ಸಮಾನತೆಯ ಸಂದೇಶ ಸಾರಲು ಮಹಿಳಾ ದಿನಾಚರಣೆ ಆಚರಿಸಬೇಕು : ಡಾ. ಸಿ.ಕೆ. ಹೊಸಮನಿ

ವಿಜಯಪುರ,ಮಾ.31:ಲಿಂಗ ತಾರತಮ್ಯದಿಂದ ಮುಕ್ತವಾದ ಉತ್ತಮ ಸಮಾಜವನ್ನು ನಿರ್ಮಿಸಲು ಮತ್ತು ಲಿಂಗ ಸಮಾನತೆಯ ಸಂದೇಶವನ್ನು ನೀಡಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಸಿ.ಕೆ. ಹೊಸಮನಿ ಹೇಳಿದರು.
ಲಯನ್ಸ್ ಕ್ಲಬ್ ಆಫ್ ಬಿಜಾಪುರ ಪರಿವಾರ ಹಾಗೂ ಸುವಿಧಾ ಸಾಮಾಜಿಕ ಸಂಸ್ಥೆ ಇವರ ಸಹಯೋಗದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧÀನೆಗೈದ ಸಾಧಕರಿಗೆ ನಗರದ ಅಪ್ಸರಾ ಹಾಲ್‍ನಲ್ಲಿ ಆಯೋಜಿಸಿದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಇತಿಹಾಸ ಮತ್ತು ಸಮಕಾಲೀನ ಸಮಾಜದಲ್ಲಿನ ಘಟನೆಗಳಿಗೆ ಮಹಿಳೆಯರ ಕೊಡುಗೆಗಳನ್ನು ಎತ್ತಿ ತೋರಿಸುವ ದಿನವೇ ಮಾರ್ಚ್ 8 ರ ಅಂತಾರಾಷ್ಟ್ರೀಯ ಮಹಿಳಾ ದಿನವಾಗಿದೆ. ಮಹಿಳೆಯರ ಸಾಂಸ್ಕøತಿಕ, ರಾಜಕೀಯ ಮತ್ತು ಸಾಮಾಜಿಕ ಆರ್ಥಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ಗಮನಿಸುತ್ತದೆ. ಮಹಿಳಾ ದಿನವು ಲಿಂಗ ತಾರತಮ್ಯ, ಪಕ್ಷಪಾತದಿಂದ ಮುಕ್ತವಾಗಿರುವ ಲಿಂಗ-ಸಮಾನ ಜಗತ್ತಿಗೆ ಕರೆ ನೀಡುತ್ತದೆ. ಈ ದಿನವನ್ನು ಮಹಿಳೆಯರ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಇದು ಮಹಿಳೆಯರ ಸಮಾನ ಹಕ್ಕುಗಳು, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ನಿಂದನೆ ಮತ್ತು ಸಂತಾನೋತ್ಪತ್ತಿ ಹಕ್ಕುಗಳಂತಹ ವಿಷಯಗಳ ಬಗ್ಗೆ ಮಾತನಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಲಯನ್ಸ್ ಪರಿವಾರದ ಅಧ್ಯಕ್ಷÀ ಪೆÇ್ರ. ಎಂ.