ಸಮಾಸಮಾಜ ನಿರ್ಮಾಣ ಸಿಐಟಿಯು ಉದ್ದೇಶ

ದೇವದುರ್ಗ.ಜೂ.೦೧-ಕಾರ್ಮಿಕರ ಶೋಷಣೆ ತಪ್ಪಿಸುವುದು, ಸಮಾ ಸಮಾಜ ನಿರ್ಮಿಸುವ ಉದ್ದೇಶ ಸಿಐಟಿಯು ಸಂಘಟನೆಯ ಗುರಿ ಎಂದು ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಹೇಳಿದರು.
ತಾಲೂಕಿನ ಜಾಲಹಳ್ಳಿಯಲ್ಲಿ ಸಿಐಟಿಯು ಕಚೇರಿಯಲ್ಲಿ ಆಯೋಜಿಸಿದ್ದ ಸಿಐಟಿಯು ಸಂಘಟನೆಯ ೫೦ನೇ ಸಂಸ್ಥಾಪನಾ ದಿನಾಚರಣೆ ಉದ್ದೇಶಿಸಿ ಭಾನುವಾರ ಮಾತನಾಡಿದರು. ಸಿಐಟಿಯು ಸಂಘಟನೆ ೧೯೭೦ರಲ್ಲಿ ಸ್ಥಾಪನೆಗಿದೆ. ದೇಶದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಮಧ್ಯದಲ್ಲಿ ದೊಡ್ಡ ಸಂಘಟನೆಯಾಗಿದೆ.
ಆಳುವ ಸರ್ಕಾರಗಳು ಬಂಡವಾಳಶಾಹಿಗಳ ಪರ ಕೆಲಸ ಮಾಡುತ್ತಿವೆ. ಕಾರ್ಮಿಕರಿಗೆ ಇರುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ಮೊಟಕುಗೊಳಿಸಿ ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿವೆ. ಸರ್ಕಾರದ ನೀತಿಗಳನ್ನು ತಿರಸ್ಕರಸಲು ದೊಡ್ಡ ಐಕ್ಯ ಚಳವಳಿ ಕಟ್ಟಬೇಕು ಎಂದು ಹೇಳಿದರು.
ಅಂಗನವಾಡಿ ಸಂಘಟನೆಯ ಕಾರ್ಯದರ್ಶಿ ರಮಾದೇವಿ, ಬಿಸಿಯೂಟ ಸಂಘದ ತಾಲೂಕು ಅಧ್ಯಕ್ಷೆ ಮರಿಯಮ್ಮ, ಮುಖಂಡರಾದ ಶಕುಂತಲಾ ದೇಸಾಯಿ, ಶೋಭಾ, ಸಾವಿತ್ರಿ, ರೈತ ಸಂಘದ ಮುಖಂಡ ಮುದ್ದಪ್ಪ ಬಂಡಿ ಇದ್ದರು.