ ಮೂಲಿಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.