ಸಮುದಾಯವ ಭವನ ನಿರ್ಮಾಣಕ್ಕೆ ಭೂಮಿ ಪೂಜೆ


ಬೈಲಹೊಂಗಲ,ಫೆ.13: ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ ನಾಯಕತ್ವದಿಂದ ಸದೃಢ ಮತ್ತು ಸಶಕ್ತ ಭಾರತ ನಿರ್ಮಾಣ ಸಾಧ್ಯವಾಗುತ್ತಿದೆ. ದೇಶದ ಕೋಟ್ಯಂತರ ಜನರಲ್ಲಿ ಸುರಕ್ಷತೆ ಮತ್ತು ಸಮೃದ್ಧತೆಯ ಭಾವ ಮೂಡಿದೆ ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಮೂರನೇ ಬಾರಿ ಬಿಜೆಪಿಗೆ ಅಧಿಕಾರ ನೀಡಲು ತೀರ್ಮಾನಿಸಿದ್ದಾರೆ ಎಂದು ಸಂಸದೆ ಮಂಗಲಾ ಅಂಗಡಿ ಆತ್ಮವಿಶ್ವಾಸ ವ್ಯಕ್ತ ಪಡಿಸಿದರು.
ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಪೇಟೆ ಹನುಮಂತ ದೇವರ ದೇವಸ್ಥಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹಾಗೂ ಗ್ರಾಮದ ಪ್ರಮುಖರಾದ ನಿಂಗಪ್ಪ ಚೌಡಣ್ಣವರ, ಶಂಕ್ರೆಪ್ಪ ಚೌಡಣ್ಣವರ, ರಾಚಯ್ಯ ಹಿರೇಮಠ, ವೀರೇಂದ್ರ ಸಂಗೊಳ್ಳಿ, ಗಿರೀಶ ಧಾರವಾಡ, ಬಸವಂತ ಜಮನೂರ, ಉದಯ ಕೊಟಬಾಗಿ, ನೀಲಕಂಠ ಲಿಂಗದಳ್ಳಿ, ವಿಠ್ಠಲ ಗಾಬಿ, ನಿಂಗಪ್ಪ ಗುಂಡಗೈ, ಬಸಪ್ಪ ಕಡದೊಳ್ಳಿ, ಬಸವರಾಜ ಧಾರವಾಡ, ಈರಪ್ಪ ಕೋಟಗಿ, ಸತೀಶ ಧಾರವಾಡ, ಗದಿಗೆಪ್ಪ ಶಿವಧೂತನವರ, ಚನ್ನಬಸಯ್ಯ ಚರಂತಿಮಠ ಸೇರಿದಂತೆ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.