ಸಮುದಾಯ ಅರೋಗ್ಯ ಕೇಂದ್ರಕ್ಕೆ ಶಾಸಕರು ಭೇಟಿ

ಕಾರಟಗಿ: ಏ 01: ಕನಕಗಿರಿ ಶಾಸಕ ಬಸವರಾಜ ದಡೇಸೂಗೂರ ಇಂದು ನಗರದ ಸಮುದಾಯ ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಮಾಹಿತಿ ಪಡೆದುಕೊಂಡರು,
ದೇಶಾದ್ಯಂತ ಕೋವಿಡ್ -19 ಎರಡನೇ ಅಲೆ ಹರಡುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು, ಕೊರೋನ ಹಾವಳಿ ಎಚ್ಚಗಿದ್ದರಿಂದ ಸ್ಥಳೀಯ ಸೊಂಕಿತರಿಗೆ ಯಾವುದೆ ರೀತಿ ತೊಂದರೆ ಆಗದ ರೀತಿಯಲ್ಲಿ ಮುಂದಿನ ಸುರಕ್ಷತಾ ಕ್ರಮವನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಸಮುದಾಯ ಅರೋಗ್ಯ ಕೇಂದ್ರ ದಲ್ಲಿ ಬೆಡ್ ಕೊರೆತೆ ಇದ್ದರೆ ತಿಳಿಸಿ ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದು ಸರಿ ಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು,
ಈ ಸಂಧರ್ಭದಲ್ಲಿ ಸಮುದಾಯ ಅರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ: ಶಕುಂತಲಾ ಪಾಟೀಲ್ ಸೊಂಕೀತರ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು,
ತಹಸೀಲ್ದಾರ್ ಶಿವ ಶಂಕರಪ್ಪ ಕೊಟ್ಟೋಳ್ಳಿ. ಪುರಸಭೆ ಮುಖ್ಯಾಧೀಕಾರಿ ರಡ್ಡಿರಾಯನಗೌಡ. ಪಿಎಸ್ಐ ಎಲ್ ಬಿ ಅಗ್ನಿ. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಧಿಕಾರಿ ಚಂದ್ರಶೇಖರ್. ಮುಖಂಡರಾದ ವಿರೇಶ್ ಸಾಲೋಣಿ. ಶರಣಪ್ಪ ಗದ್ದಿ. ರುದ್ರಗೌಡ ನಂದಿಹಳ್ಳಿ ಸೇರಿದಂತೆ ಪುರಸಭೆ. ಗ್ರಾಮೀಣಾಭಿವೃದ್ಧಿ ಮತ್ತು ಇತರೆ ಇಲಾಖೆ ಅಧಿಕಾರಿಗಳು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು,