ಸಮಾರಂಭಗಳಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ತಹಶೀಲ್ದಾರ್ ಆದೇಶ

ಕೆ.ಆರ್.ಪೇಟೆ:ಮಾ:30: ಜಿಲ್ಲೆಯಾದ್ಯಂತ ಕರೋನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಬೃಹತ್ ಸಭೆ-ಸಮಾರಂಭಗಳು, ಜಾತ್ರೆ, ವಿವಾಹ, ಬೀಗರ ಔತಣ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಿಯಂತ್ರಣ ಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ ಎಂದು ತಹಶೀಲ್ದಾರ್ ಶಿವಮೂರ್ತಿ ತಿಳಿಸಿದರು.
ಅವರು ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಪಟ್ಟಣದ ಚಿತ್ರಮಂದಿರಗಳ ಹಾಗೂ ಕಲ್ಯಾಣ ಮಂಟಪಗಳ ಮಾಲೀಕರುಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಳೆದ ಒಂದು ವರ್ಷದಲ್ಲಿ ಕೊರೋನಾ ಮಹಾ ಮಾರಿಯಿಂದ ಅನುಭವಿಸಿರುವ ಯಾತನೆಯನ್ನು ಮನವರಿಕೆ ಮಾಡಿದ ತಹಶೀಲ್ದಾರ್ ಶಿವಮೂರ್ತಿ ಮುಂದಿನ ದಿನಗಳಲ್ಲಿ ಮತ್ತೆ ಇದೇ ಸ್ಥಿತಿ ಮರು ಕಳಿಸದಂತೆ ಎಚ್ಚರ ವಹಿಸಬೇಕಾದ ಸಂದರ್ಭ ಒದಗಿಬಂದಿದ್ದು ತಾಲ್ಲೂಕಿನಲ್ಲಿಯೂ ಕೊರೋನಾ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿರುವುದು ಆತಂಕವನ್ನುಂಟು ಮಾಡಿದೆ. ಜನರು ಈ ಬಗ್ಗೆ ಜಾಗೃತರಾಗದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ವಿವಾಹ ಕಾರ್ಯಕ್ರಮಕ್ಕೆ ಕಲ್ಯಾಣಮಂಟಪದಲ್ಲಿ 200 ಜನ ಮೀರದಂತೆ, ಜನ್ಮದಿನ ಹಾಗೂ ಇತರೆ ಆಚರಣೆಗಳಿಗೆ ತೆರೆದ ಪ್ರದೇಶಗಳಲ್ಲಿ 100 ಸಭಾಂಗಣಗಳಲ್ಲಿ 50 ಜನ ಮೀರದಂತೆ ಹಾಗೂ ಮರಣ/ ಶವಸಂಸ್ಕಾರ ಕಾರ್ಯಕ್ರಮಕ್ಕೆ 100 ಜನ ಮೀರದಂತೆ ಅಂತ್ಯಕ್ರಿಯೆಯಲ್ಲಿ 50 ಜನ ಮೀರದಂತೆ, ಧಾರ್ಮಿಕ ಆಚರಣೆಗಳಲ್ಲಿ 5 ಜನಕ್ಕೆ ಮೀರದಂv,É ರಾಜಕೀಯ ಸಭೆ ಸಮಾರಂಭಗಳಲ್ಲಿ ತೆರೆದ ಪ್ರದೇಶಗಳಲ್ಲಿ 500 ಜನಕ್ಕೆ ಮೀರದಂತೆ ಭಾಗವಹಿಸುವುದ ಕಡ್ಡಾಯವಾಗಿದೆ.
ವಿವಾಹಗಳನ್ನು ದೇವಸ್ಥಾನಗಳ ಬಳಿ ಸರಳವಾಗಿ ನಡೆಸುವಂತೆ ಮನವಿ: ಕೊರೋನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ತಾಲ್ಲೂಕಿನಾದ್ಯಂತ ಸಾರ್ವಜನಿಕರು ವಿವಾಹ ಕಾರ್ಯಕ್ರಮಗಳನ್ನು ಸರಳವಾಗಿ ನಡೆಸುವುದರ ಮೂಲಕ ಕೋವಿಡ್ ನಿಯಂತ್ರನಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೆಜೆಬಿ ಚಿತ್ರಮಂದಿರದ ಬಗ್ಗೆ ಸಾರ್ವಜನಿಕರಿಂದ ದೂರು. ಕೆಜೆಬಿ ಚಿತ್ರಮಂದಿರದ ಮೇಲೆ ಸಾಕಷ್ಟು ದೂರುಗಳು ಬರುತ್ತಿದ್ದು ತಾಲ್ಲೂಕು ಆಡಳಿತಕ್ಕೆ ಯಾವುದೇ ಮಾಹಿತಿ ನೀಡದೇ ದರ ಹೆಚ್ಚಳ ಮಾಡಿರುವುದಕ್ಕೆ ಕಿಡಿಕಾರಿದರು. ಸ್ವಚ್ಚತೆ ಮರೀಚಿಕೆಯಾಗಿದೆ. ಪ್ರತೀ ಶೋ ಮುಗಿದ ನಂತರ ಸ್ವಚ್ಚತೆ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಶೌಚಾಲಯದಲ್ಲಿ ಎಕ್ಸಿಟ್ ಫ್ಯಾನ್‍ಗಳು ಕೆಲಸ ಮಾಡುತ್ತಿಲ್ಲ, ಚಿತ್ರಮಂದಿರದ ಒಳಗೆ ಎಲ್ಲಾ ಬಗೆಯ ತಿಂಡಿತಿನಿಸುಗಳನ್ನು ದುಪ್ಪಟ್ಟುಬೆಲೆಗೆ ಮಾರಾಟ ಮಾಡುತ್ತಿದ್ದೀರಿ ಈ ಬಗ್ಗೆ ನಮಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದು ಒಂದುವಾರದೊಳಗೆ ನಾನು ಬಂದು ಪರಿಶೀಲನೆ ಮಾಡುತ್ತೇನೆ. ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು.
ಕಡ್ಡಾಯವಾಗಿ ಮಾಸ್ಕ ಧರಿಸಿ: ಪಟ್ಟಣದಲ್ಲಿ ಓಡಾಡುವವರು, ಜನಸಂದಣಿ ಹೆಚ್ಚಾಗಿ ಇರುವ ಕಡೆಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದೇ ಇರುವವರಿಗೆ ಇಂದಿನಿಂದಲೇ ದಂಡ ವಿಧಿಸಲಾಗುವುದು ದಂಡಕ್ಕೆ ಆಸ್ಪದ ನೀಡದೇ ಎಲ್ಲರೂ ಮಾಸ್ಕ್ ಧರಿಸಿ ಎಂದು ಮನವಿ ಮಾಡಿದರು.
ಸಿಪಿಐ ಎಂ.ಕೆ.ದೀಪಕ್, ಪುರಸಭಾ ಮುಖ್ಯಾ ಧಿಕಾರಿ ಸತೀಶ್ ಕುಮಾರ್, ಟಿಹೆಚ್‍ಒ ಡಾ. ಮಧುಸೂಧನ್, ವಿವಿಧ ಕಲ್ಯಣಮಂಟಪಗಳ ಮಾಲೀಕರುಗಳು ಹಾಜರಿದ್ದರು.