ಸಮಾನತೆಯ ತತ್ವ ಬೋಧಿಸಿದ ವಿಶ್ವಗುರು ಬಸವಣ್ಣ

ಕೆಂಭಾವಿ:ಎ.24:ಸಮಾಜಕ್ಕೆ ಸಮಾನತೆಯ ತತ್ವ ಬೋಧಿಸಿದ ವಿಶ್ವಗುರು ಬಸವಣ್ಣನವರು ಸಮಾನತೆಯ ಹರಿಕಾರರಾಗಿದ್ದಾರೆ ಎಂದು ಕೆಂಭಾವಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುದಿಗೌಡ ಮಾಲಿಪಾಟೀಲ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಾಯಕಯೋಗಿ ವಿಶ್ವಗುರು ಬಸವಣ್ಣನವರ 890 ನೆ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. 12 ನೆ ಶತಮಾನದಲ್ಲಿಯೆ ಜಾತಿ ಬೇಧಗಳ ವಿರುದ್ಧ ಹೋರಾಡಿದ ಮಹಾನ್ ಮನವತಾವಾದಿ ಅವರು. ಅಂದಿನ ಸಮಯದಲ್ಲಿಯೆ ಮೊದಲ ಪಾರ್ಲಿಮೆಂಟ್ ರಚಿಸಿ ಸರ್ವರಿಗೂ ಮಾತನಾಡಲು ಅವಕಾಶ ನೀಡಿದ ಮೇರು ವ್ಯಕ್ತಿತ್ವದವರು. ತಮ್ಮ ವೈಯಕ್ತಿಕ ಬದುಕಿಗೆ ಬಡಿದಾಡದೆ ಸಮಾಜದ ಒಳಿತಿಗೆ ದುಡಿದ ಆಧ್ಯಾತ್ಮ ಜೀವಿಯಾಗಿದ್ದಾರೆ ಎಂದು ತಿಳಿಸಿದರು.

ಹಿರೇಮಠದ ಷ.ಬ್ರ.ಚನ್ನಬಸವ ಶಿವಾಚಾರ್ಯರು ಬಸವ ಧ್ವಜಾರೋಹಣ ಮಾಡಿದರು. ವೇ.ಮೂ.ಚನ್ನಯ್ಯ ಚಿಕ್ಕಮಠ, ರಾಜಶೇಖರಯ್ಯ ಹಿರೇಮಠ, ಪ್ರಮುಖರಾದ ಬಸನಗೌಡ ಯಡಿಯಾಪುರ, ಭೀಮನಗೌಡ ಕಾಚಾಪುರ, ಮಹಿಪಾಲರೆಡ್ಡಿ ಡಿಗ್ಗಾವಿ, ಸಂಗಣ್ಣ ತುಂಬಗಿ, ಮುದಕಣ್ಣ ಹುಣಸಗಿ, ಮಲ್ಲೇಶಪ್ಪ ಕಾಚಾಪುರ, ಸಿದ್ದು ಬೈಚಬಾಳ, ಗುರುಲಿಂಗಯ್ಯ ಇಂಡಿ, ರಮೇಶ ಸೊನ್ನದ, ಪ್ರಕಾಶ ಸೊನ್ನದ, ರಾಘವೇಂದ್ರ, ಮಲ್ಲು ಕೀಲಿ, ಅಮೃತ ಅಂಗಡಿ, ದೇವು ಹಡಪದ, ಅಮರಪ್ಪ ಶಹಾಪುರ, ಅಣ್ಣಪ್ಪ ಗುಬ್ಯಾಡ, ಭೋಗಣ್ಣ, ಶರಣಪ್ಪ ನಗನೂರ, ವೀರೇಶ ಬಂಡೋಳಿ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಅನೇಕರಿದ್ದರು.