ಸಮಾನ ಮನಸ್ಕರು ಇದ್ದಾಗ ಶಿಕ್ಷಣ ಸಂಸ್ಥೆಗಳು ಬೆಳೆಯುತ್ತವೆ

ಲಕ್ಷ್ಮೇಶ್ವರ,ನ.4: ತಾಲೂಕಿನ ಶಿಗ್ಲಿ ಗ್ರಾಮದ ನವ ಚೇತನ ವಿದ್ಯಾ ಸಂಸ್ಥೆಯ ಎನ್.ಆರ್. ಗಂಗಾವತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ದ್ಯಾಮಣ್ಣನವರ ತೋಟ ದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಚನ್ನಪ್ಪನವರು ಹುಲಗೂರ್ ಪೂರ್ವ ಪ್ರಾಥಮಿಕ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಿದ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ ಹಾಗೂ ಕರ್ನಾಟಕ ಸಂಭ್ರಮ 50 ಜರುಗಿತು.
ಶಾಲಾ ಕೊಠಡಿ ಉದ್ಘಾಟಿಸಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಅವುಗಳನ್ನು ಬೆಳೆಸುವುದು ಅಷ್ಟು ಸುಲಭದ ಮಾತಲ್ಲ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮತ್ತು ಸಾಮಾಜಿಕ ಚಿಂತನೆ ಉಳ್ಳ ಸಮಾನ ಮನಸ್ಕರು ಇದ್ದಾಗ ಮಾತ್ರ ಶಿಕ್ಷಣ ಸಂಸ್ಥೆ ಬೆಳೆಯುತ್ತವೆ ಎಂದರು.
ಇಂದು ದೇವಾಲಯಗಳನ್ನು ನಿರ್ಮಿಸುವುದಕ್ಕಿಂತಲೂ ಶಾಲಾ ಕೊಠಡಿಗಳ ನಿರ್ಮಿಸಿ ಸರ್ವಧರ್ಮ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮಹತ್ತರ ಕಾರ್ಯದಲ್ಲಿ ನವಚೇತನ ವಿದ್ಯಾ ಸಂಸ್ಥೆ ಸಮರ್ಪಿಸಿಕೊಂಡಿರುವುದು ಪ್ರಶಂಸನೀಯ ಎಂದರು. ಸಮಾಜ ನಮಗೇನು ಮಾಡಿದೆ ಎನ್ನುವುದಕ್ಕಿಂತಲೂ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಅದಕ್ಕೆ ನವಚೇತನ ವಿದ್ಯಾ ಸಂಸ್ಥೆ ಉದಾಹರಣೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಸುರೇಶ್ ಭಂಡಾರಿ ಅವರು ಮಾತನಾಡಿ ಕೆಲವೇ ವರ್ಷಗಳಲ್ಲಿ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿರುವುದು ಶಿಗ್ಲಿಯ ಮಣ್ಣಿನ ಗುಣದಲ್ಲಿ ಅಡಗಿದೆ ಅದರಲ್ಲಿ ಶಿಕ್ಷಣ ಕ್ಷೇತ್ರದ ಸಮಗ್ರ ಬೆಳವಣಿಗೆಗಾಗಿ ಎಲ್ಲರೂ ನಿಸ್ವಾರ್ಥ ಭಾವನೆಯಿಂದ ಜೋಡಿಸಿರುವುದರಿಂದ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತದೆ ಎಂಬ ನಂಬಿಕೆ ಇದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಡಾಕ್ಟರ್ ರಾಹುಲ್ ತೋಟದ ವೀರೇಂದ್ರ ಗೌಡ ಪಾಟೀಲ್ ಮಾತನಾಡಿದರು ಇದೇ ಸಂದರ್ಭದಲ್ಲಿ ಇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಡಾಕ್ಟರ್ ಪಿ ಡಿ ತೋಟ ದ ಬಸವರಾಜ್ ಹಂಜಿ ವಿ.ಡಿ. ಅಂದಾನಿ ಗೌಡ ನಾರಾಯಣಪ್ಪ ಹರವಿ ಇದ್ದರು.
ಸಂಸ್ಥೆಯ ಕಾರ್ಯದರ್ಶಿ ಅಶೋಕ್ ಶಿರಹಟ್ಟಿ ಪ್ರಾಸ್ತಾವಿಕ ಮಾತನಾಡಿದರು ಸಂಸ್ಥೆಯ ಆರ್ ಎಚ್ ಗದಗ ವಿ ಎಸ್ ಅಣ್ಣಿಗೇರಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಇದ್ದರು.