
ಬೀದರ್:ಎ.22: ಬಸವಣ್ಣನವರು 12ನೇ ಶತಮಾನದಲ್ಲಿ ಎಲ್ಲ ವರ್ಗದ ಜನರಿಗೂ ಸಮಾನತೆ ಕಲ್ಪಿಸಿದರು. ಅಲ್ಲದೇ ಆಯಾ ಸಮಾಜದವರ ಕಾಯಕಕ್ಕೆ ಪೆÇ್ರೀತ್ಸಾಹ ನೀಡುವ ಮೂಲಕ ಕಾಯಕದ ಮಹತ್ವ ಸಾರಿದರು ‘ ಎಂದು ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು ಅವರು ಭಾಲ್ಕಿ ತಾಲ್ಲೂಕಿನ ಕುರುಬಖೇಳಗಿ ಗ್ರಾಮದಲ್ಲಿ ಆಯೋಜಿಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ದುರಾಲೋಚನೆ, ಕೆಟ್ಟ ಕೆಲಸಗಳನ್ನು ಮಾಡದೇ ಪ್ರಾಮಾಣಿಕ ನಿಷ್ಠೆಯಿಂದ ಕಾಯಕ ಮಾಡಿ ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಬಸವಣ್ಣನವರು ಕಾಯಕ ಮತ್ತು ದಾಸೋಹದಂತಹ ಪರಿಕಲ್ಪನೆ ಹುಟ್ಟು ಹಾಕುವ ಮೂಲಕ ವಚನ ಚಳುವಳಿಯಂತಹ ಮಹಾನ್ ಕ್ರಾಂತಿಯನ್ನು ಸೃಷ್ಟಿಸಿದರು’ ಎಂದರು.
ಬಸವ ಜಯಂತಿ ಸಾಂಪ್ರದಾಯಿಕ ಆಚರಣೆಯಾಗಬಾರದು. ಬಸವ ಜಯಂತಿ ಸಾರ್ಥಕಗೊಳ್ಳಬೇಕಾದರೆ ಸಮ ಸಮಾಜ ನಿರ್ಮಾಣಕ್ಕೆ ನಮ್ಮನ್ನು ನಾವು ಮೊದಲು ತೊಡಗಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಪ್ರಮುಖರಾದ ಶಿವಶರಣಪ್ಪ ಮಠಪತಿ, ಪರಮೇಶ್ವರ ಕರಡ್ಯಾಳ, ಪ್ರಶಾಂತ ಪವನಶೆಟ್ಟಿ, ಉಮೇಶ ಗುಮ್ಮೆ, ಸುರೇಶ ಪವನಶೆಟ್ಟಿ, ರಾಜಕುಮಾರ ಬಾಲಕುಂದೆ, ಸಿಖರೇಶ್ವರ ಪಾಟೀಲ, ಸುನೀಲ ಪಾಟೀಲ, ಶಶಿಧರ ಸೀತಾ ಸಿದ್ದೇಶ್ವರ ಇದ್ದರು.