ಸಮುದಾಯದವರು ಎಲ್ಲಾ ರಂಗದಲ್ಲಿ ಮುಂದೆ ಬಂದರೆ ಪ್ರಗತಿಸಾಧ್ಯ: ಶ್ರೀನಿವಾಸಶೆಟ್ಟಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ,12- ಸಮುದಾಯದವರು ಎಲ್ಲಾ ರಂಗಗಳಲ್ಲಿ ಮುಂದೆ ಬಂದಾಗ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ ಎಂದು ದಾಸಬಣಜಿಗರ ಸಂಘದ ಗೌರವಾಧ್ಯಕ್ಷ ಸಿ.ವಿ.ಶ್ರೀನಿವಾಸ ಶೆಟ್ಟಿ ಅಭಿಪ್ರಾಯ ಪಟ್ಟರು.
ನಗರದ ಚಿಕ್ಕಂಗಡಿ ಬೀದಿಯ ಶ್ರೀ ಸೀತಾ ರಾಮಮಂದಿರದಲ್ಲಿ ನಡೆದ ದಾಸ ಬಣಜಿಗರ ಸಂಘದ 17 ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮುದಾಯದ ಬೆಳವಣಿಗೆಗೆ ಎಲ್ಲರೂ ಒತ್ತಾಸೆಯಾಗಿ ನಿಲ್ಲಬೇಕು. ಈ ಮೊದಲು ವಿದ್ಯಾವಂತರ ಸಂಖ್ಯೆ ವಿರಳವಾಗಿತ್ತು. ಆದರೀಗ ಸಮಾಜದಲ್ಲಿ ಬದಲಾವಣೆಯಾಗಿರುವುದನ್ನು ಗಮನಿಸುತ್ತಿದ್ದೇವೆ. ಮಕ್ಕಳು ಶೈಕ್ಷಣಿಕವಾಗಿ ಸಾಧನೆ ಮಾಡುತ್ತಿರುವುದು ಪ್ರಗತಿಯ ಸಂಕೇತ ಎಂದು ಹೇಳಿದರು. ಸಂಘದ ಉನ್ನತಿಗಾಗಿ ಅನೇಕ ಹಿರಿಯರು ಶ್ರಮಿಸಿದ್ದು, ಅದನ್ನು ಉಳಿಸಿಕೊಂಡು ಹೋಗುವ ಹೊಣೆ ನಮ್ಮೆಲ್ಲದ ಮೇಲಿದೆ ಎಂದು ತಿಳಿಸಿದರು.
ಮೈಸೂರಿನ ಅರಗು ಮತ್ತು ಬಣ್ಣ ಕಾರ್ಖಾನೆಯ ಮಾಜಿ ಅಧ್ಯಕ್ಷ ಹೆಚ್.ಆರ್.ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಾಗ ಮಾತ್ರ ಸಮುದಾಯದ ಬೆಳವಣಿಗೆ ಸಾಧ್ಯ ಎಂದು ಹೇಳಿದರು. ನಮ್ಮ ಬದುಕು ಕಟ್ಟಿಕೊಳ್ಳಲು, ಸಮಾಜದಲ್ಲಿ ಗುರುತಿಸಿಕೊಳ್ಳುವುದಕೋಸ್ಕರ ಸಾಧನೆಯ ಬೆನ್ನುಹತ್ತಿ ಹೋಗಬೇಕಿದೆ. ಶ್ರದ್ದೆ, ಆಸಕ್ತಿ, ಶ್ರಮದಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಶಿಕ್ಷಣವನ್ನು ಇಚ್ಛೆ ಮತ್ತು ಆಸಕ್ತಿಯಿಂದ ಓದಬೇಕು ಕಷ್ಟಪಟ್ಟು ಓದಬಾರದು. ಮಕ್ಕಳಲ್ಲಿ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದನ್ನೆ ಕೊಡಿಸಬೇಕು ಎಂದು ಸಲಹೆ ನೀಡಿದರು.
ದಾಸ ಬಣಜಿಗರ ಸಂಘದ ಅಧ್ಯಕ್ಷ ಎನ್.ಶ್ರೀನಿವಾಸಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಎಫ್.ಕೆ.ಸಿ.ಸಿ. ಮಾಜಿ ಅಧ್ಯಕ್ಷ ಆರ್.ಶಿವಕುಮಾರ್, ಮನಶಾಸ್ತ್ರಜ್ಞ ಆರ್.ವೆಂಕಟೇಶ್, ಡಾ,ಟಿ.ಪಿ.ರಮೇಶ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ನಗರದ ಪ್ರಸೂತಿ ವೈದ್ಯರಾದಡಾ. ಮೋನಿಕ, ಮೈಸೂರಿನ ಆಯುರ್ವೇದಿಕ್ ವೈದ್ಯರಾದ ಡಾ.ಪಿ.ಸಹನ ವೈದ್ಯಕೀಯ ವಿದ್ಯಾರ್ಥಿನಿ ಆರ್. ಮೃದುಲ ಅವರನ್ನು ಸನ್ಮಾನಿಸಲಾಯಿತು.
ಗೌರವಾನ್ವಿತ ಆಹ್ವಾನಿತರಾಗಿ ಯಜಮಾನರಾದ ರಂಗರಾಮು, ನಾಡದೇಶ ಶೆಟ್ಟರು ವೈ.ವಿ.ಲೋಕನಾಥ್, ವಿಶೇಷ ಆಹ್ವಾನಿತರಾಗಿ ಡಾ. ಜಿ.ವಿ. ವೆಂಕಟಶೆಟ್ಟಿ, ಡಾ, ಆರ್.ಎಸ್.ನಾಗಾರ್ಜುನ್, ವಕೀಲ ವಿ.ರಂಗರಾಮು ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ವಿಶ್ವನಾಥ್ ಸ್ವಾಗತಿಸಿದರು. ಎನ್.ನಾಗೇಶ್ ನಿರೂಪಿಸಿದರು. ಪದ್ಮ ಪುರುμÉೂತ್ತಮ್ ವಂದಿಸಿದರು.