ಸಮಾಲೋಚನೆ ವಿದ್ಯಾರ್ಥಿಗಳ ಭವಿಷ್ಯದ ಪರಿವರ್ತಕ: ಬಸರಕೋಡ

ವಿಜಯಪುರ:ಜು.26: ನಗರದ ದಿ. ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಸಾಮಾಲೋಚನಾ (ಮೇಲ್ವಿಚಾರಣೆ) ಘಟಕ ಉದ್ಘಾಟಿಸಲಾಯಿತು.
ವಿದ್ಯಾರ್ಥಿಗಳ ವೈಯಕ್ತಿಕ ಸಮಾಲೋಚನೆ ಘಟಕಕ್ಕೆ ಚಾಲನೆ ನೀಡಿ ಪ್ರೊ. ಎಸ್.ಎಸ್. ಬಸರಕೋಡ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಹಲವಾರು ಭಿನ್ನತೆಗಳನ್ನು ಕಾಣುತ್ತೇವೆ. ಅವರ ಮನೋವಿಚಾರಗಳು, ಇರುವಿಕೆ, ವೈಯಕ್ತಿಕ ಸಮಸ್ಯೆಗಳು, ಹಾವಭಾವ, ಚಲನ-ವಲನಗಳು ಹೀಗೆ ಹಲವಾರು ಭಿನ್ನತೆ ಇರುವದನ್ನು ಕಾಣುತ್ತೇವೆ. ಉಪನ್ಯಾಸಕರು ಗಮನ ಹರಿಸಿ ಅದಕ್ಕೆ ಸರಿಯಾದ ರೀತಿಯಲ್ಲಿ ಅವರನ್ನುಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು. ಸಮಾಲೋಚನಾ ಘಟಕಗಳು ಪ್ರತಿಯೊಂದು ಶಾಲೆಯಲ್ಲಿ ಇರಬೇಕು. ಈ ಘಟಕ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿತು ಅವರಿಗೆ ತಿಳಿಹೇಳಿ ಪರಿಹಾರವನ್ನು ಕಂಡುಕೊಳ್ಳಲು ಸಹಾಯಕವಾಗುತ್ತದೆ.
ಭಿನ್ನಾಭಿಪ್ರಾಯದ ಬಿಂದುಗಳನ್ನು ಪರಿಹರಿಸಲು ಸಹಾಯಕ, ಸಮಾಲೋಚನೆ ಎಂದರೆ ಕೇವಲ ಒಂದು ಸಮಸ್ಯೆಯನ್ನು ಸರಿಪಡಿಸಲು ಸಲಹೆ ನೀಡುವುದು ಅಷ್ಟೆ ಅಲ್ಲದೆ ಸಮಾಲೋಚನೆ ಪಡೆಯುವವರು ತಮ್ಮನ್ನು ತಾವೇ ಅರ್ಥಮಾಡಿಕೊಳ್ಳಲು ನೆರವಾಗುವ ಒಂದು ಪ್ರಕ್ರಿಯೆಯಾಗಿದೆ. ಅವರಿಗೆ ತಮ್ಮ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿ ನಿಭಾಯಿಸುವ ಸಾಮಥ್ರ್ಯವನ್ನು ಪಡೆಯಲು ನೆರವಾಗುವ ಒಂದು ಪ್ರಕ್ರಿಯೆ ಎಂದು ಹೇಳಬಹುದು.
ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿತು ಶಿಕ್ಷಕರು ಪರಿಹಾರದ ಜೊತೆಗೆ ಪರಿವರ್ತನೆ ಗೊಳ್ಳುವಂತೆ ಮಾಡಬೇಕು ಎಂದರು.
ಡಾ. ಎಸ್.ಟಿ. ಬೋಳರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಘಟಕದ ಕಾರ್ಯದರ್ಶಿ ಮಹಮ್ಮದ ತುರ್ಕಿ ಛಾಯಾ ಲಮಾಣಿ ಪ್ರಾರ್ಥಿಸಿದರು, ಸವಿತಾ ನಾಯಿನೇಗಿಲಿ ಸ್ವಾಗತಿಸಿದರು, ಸುರೇಖಾ ದಿನ್ನಿ ಪರಿಚಯಿಸಿದರು. ಕಿರಣ ಗಟ್ಟೆಪ್ಪಗೋಳ ವಂದಿಸಿದರು ಹಾಗೂ ಎಲ್ಲ ಸಹಾಯಕ ಪ್ರಾಧ್ಯಾಪಕರು ಉಪಸ್ಥಿತರಿದ್ದರು.