ಸಮಾವೇಶ: ಹರಿದು ಬಂದ ಜನಸಾಗರ

ರಾಯಚೂರು, ಏ.೧೬- ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಿದ ಅಭಿನಂದನೆ ಸಮಾರಂಭಕ್ಕೆ ಅಪಾರ ಸಂಖ್ಯೆಯಲ್ಲಿ ಜನಸಾಗರ ಹರಿದು ಬಂದಿತ್ತು.
ಒಳಮೀಸಲಾತಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ರಾಜ್ಯ ಸರ್ಕಾರಕ್ಕೆ ಪರಿಶಿಷ್ಟ ಸಮುದಾಯದ ಒಕ್ಕೂಟದಿಂದ ಆಯೋಜಿಸದ ಅಭಿನಂದನೆ ಸಮಾರಂಭದಲ್ಲಿ ಜನಸ್ತೋಮ ಹರಿದು ಬಂದು ಕೃಷಿ ವಿಶ್ವವಿದ್ಯಾಲಯ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.ಅಭಿನಂದನೆ ಸಮಾರಂಭಕ್ಕೆ ಆಗಮಿಸಿದ ಜನರು ಕಾರ್ಯಕ್ರಮದಲ್ಲಿ ಕುರ್ಚಿಗಾಗಿ ನೂಕು ನುಗ್ಗಲು ಸುಡು ಬಿಸಲಿಗೆ ಬೆವರಿಳಿಸಿಕೊಂಡು ಸುಸ್ತಾದ ಜನಸ್ತೋಮ.ಸಮಾರಂಭಕ್ಕೆ ಆಗಮಿಸಿದ ಜನರು ಸುಡು ಬಿಸಲಿಗೆ ನಿಂತು ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದರು. ಸುಡು ಬಿಸಲಿನಲ್ಲಿ ಜನರು ನೀರಿಗಾಗಿ ಹಾಹಾಕಾರ ಪಟ್ಟಿರುವ ಘಟನೆ ನಡೆದಿದೆ.
ಅಭಿನಂದನೆ ಸಮಾರಂಭಕ್ಕೆ ನಗರ ಸೇರಿದಂತೆ ವಿವಿಧ ತಾಲೂಕು ನಿಂದ ಜನಸಾಗರ ಹರಿದು ಬಂದಿತ್ತು.
ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಕೃಷಿ ವಿಶ್ವವಿದ್ಯಾಲಯದ ವರೆಗೂ ಟ್ರಾಫಿಕ್ ಜಾಮ್ ಕಂಡು ಬಂತು.