
ಭಾಲ್ಕಿ:ಮಾ.3: ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದ 45 ನೆಯ ದಿವಸದಂದು ಶ್ರೀಮತಿ ಚಂದ್ರಕಲಾ ಪ್ರಭು ಡಿಗ್ಗೆ ಶಿಕ್ಷಕರು ಬಸವ ಮಹಾಮನೆ ಬಾಲಾಜಿನಗರ ಸುಭಾಷ್ ಚೌಕ್ ಹತ್ತಿರ ಭಾಲ್ಕಿ ಅವರ ಮನೆಯಲ್ಲಿ ನೆರವೇರಿತು. ಪೂಜ್ಯ ಶ್ರೀ ಮ.ಘ.ಚ. ಡಾಕ್ಟರ್ ಬಸವಲಿಂಗ ಪಟ್ಟದೇವರ ಸಾನಿಧ್ಯದಲ್ಲಿ ಪೂಜ್ಯ ಶ್ರೀ ಮ.ಘ.ಚ ಗುರುಬಸವ ಪಟ್ಟದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸೋಮನಾಥ ಮೂಲಗೆ ರಿಜಿಸ್ಟರ್ ಬಿ.ಕೆ.ಐ.ಟಿ. ಭಾಲ್ಕಿ ಅವರು ನೆರವೇರಿಸಿದರು. ಅತಿಥಿಗಳಾಗಿ ಶ್ರೀ ಸಂಗಪ್ಪ ಹಿಪ್ಪಳಗಾವೆ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ ತಾಲೂಕು ಬೀದರ ಆಗಮಿಸಿದ್ದರು.
ಶ್ರೀ ಪ್ರಕಾಶ ಗುಂದಗುಂಡಿ ನಿವೃತ್ತ ಶಿಕ್ಷಕರು ಬೀದರ ಅವರು ಶರಣ ತತ್ವದ ಕುರಿತ ಅನುಭಾವ ನೀಡಿದರು. ಸಮಾನತೆ ಸಾರುವಿದೆ ಶರಣ ತತ್ವದ ಮೂಲ ಉದ್ಧೇಶ. 12ನೆಯ ಶತಮಾನದಲ್ಲಿ ಶರಣರು ಗಂಡು ಹೆಣ್ಣು ಎನ್ನದೆ ಎಲ್ಲರೂ ಅನುಭವ ಮಂಟಪದಲ್ಲಿ ತಮ್ಮ ಅನಿಸಿಕೆಗಳನ್ನು ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದಾಗಿತ್ತು ಎಂದು ಹೇಳಿದರು.
ಶ್ರೀಮತಿ ಸುಗಮ್ಮ ಹಿಪ್ಪಳಗಾವೆ ಬೀದರ ಅವರು ಬಸವ ಪ್ರಾರ್ಥನೆ ನೆರವೇರಿಸಿದರು. ಡಿಗ್ಗೆ ಪರಿವಾರದವರಿಂದ ಗುರುಬಸವ ಪೂಜೆ ನೆರವೇರಿತು. ಪ್ರಭು ಡಿಗ್ಗೆ ಸ್ವಾಗತಿಸಿದರು. ವೇದಿಕೆಯ ಮೇಲೆ ಉಪಸ್ಥಿತರಿದ್ದವರನ್ನು ಸನ್ಮಾನಿಸಲಾಯಿತು. ಚಂದ್ರಕಲಾ ಪ್ರಭು ಡಿಗ್ಗೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಪೂಜ್ಯರು ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.
ಶ್ರೀಮತಿ ಶಿಲ್ಪಾ ಕನಶೆಟ್ಟೆ ಉಪನ್ಯಾಸಕರು ಭಾಲ್ಕಿ ಅವರು ಕಾರ್ಯಕ್ರಮ ನಿರೂಪಿಸಿದರು. ಅನೇಕ ಶರಣ ಶರಣೆಯರು ಭಕ್ತರು ಭಾಗವಹಿಸಿದ್ದರು. ಮಂಗಲ ಹಾಗೂ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು.