ಸಮಾನತೆಯ ಹರಿಕಾರ ಬಸವಣ್ಣ ವಿಶ್ವಕ್ಕೆ ಆದರ್ಶ ಪುರುಷ

Oplus_0


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮೇ.11   12ನೇ ಶತಮಾನದಲ್ಲಿ ಕಾಯಕವೇ ಕೈಲಾಸ ಎಲ್ಲರೂ ಸಮಾನರು ಎಂದು ಸಮ ಸಮಾಜಕ್ಕೆ ಹೋರಾಟ ಮಾಡಿದ ಬಸವಣ್ಣ ವಿಶ್ವಕ್ಕೆ ಆದರ್ಶ ಪುರುಷ ಎಂದು ನಂದಿಪುರದ ಡಾ. ಮಹೇಶ್ವರ ಸ್ವಾಮೀಜಿ  ಹೇಳಿದರು.
 ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವೀರಶೈವ ಮಹಾಸಭಾ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರ ಕಂಚಿನ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ಶುಕ್ರವಾರ ಮಾತನಾಡಿದರು. ಬಸವಣ್ಣನವರ ಚಿಂತನೆಗಳು ಇಂದು ಮನೆಮನೆಗಳಲ್ಲಿ ತಾಯಂದಿರು ಮಕ್ಕಳಲ್ಲಿ ಮೂಡಿಸಬೇಕು. ಅವರ ಆದರ್ಶ ಗಳನ್ನು ಪಾಲಿಸಬೇಕು ಎಂದರು.
 ಈ ಸಂದರ್ಭದಲ್ಲಿ ಹಾಲಸ್ವಾಮಿ ಮಠದ ಹಾಲ ಸಿದ್ದೇಶ್ವರ ಸ್ವಾಮೀಜಿ, ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷ ಶಿವರುದ್ರಪ್ಪ, ಭಾವಿ ಬೆಟ್ಟಪ್ಪ  ಇಟಗಿ ಕಲ್ಲೇಶಪ್ಪ  ಸಕ್ರಿಹಳ್ಳಿ ಕೊಟ್ರೇಶ್, ಅಕ್ಕಿ ಶಿವಕುಮಾರ್, ಹಾಲ್ದಾಳ ವಿಜಯಕುಮಾರ್, ವಿರುಪಾಕ್ಷಿ ಗೌಡ್ರು, ಬಾದಾಮಿ ಕರಿಬಸವರಾಜ್, ಪುರಸಭೆ ಸದಸ್ಯ ಬಿ ಗಂಗಣ್ಣ, ಬಸವ ರೆಡ್ಡಿ, ಸಂಚಿ  ಶಿವಕುಮಾರ್, ಬಸವರಾಜ್ ರೆಡ್ಡಿ, ಹನಿಸಿ ದೇವರಾಜ್, ಬನ್ನಿಗೋಳ ವೆಂಕಣ್ಣ ಸೊನ್ನದ ಗುರು ಬಸವರಾಜ್ ವಕೀಲರಾದ  ಕೊಟ್ರೇಶ ಶೆಟ್ಟರ್, ಟಿ ಜಿ ಎಂ ಕೋಟೇಶ್, ಶಿವಶಂಕರಗೌಡ,ಎಚ್ ಅನಿಲ್ ರಾಜಪ್ಪ ನಾಗಯ್ಯ ಸ್ವಾಮಿ  ಇತರರಿದ್ದರು