ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಹಣ ನೀಡಿ: ಕೃಷ್ಣೇಗೌಡ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.14: ತುಂಗಭದ್ರ ಜಲಾಶಯದಲ್ಲಿನ ಹೂಳೆತ್ತಿ, ಇಲ್ಲಾ ನವಲಿ ಸಮಾನಂತರ ಜಲಾಶಯ ನಿರ್ಮಿಸಲು ಈ ಬಜೆಟ್ ನಲ್ಲಿ ಹಣ ನೀಡಿ ಎಂದು ಸಿ.ಎಂ.ಸಿದ್ದರಾಮಯ್ಯ ಅವರಿಗೆ  ಕರವೇ ಸ್ವಾಭಿಮಾನಿ ಬಣ ಆಗ್ರಹಿಸಿದೆ.
ಈ ಬಗ್ಗೆ ಇಂದಿಲ್ಲಿನ ಪತ್ರಿಕಾ ಭವನದಲ್ಲಿ ಸಂಘಟನೆಯ ರಾಜ್ಯ ಅಧ್ಯಕ್ಷ ಪಿ.ಕೃಷ್ಣೇಗೌಡ ಅವರು ಸುದ್ದಿಗೋಷ್ಟಿ ನಡೆಸಿ.  ತುಂಗಭದ್ರ ಉಳಿವಿಗಾಗಿ ನಮ್ಮ ಸಂಘಟನೆ ಆಂದೋಲನ ನಡೆಸಲಿದೆಂದರು.
ಆಲಮಟ್ಟಿ ಬಗ್ಗೆ ಗಮನ ಹರಿಸುತ್ತಿಲ್ಲ. ನದಿ ಆಣೆಕಟ್ಟುಗಳ‌ ಬಗ್ಗೆ ನ್ಯಾಯಾಲಯಗಳಿಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ.
ಒಂದು ಕಡೆ ಬೊಕ್ಕಸದ ಹಣ ಗ್ಯಾರೆಂಟಿ ಯೋಜನೆಗಳ ಪಾಲಾಗಿ ಅಭಿವೃದ್ಧಿ ಕುಂಠಿತಗೊಂಡಿದೆ. ಮೂಲಭೂತ ಸೌಲಭ್ಯಗಳಿಗೆ ಅಧ್ಯತೆ ನೀಡಬೇಕು.
ಇದಕ್ಕಾಗಿ ನಾವು ಯಾವುದೇ ರೀತಿಯ ಹೋರಾಟಕ್ಕೆ ಸಿದ್ದ ಎಂದರು.
ಸುದ್ದಿ ಗೋಷ್ಟಿಯಲ್ಲಿ ಸಂಘಟನೆಯ ಉ.ಕ.ಅಧ್ಯಕ್ಷ  ಲಕ್ಷ್ಮಣ ತಂಬಾಗಿ, ಜಿಲ್ಕಾ ಅಧ್ಯಕ್ಷ ಕೋರಿ ರಮೇಶ್, ಗೌರವ ಅಧ್ಯಕ್ಷ ಶಂಕರ್ ದಾಸ್ ಉಪಾಧ್ಯಕ್ಷ ಜೆ. ಗಜೇಂದ್ರ,  ಪ್ರಧಾನ ಕಾರ್ಯದರ್ಶಿ ಕೆ.ಹುಸೇನ್ ಬಾಷ ಮೊದಲಾದವರು ಇದ್ದರು.

One attachment • Scanned by Gmail

ReplyForwardAdd reaction