ಸಮಾವೇಶಕ್ಕೆ ಬೆಂಬಲ ನೀಡಿ:ಅಂಬಾರಾಯ ಕನ್ನಡಿಗ

ಚಿತ್ತಾಪುರ:ಫೆ.3: ಜಿಲ್ಲೆಯಲ್ಲಿ ಫೆ,25ಕ್ಕೆ ಕೋಲಿ ಸಮಾಜದ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದಾರೆ ಇದಕ್ಕೆ ಎಲ್ಲರೂ ಬೆಂಬಲ ನೀಡಬೇಕು ಅದನ್ನು ಬಿಟ್ಟು ವಿರೋಧ ಮಾಡುವುದು ಸರಿಯಲ್ಲ ಅಂಭಾರಾಯ ಕನ್ನಡಗಿ ಕದ್ದರ್ಗಿ ಹೇಳಿದರು.

ವಿಧಾನ ಪರಿಷತ್ತ ಸದಸ್ಯರಾದ ಮೇಲೆ ತಿಪ್ಪಣ್ಣಪ್ಪ ಕಮಕನೂರ ಅವರು ಕೋಲಿ ಸಮಾಜ ಪರಿಶಿಷ್ಟ ಪಂಗಡಕ್ಕೆ (ಎಸ್‍ಟಿ) ಸೇರಿಸುವ ವಿಷಯ ಕುರಿತು ಹಲವು ಬಾರಿ ಅಧಿವೇಶನದಲ್ಲಿ ಗಮನ ಸೆಳೆಯುವ ನಿಟ್ಟಿನಲ್ಲಿ ಚರ್ಚಿಸಿದ್ದಾರೆ ಹೀಗಾಗಿ ಸಮಾಜದ ಸವಾರ್ಂಗೀಣ ಅಭಿವೃದ್ದಿಯ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರಲು ಹಾಗೂ ಗಮನ ಸೆಳೆಯಲು ಬೃಹತ್ ಸಮಾವೇಶ ಹಮ್ಮಿಕೊಂಡಿದ್ದಾರೆ.

ಸಮಾಜದ ಸಮಾವೇಶ ಮಾಡುವವರಿಗೆ ಬೆಂಬಲ ನೀಡಿ ಇಲ್ಲವಾದರೆ ಸುಮ್ಮನಿರಬೇಕು ಅದನ್ನು ಬಿಟ್ಟು ಸಮಾಜದಲ್ಲಿ ಜನರನ್ನು ಹಾದಿ ತಪ್ಪಿಸುವ ಹೇಳಿಕೆ ನೀಡಬೇಡಿ. ಕಮಕನೂರ ಅವರು ತಮ್ಮ ಸ್ವಾರ್ಥಕ್ಕಾಗಿ ಸಮಾವೇಶ ಮಾಡುತ್ತಿಲ್ಲ ಅವರು ಈಗಾಗಲೇ ಎಂಎಲ್‍ಸಿ ಆಗಿದ್ದಾರೆ ಹೀಗಾಗಿ ಅವರಿಗೆ ಯಾವುದೇ ಸ್ವಾರ್ಥ ಇಲ್ಲ ಸಮಾಜಕ್ಕೆ ನ್ಯಾಯ ಕೊಡಿಸುವ ಉದ್ದೇಶದಿಂದ ಸಮಾವೇಶ ಮಾಡಲು ನಿರ್ಣಯಿಸಿದ್ದಾರೆ, ವಿನಾಕಾರಣ ಚಿತ್ತಾಪುರ ಕೋಲಿ ಸಮಾಜದ ಕೆಲವು ಮುಖಂಡರು ಸಮಾಜದ ಜನರಲ್ಲಿ ಗೊಂದಲ ಉಂಟು ಮಾಡುವ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಫೆ.25 ರಂದು ಭಾನುವಾರ ಇರುವುದರಿಂದ ರಾಷ್ಟ್ರ ಹಾಗೂ ರಾಜ್ಯ ನಾಯಕರು ಸಮಾವೇಶಕ್ಕೆ ಬರಲು ಸಮ್ಮತಿ ಸೂಚಿಸಿದ್ದರಿಂದ ತಿಪ್ಪಣ್ಣಪ್ಪ ಕಮಕನೂರ ಅವರು ಸಮಾಜದ ಜನರಿಗೆ ಸಂದೇಶ ಮುಟ್ಟಲಿ ಎಂದು ಪತ್ರಿಕೆ ಹೇಳಿಕೆ ನೀಡಿದ್ದಾರೆ ಅಷ್ಟೇ. ಈ ವಾರದಲ್ಲಿ ಜಿಲ್ಲೆಯ ಸಮಸ್ಥ ಕೋಲಿ ಸಮಾಜದ ತಾಲೂಕು ಅಧ್ಯಕ್ಷರುಗಳನ್ನು ಹಾಗೂ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪೂರ್ವಭಾವಿ ಸಭೆ ಮಾಡಲಿದ್ದಾರೆ ಹೀಗಿರುವಾಗ ಸುಖಾಸುಮ್ಮನೆ ಸಮಾವೇಶದ ಹಾಗೂ ಕಮಕನೂರ ಅವರ ವಿರುದ್ದ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.