ಸಮಾನತೆಯ ಸಾಕಾರ ಮೂರ್ತಿ ಬಾಬು ಜಗಜೀವನರಾಂ: ರಾಜು ನಾಗರೆಡ್ಡಿ

ಕೆಂಭಾವಿ :ಎ.6: ಪಟ್ಟಣದ ಯಾಳಗಿ ಗ್ರಾಮದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರೀಯ ಧೀಮಂತ ನಾಯಕರು ಮಾಜಿ ಉಪಪ್ರಧಾನಿಗಳು ಡಾ ಬಾಬು ಜಗಜೀವನ್ ರಾಮ್ ಅವರ 116ನೇ ಜಯಂತೋತ್ಸವನ್ನು ಆಚರಣೆ ಮಾಡಲಾಯಿತು.

ಕಾರ್ಯಕ್ರಮದ ಕುರಿತು ಮಾತನಾಡಿದ ದಲಿತ ಯುವ ಮುಖಂಡ ರಾಜು ನಾಗರೆಡ್ಡಿ ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು. ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಕೃಷಿಯಲ್ಲಿ ಗಣನೀಯ ಬದಲಾವಣೆ ತಂದರು. ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು. ಆಹಾರ ಉತ್ಪಾದನೆ ಹೆಚ್ಚಿಸಿದರು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿವು ಹಾದಿಮನಿ, ಮಹದೇವಪ್ಪ ಜಲಾಪುರ,ಶರಣಪ್ಪ ಹಾದಿಮನಿ, ಗುತ್ತಪ್ಪ ನಾಗರೆಡ್ಡಿ,ಸಿದ್ದಪ್ಪ, ಮುತ್ತಪ್ಪ, ಪರಮಾನಂದ, ಬಾಗೇಶ್ ಜಲಾಪುರ,ರಾಮು ಚನ್ನಪಟ್ಟಣ ಸೇರಿದಂತೆ ಇತರಿದ್ದರು.