ಸಮಾನತೆಯ ಶ್ರೇಷ್ಠ ಮಾನವ ಹಾಜಿಬಾಬಾ ಈಗ ಕಲ್ಯಾಣ ಕರ್ನಾಟಕ ರತ್ನ..!ದುರುಗಪ್ಪ ಹೊಸಮನಿ

ಲಿಂಗಸುಗೂರು.ನ.೦೮- ಪಟ್ಟಣದಲ್ಲಿ ಜನಾನುರಾಗಿ ಆಗಿರುವ ಸಮಾನತೆಯ ಶ್ರೇಷ್ಠ ಮಾನವ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಹ್ಮದ್ ಹಾಜಿಬಾಬಾ ಕರಡಕಲ್‌ರಿಗೆ ಇಂದು ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಸಿರವಾರ ಪಟ್ಟಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಜರುಗುತ್ತಿರುವ ಕನ್ನಡಮ್ಮನಿಗೆ ನುಡಿನಮನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಜೊತೆಗೆ, ಪುರಸಭೆಯ ಆಡಳಿತಾಧಿಕಾರಿ ಶಿವಲಿಂಗ ಮೇಗಳಮನಿಯವರಿಗೆ ಹಾಗೂ ಶರಣಪ್ಪ ವಾರ್ಡನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಸಮಾಜ ಸೇವೆಗಾಗಿ ತಾನು ದುಡಿದ ದುಡ್ಡನ್ನೂ ಲೆಕ್ಕಿಸದೇ ವ್ಯಯಿಸುವ ಪರಿ ಹಾಗೂ ಸನ್ನಡತೆಗೆ ಒಂದಿಷ್ಟು ಅಭಿಮಾನಿ ಬಳಗವೂ ಇವರಿಗಿದೆ. ಉತ್ತಮ ಹಾಡುಗಾರರಾಗಿರುವ ಹಾಜಿಬಾಬಾ ಸದಾ ಚುಟುಕಾಗಿ ಮಾತನಾಡುತ್ತಾ, ಎಲ್ಲರೊಂದಿಗೂ ಸಹೋದರತೆಯಿಂದ ಇರುವುದು ಇವರ ಸರಳತೆಗೆ ಸಾಕ್ಷಿಯಾಗಿದೆ. ಇವರ ಎಲೆಮರಿ ಕಾಯಿಯಂಥ ಸೇವೆಯನ್ನು ಮೆಚ್ಚಿಕೊಂಡು ಹಲವಾರು ಸಂಘ ಸಂಸ್ಥೆಗಳು ನಾನಾ ಪ್ರಶಸ್ತಿ, ಬಿರುದುಗಳನ್ನು ನೀಡಿ ಸತ್ಕರಿಸಿವೆ.
ಗದಗ ನಗರದಲ್ಲಿ ನಡೆದ ಸಮಾರಂಭದಲ್ಲಿ ಸಮಾನತೆಯ ಶ್ರೇಷ್ಠ ಮಾನವ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕನ್ನಡದ ಕಟ್ಟಾಳು, ಪರಿಸರ ಪ್ರೇಮಿ, ಶಿಕ್ಷಣ ಪ್ರೇಮಿ ಹೀಗೆ ನಾನಾ ಬಿರುದುಗಳನ್ನು ಹೊಂದಿರುವ ಹಾಜಿಬಾಬಾ ಸರಳವಾದ ನಡೆನುಡಿಯ ಮೂಲಕ ಸ್ನೇಹಿತ ವಲಯದಲ್ಲಿ ಇರುತ್ತಾರೆ. ಇವರಿಗೆ ಇಂದು ಸಿರವಾರ ಪಟ್ಟಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಜರುಗುತ್ತಿರುವ ಕನ್ನಡಮ್ಮನಿಗೆ ನುಡಿನಮನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕಲ್ಯಾಣಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಸರಕಾರಿ ನೌಕರರು ಸಾಮಾನ್ಯವಾಗಿ ತಾವಾಯಿತು, ತಮ್ಮ ಕೆಲಸವಾಯಿತು ಎಂದುಕೊಂಡು ಸ್ವಾರ್ಥಿಗಳಾಗಿರುವುದೇ ಹೆಚ್ಚು. ಆದರೆ, ಇಲ್ಲೊಬ್ಬ ಸರಕಾರಿ ನೌಕರ ಮಾತ್ರ ತನ್ನ ಜೊತೆಗೆ ತನ್ನವರ ಏಳಿಗೆಯನ್ನೂ ಬಯಸುವ ಮೂಲಕ ಪಟ್ಟಣದಲ್ಲಿ ಜನರ ಅಚ್ಚುಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಲಿಂಗಸುಗೂರು ಪುರಸಭೆಯಲ್ಲಿ ಆಡಳಿತಾಧಿಕಾರಿಯಾಗಿರುವ ಶಿವಲಿಂಗ ಮೇಗಳಮನಿಯವರ ಸದ್ದಿಲ್ಲದ ಸೇವೆಯನ್ನು ಗುರುತಿಸಿ ಸಿರವಾರ ಪಟ್ಟಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಜರುಗುತ್ತಿರುವ ಕನ್ನಡಮ್ಮನಿಗೆ ನುಡಿನಮನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಈ ಬಾರಿಯ ರಾಜ್ಯೋತ್ಸ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಶರಣಪ್ಪ ಗುರುಗುಂಟಾ ಎಂದೇ ಗುರುತಿಸಿಕೊಂಡಿರುವ ಶರಣಪ್ಪ ಕುಷ್ಟಗಿ ಅವರು ಓರ್ವ ವಾರ್ಡನ್ ಆಗಿ ಸೇವೆ ಸಲ್ಲಿಸುತ್ತಿದ್ದರೂ ವಿದ್ಯಾರ್ಥಿಗಳಿಗೆ ಪರಕೀಯ ಭಾವನೆ ಬಾರದಂತೆ ನೋಡಿಕೊಳ್ಳುವ ಮೂಲಕ ಇಲಾಖೆಯಲ್ಲೇ ಅಚ್ಚುಮೆಚ್ಚಿನ ಸಿಬ್ಬಂಧಿ ಎಂದು ಖ್ಯಾತನಾಮರಾಗಿದ್ದಾರೆ. ಇವರ ಈ ಸೇವೆಯನ್ನು ಗುರುತಿಸಿ ಸಿರವಾರ ಪಟ್ಟಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಜರುಗುತ್ತಿರುವ ಕನ್ನಡಮ್ಮನಿಗೆ ನುಡಿನಮನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಈ ಬಾರಿಯ ರಾಜ್ಯೋತ್ಸ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.