ಸಮುದಾಯ ಆರೋಗ್ಯ ಕೇಂದ್ರ, ಪಶುಆಸ್ಪತ್ರೆ ಮಂಜೂರಿಗಾಗಿ ಶಾಸಕರಲ್ಲಿ ಬಣವಿಕಲ್ಲು ಗ್ರಾಮಸ್ಥರ ಮನವಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ನ.25 :- ತಾಲೂಕಿನ ಹೆದ್ದಾರಿ 50 ಹಾದುಹೋಗಿರುವ ಬಣವಿಕಲ್ಲು ಗ್ರಾಮದಲ್ಲಿ ಮುಖ್ಯವಾಗಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆ ಹಾಗೂ ಪೊಲೀಸ್ ಉಪಠಾಣೆ ಮಂಜೂರು ಮಾಡಿಕೊಡುವಂತೆ ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಬಣವಿಕಲ್ಲು ಗ್ರಾಮದ ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಗುರುವಾರ ಮನವಿ ಸಲ್ಲಿಸಿದ್ದಾರೆ.
ಗ್ರಾಮಕ್ಕೆ ಹೊಂದಿಕೊಂಡಿರುವ ಹಳ್ಳಿಗಳಾದ ಎಂ ಬಿ ಅಯ್ಯನಹಳ್ಳಿ, ಉಲ್ಲಾನಹಳ್ಳಿ, ಚಿಕ್ಕೋಬನಹಳ್ಳಿ, ಕಂಚೊಬನಹಳ್ಳಿ, ಮಾಡ್ಲಾಕನಹಳ್ಳಿ ಕಡಾಕೊಳ್ಳಾ, ನೆಲಬೊಮ್ಮನಹಳ್ಳಿ ಸೂಲದಹಳ್ಳಿ ಅಗ್ರಹಾರ, ಗುಣಸಾಗರ, ಅಮಲಾಪುರ, ಕ್ಯಾಸನಕೆರೆ, ಸಿದ್ಧಯ್ಯನಹಟ್ಟಿ ಐಗಳಮಲ್ಲಾಪುರದ ಗ್ರಾಮಗಳಲ್ಲಿ ಹೆಚ್ಚಿನ ಬಡರೈತರು ಇದ್ದು  ಈಭಾಗದ ಜನತೆಗೆ  ಆರೋಗ್ಯದಲ್ಲಿ  ವ್ಯತ್ಯಾಸ ಕಂಡುಬಂದಿಲ್ಲಿ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದರೆ 18ಕಿಮೀ ದೂರದ ಕೂಡ್ಲಿಗಿಗೆ ಅಥವಾ 22ಕಿಮೀ ದೂರದ ಬೆಳ್ಳಗಟ್ಟ ಗ್ರಾಮಕ್ಕೆ ತೆರಳಬೇಕಾಗಿರುತ್ತದೆ ಆದರೆ ಬಸ್ಸಿನ ಸಂಚಾರ ವ್ಯವಸ್ಥೆ ಸಹ ಸರಿಯಾಗಿಲ್ಲದ ಕಾರಣ ಹಾಗೂ ಹೈವೇ ಪಕ್ಕದಲ್ಲಿರುವುದರಿಂದ ಅಪಘಾತ ಹೆಚ್ಚಾಗಿ ಸಂಭವಿಸುವ ಕಾರಣದಿಂದಾಗಿ ಬಣವಿಕಲ್ಲು ಗ್ರಾಮದಲ್ಲೇ ಸಮುದಾಯ ಆರೋಗ್ಯ ಕೇಂದ್ರ ತೆರೆದರೆ ಅನೇಕ ಜನರ ಪ್ರಾಣರಕ್ಷಣೆ ಮಾಡಬಹುದಾಗಿದೆ ಅಲ್ಲದೆ ಇಲ್ಲಿಯೇ ಉಪಠಾಣೆ ಮಾಡುವುದರಿಂದ ಅನೇಕ ಕ್ರೈಮ್ ಗಳೂ ಸಹ ನಿಯಂತ್ರಣವಾಗಬಲ್ಲದು ಹಾಗೂ ಜಾನುವಾರಗಳ ಸುರಕ್ಷಿತತೆ ಕಾಪಾಡುವಲ್ಲಿ ಮುಂಜಾಗ್ರತೆ ವಹಿಸಿ ಗುರುವಾರ  ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಣವಿಕಲ್ಲು ಗ್ರಾಮದ ಸದಸ್ಯರಾದ ಬಿ ಎಸ್ ಶರಣಪ್ಪ, ಜಿ.ಚೌಡೇಶ, ಬಿ ಎಸ್ ಪ್ರಶಾಂತಕುಮಾರ್, ಮಂಜುನಾಥ, ದುರುಗಪ್ಪ ಸೇರಿದಂತೆ  ಗ್ರಾಮಸ್ಥರು ಉಪಸ್ಥಿತರಿದ್ದರು.