ಬಿ. ರಜಪೂತ ಮಾತನಾಡಿ, ಮಹಿಳೆಯರ ಸಾಧನೆಗಳು ಮತ್ತು ತ್ಯಾಗಗಳನ್ನು ಆಚರಿಸಲು ಒಂದು ದಿನ ಸಾಕಾಗುವುದಿಲ್ಲ. ಆದರೆ ಈ ನಿರ್ದಿಷ್ಟ ದಿನವು ನಮ್ಮ ಜೀವನದಲ್ಲಿ ಮಹಿಳೆಯರ ಪ್ರಾಮುಖ್ಯತೆ ಮತ್ತು ಮಹತ್ವವನ್ನು ನೆನಪಿಟ್ಟುಕೊಳ್ಳಲು ಮತ್ತು ಅರಿತುಕೊಳ್ಳಲು ನಮಗೆ ಅವಕಾಶವನ್ನು ನೀಡುತ್ತದೆ. ಈ ದಿನದಂದು ನಾವು ಪ್ರತಿ ವರ್ಷ ಮಹಿಳೆಯರಿಗೆ ಗೌರವವನ್ನು ನೀಡುತ್ತೇವೆ ಮತ್ತು ಪ್ರಪಂಚದಾದ್ಯಂತದ ಮಹಿಳೆಯರ ಗಮನಾರ್ಹ ಸಾಧನೆಗಳನ್ನು ಗುರುತಿಸುತ್ತೇವೆ. ಇತರರನ್ನು ಪ್ರೇರೇಪಿಸುವ, ಮುನ್ನಡೆಸುವ ಮತ್ತು ಮೇಲಕ್ಕೆತ್ತುವ ಎಲ್ಲಾ ಮಹಿಳೆಯರಿಗೆ, ಈ ವಿಶೇಷ ದಿನದಂದು ನಿಮ್ಮ ಬೆಳಕು ಇನ್ನಷ್ಟು ಪ್ರಕಾಶಮಾನವಾಗಿ ಬೆಳಗಲಿ ಎಂದು ಮಹಿಳೆಯರಿಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸುವಿಧಾ ಸಂಸ್ಥೆಯ ಅಧ್ಯಕ್ಷ ಹಾಗೂ ಲಯನ್ಸ್ ಪರಿವಾರದ ಕಾರ್ಯದರ್ಶಿ ಫಯಾಜ್ ಕಲಾದಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆ ಮೇಲೆ ಖಜಾಂಚಿ ಕೆ.ಆರ್. ಲಮಾಣಿ, ಲಯನ್ಸ್ ಪರಿವಾರದ ಸಂಸ್ಥಾಪಕ ಡಾ. ಅಶೋಕಕುಮಾರ ಜಾಧವ, ಅಕ್ಕುಬಾಯಿ ನಾಯಿಕ, ಶಶಿಕಲಾ ಇಜೇರಿ ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ಜಯಶ್ರೀ ಹೂಗಾರ (ಶಿಕ್ಷಣ ಕ್ಷೇತ್ರ), ಶೋಭಾ ಮೇಡೇಗರ್ (ಶಿಕ್ಷಣ ಕ್ಷೇತ)್ರ, ಅಕ್ಕುಬಾಯಿ ನಾಯಿಕ (ಶಿಕ್ಷಣ ಕ್ಷೇತ)್ರ, ವಿದ್ಯಾ ಕೊಟ್ಟೆನವರ (ಶಿಕ್ಷಣ ಕ್ಷೇತ)್ರ, ಶಕುಂತಲಾ (ಸಮಾಜ ಸೇವೆ ಕ್ಷೇತ್ರ) ಅವರಿಗೆ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಪೆÇ್ರ. ಎಸ್.ಎಸ್. ರಾಜಮಾನೆ, ಎಸ್.ಆರ್. ಕಟ್ಟಿ, ಸಿ.ಎಸ್. ನಿಂಬಾಳ, ವಾಲು ಚವ್ಹಾಣ, ಎಚ್.ಎಸ್. ಕಬಾಡೆ, ನಸೀಮ್ ರೋಜಿಂದಾರ್, ಸಾದಿಕ್ ಜಾನ್ವೇಕರ್, ಐ.ಸಿ. ಪಠಾಣ, ಉμÁರಾವ್, ಪುμÁ್ಪ ಮಹಾಂತ್ಮಠ, ರಜನಿ ಸಂಬಣ್ಣಿ, ಸೋಮಶೇಖರ ರಾಠೋಡ, ಶಫೀಕ್ ಜಾಗಿರದಾರ, ಹಸನ ಕಲಾದಗಿ, ಲತಿಫ್ ಕಲಾದಗಿ, ಹಾಸಿಮ್ ಕಲಾದಗಿ, ಶ್ರೇಯೇಸ್ ಮಹೇಂದ್ರಕರ, ಶ್ರೀಧರ್ ಮಹೇಂದ್ರಕರ, ಫಿದಾಹುಸೈನ್ ಕಲಾದಗಿ, ಇಲಿಯಾಸ್ ಬಡೆಘರ್ ಮುಂತಾದವರು ಇದ್ದರು.
ಸುರೇಶ ಬಿಜಾಪೂರ ನಿರೂಪಿಸಿದರು. ಪ್ರೊ.ಎಂ.ಬಿ. ರಜಪೂತರ ವಂದಿಸಿದರು.