ಸಮಾನತೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ


ರಾಮದುರ್ಗ,ಅ.28- ಸಂಘ- ಸಂಸ್ಥೆಗಳ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಸಾಗಿದಾಗ ಮಾತ್ರ ಸಾಧ್ಯ ಉನ್ನತ ವ್ಯಾಸಂಗಕ್ಕೆ ಮಕ್ಕಳಿಗೆ ಅರ್ಥಿಕ ಸಹಾಯ, ಹಾಗೂ ಹಿಂದುಳಿದ ಜನಾಂಗದ ಅಭಿವೃದ್ದಿಗೆ ಸಹಾಯ ಮಾಡಿ ಮುಖ್ಯವಾಹಿನಿಗೆ ಬರಲು ಸಂಸ್ಥೆ ಕೆಲಸ ಮಾಡಲಿ ಎಂದು ಗ್ರಾ.ಕು.ನೀ.ಹಾಗೂ ನೈ, ಉಪವಿಭಾಗದ ಎಇಇ ಶ್ರೀನಿವಾಸ ವಿಶ್ವಕರ್ಮ ಹೇಳಿದರು
ಸ್ಥಳೀಯ ಶ್ರೀ ಮೌನೇಶ್ವರ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿ ಲಿ, ಗಣಕಿಕೃತ ನವೀಕರಣದ ಶಾಖೆಯನ್ನು ಸಂಕನಗೌಡ್ರ ಬಿಲ್ಡಿಂಗನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ವಿಶ್ವಕರ್ಮ ಸಮಾಜದವರು ಪಂಚಕಲೆಗಳನ್ನು ಹೊಂದಿದವರು ಕಲೆಗಳು ವಂಶಪರಂಪೆಯಾಗಿ ಬಂದಿವೆ ಇಂತಹ ಕಲೆಗಳ ಜೊತೆಗೆ ಅಧುನಿಕತೆ ತಕ್ಕಂತೆ ಬದಲಾಗುತ್ತಾ, ಎಲ್ಲರೂ ಸಮಾನತೆಯಿಂದ ಸಾಗಿದರೆ ಸಮಾಜ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ರಾಮದುರ್ಗ ಮಳಿರಾಜ ಮಠ ಶ್ರೀ ಅಭಿನವ ಅಪ್ಪಯ್ಯ ಸ್ವಾಮಿಗಳು ಆರ್ಶಿವಚನ ನೀಡುತ್ತಾ ಎಲ್ಲರೂ ಒಗ್ಗಟ್ಟಾಗಿ ಕೇವಲ ವಿಶ್ವಕರ್ಮ ಸಮಾಜಕ್ಕೆ ಸೀಮಿತವಾಗದೆ ಎಲ್ಲ ಸಮಾಜದ ಜನರಿಗೆ ಅರ್ಥಿಕ ಸಹಾಯ ಮಾಡುತ್ತಾ ಅವರ ಬಾಳಿಗೆ ಹೊಸ ಬೆಳಕು ನೀಡಬೇಕು ಸಾಲ ಪಡೆದುಕೊಂಡವರು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡುತ್ತಾ ಹಣಕಾಸು ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ಹೇಳಿದರು..
ಅಧ್ಯಕ್ಷತೆ ವಹಿಸಿದ್ದ ವಿ. ಡಿ. ಕಂಬಾರ ಮಾತನಾಡಿ ಸಂಘ ಸಾಕಷ್ಟು ಏಳು ಬೀಳುಗಳ ನಡುವೆ ಇಂದು ಹೊಸ ಆವಿಷ್ಕಾರÀದೊಂದಿಗೆ ಉತ್ತಮ ಬ್ಯಾಂಕಿಂಗನ್ನು ವ್ಯವಸ್ಥೆ ಕಲ್ಪಿಸಬೇಕು ಎಂಬ ಮಹದಾಸೆಯಿಂದ ಪ್ರಾರಂಭವಾಗುತ್ತಿದೆ ಎಲ್ಲರೂ ಸಹಾಯ ಸಹಕಾರ ನೀಡಬೇಕು ಎಂದು ಹೇಳಿದರು.
ಈ ಸಂದಂರ್ಭದಲ್ಲಿ ಸಂಸ್ಥಾಪಕ ಆಡಳಿತ ಮಂಡಳಿಯ ಸದಸ್ಯರನ್ನು ಸನ್ಮಾನಿಸಿಲಾಯಿತು. ಡಾ. ಬಾಪುಗೌಡ ಎಲ್. ಸಂಕನಗೌಡರ, ರಾಕೇಶ ಪತ್ತೇಪೂರ, ಉಪಾಧ್ಯಕ್ಷೆ ರೇಖಾ ಎಚ್.ಪತ್ತಾರ ಆಡಳಿತ ಮಂಡಳಿ ಸದಸ್ಯರಾದ ಗೀತಾ.ಎಚ್.ಬಡಿಗೇರ ಹನಮಂತ ಪತ್ತಾರ, ನಾಗಪ್ಪ ಬಿ.ಸಾಲಿ, ಅನಂತ ಬಿ. ಕಮ್ಮಾರ, ಗುರಪ್ಪ ಕೆ. ಪತ್ತಾರ, ಮಹಾದೇವಿ. ಮಾದರ, ಕಾರ್ಯದರ್ಶಿ ಕವಿತಾ ಮಾನೆ, ಸೇರದಂತೆ ಸಿಬ್ಬಂದಿ ವರ್ಗ ಮತ್ತು ಸಮಾಜ ಬಾಂಧವರು,
ರಾಜಶೇಖ ಶಲವಡಿ, ಪ್ರಾಸ್ತಾವಿಕವಾಗಿ ಮಾತನಾಡಿದರು ಕೃಷ್ಣಾ ಬಡಿಗೇರ ಸ್ವಾಗತಿಸಿರು ಮುತ್ತು ಕಮ್ಮಾರ ನಿರೂಪಿಸಿ ವಂದಿಸಿದರು.