ಸಮೀಕ್ಷೆ ಸೂಕ್ತ ಸಮಯದಲ್ಲಿ ಮುಗಿಸಲು ಕರೆ- ಕೆ.ಶಿವಪ್ಪ


ಸಂಜೆವಾಣಿ ವಾರ್ತೆ
ಸಂಡೂರು:ಜು: 20: ಜೂನ್ 30 ರೊಳಗೆ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆ ಮುಗಿಸಲು  ಎಲ್ಲಾ ರಈತಿಯ ಪ್ರಯತ್ನವನ್ನು ಆರೋಗ್ಯ ಇಲಾಖೆ ಮಾಡುತ್ತಿದ್ದು ಅದಕ್ಕೆ ಸಾರ್ವಜನಿಕರು ಪೂರ್ಣ ಸಹಕಾರ ನೀಡಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶಿವಪ್ಪ ಕರೆನೀಡಿದರು.
ಅವರು ತಾಲೂಕಿನ ರೈಲ್ವೆ ನಿಲ್ದಾಣ ಗ್ರಾಮದ ಲಂಬಾಣಿ ಕಾಲೋನಿಯಲ್ಲಿ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಮಾತನಾಡಿ ಆರೋಗ್ಯ ಇಲಾಖೆಯು ಜೂನ್ ಮೂವತ್ತರೊಳಗೆ ಸಮೀಕ್ಷೆ ಪೂರ್ಣಗೊಳಿಸಲು ತಿಳಿಸಿದ್ದು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇಲಾಖೆಯ ಪಿ.ಹೆಚ್.ಸಿ.ಒ, ಹೆಚ್.ಐ.ಒ ಹಾಗೂ ಇತರೆ ಸಿಬ್ಬಂದಿಯವರು ಸಮೀಕ್ಷೆ ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ, ಒಂದು ಕುಟುಂಬದ ಮಾಹಿತಿ ತುಂಬಿಸಲು ಕನಿಷ್ಠ 30 ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಗರ್ಭಿಣಿಯರ ಮತ್ತು ಮಕ್ಕಳ ವಿವರ ತುಂಬಿಸಲು ಇನ್ನೂ ಹೆಚ್ಚು ಸಮಯ ಬೇಕಾಗುವುದು, ಗರ್ಭಾವಸ್ಥೆ, ಹೆರಿಗೆ, ಶಿಶು ಲಸಿಕೆಯ ವಿವರ, ಶಾಲೆಗೆ ಸೇರಿರುವ ಮಾಹಿತಿ, ವಯಸ್ಕರ ಬಿ.ಪಿ, ಶುಗರ್, ಇತರೆ ಕಾಯಿಲೆಯ ಮಾಹಿತಿ ಸಹ ದಾಖಲಿಸಬೇಕಿದೆ, ಹಾಗಾಗಿ ಸಮೀಕ್ಷೆ ನಿಧಾನವಾಗಿ ಸಾಗಿದೆ  ಅದ್ದರಿಂದ ಸಾರ್ವಜನಿಕರ ಸಹಕಾತಿ ಅತಿ ಅಗತ್ಯವಾಗಿದೆ ಎಂದು ಸಮೀಕ್ಷೆ ಮೇಲ್ವಿಚಾರಣೆ ಮಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು,ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಆಶಾ ಕಾರ್ಯಕರ್ತೆ ಗೋವಿಂದಮ್ಮ ಸಮೀಕ್ಷೆ ದಾಖಲು ಮಾಡಿದರು,
 ಈ ಸಂದರ್ಭದಲ್ಲಿ ಗ್ರಾಮಸ್ಥರಾದ ತಿಪ್ಪೇಸ್ವಾಮಿ, ಶಕ್ಷಾವಲಿ,ಇಕ್ಬಾಲ್, ರಮಣಮ್ಮ,ವೇದಾವತಿ,ಪಾರ್ವತಿ,ಸಾವಿತ್ರಮ್ಮ,ಕೈರೂನ್ ಬೇಗಂ,ಈರಮ್ಮ ಇತರರು ಸಮೀಕ್ಷೆಗೆ ಸಹಕಾರ ನೀಡಿದರು.