ಸಮಾನತೆಯಿಂದ ನಡೆದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ

ಹರಪನಹಳ್ಳಿ.ಅ.೩೧ :ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೃಜನಶೀಲತೆಯೊಂದಿಗೆ ಸಮಾಜದಲ್ಲಿ ಜಾಗೃತರಾಗಬೇಕಾಗಿದೆ ಎಂದು ಸಿವಿಲ್ ನ್ಯಾಯಾಧೀಶರಾದ ಫಕ್ಕೀರಪ್ಪ ಕೆಳಗೇರಿ ಅಭಿಪ್ರಾಯಪಟ್ಟರುಪಟ್ಟಣದ ಕೆ.ಸಿ.ಎ.ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಾಡಾಗಿದ್ದ ಅಂತರರಾಷ್ಟ್ರೀಯ ಹೆಣ್ಣು ಮಕ್ಕಳು ದಿನಾಚರಣೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.ಪ್ರೌಢ ವಸ್ಥೆಯಲ್ಲಿರುವ ಹೆಣ್ಣು ಮಕ್ಕಳು ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಅರಿತುಕೊಳ್ಳುಬೇಕು. ಯಾರೂ ಕೂಡ ಧೃತಿಗೆಡದೇ ಧೈರ್ಯದಿಂದ ಸಮಾಜದಲ್ಲಿ ಆತ್ಮವಿಶ್ವಾಸದಿಂದ ನಡೆದುಕೊಳ್ಳಬೇಕು, ಮಹಿಳೆಯರಿಗಾಗಿ ಅನೇಕ ಕಾನೂನು ಕಾಯ್ದೆಗಳು ಇವೆ, ಇಂತಹ ಕಾನೂನು ಕಾಯ್ದೆಗಳನ್ನು ಹೆಣ್ಣುಮಕ್ಕಳು ಉಪಯೋಗ ಪಡಿಸಿಕೊಳ್ಳಬೇಕೇ ಹೊರತು ದುರುಪಯೋಗ ಪಡಿಸಿಕೊಳ್ಳಬಾರದು ಎಂದರು.ಸಮಾಜದಲ್ಲಿ ಹೆಣ್ಣುಮಕ್ಕಳು ಸಮಾನತೆಯಿಂದ ನಡೆದಾಗ ಮಾತ್ರ ಗುರಿ ಮುಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ವಕೀಲರ ಸಂಘದ ಅಧ್ಯಕ್ಷ ಕೆ.ಜಗದಪ್ಪ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳು ಮೌಡ್ಯ ಸಂಪ್ರದಾಯವನ್ನು ಬದಿಗೊತ್ತಿ, ಸಮಾಜದ ಸನ್ಮಾರ್ಗದಲ್ಲಿ ನಡೆಯಬೇಕು, ಹೆಣ್ಣು-ಗಂಡು ಎಂಬ ತಾರತಮ್ಯವನ್ನು ಹೋಗಲಾಡಿಸಬೇಕು, ವಿದ್ಯೆ ಎನ್ನುವುದು ಯಾರ ಸ್ವತ್ತಲ್ಲ ಅವರವರ ಸ್ವತ್ತು. ಆದ್ದರಿಂದ ಹೆಣ್ಣುಉನ್ನತ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂದು ಹೇಳಿದರು.ಸಾಹಿತಿ ಇಸ್ಮಾಯಲ್ ಎಲಿಗಾರ್ ಉಪ ನ್ಯಾಸ ನೀಡಿ, ಹೆಣ್ಣು ಮಕ್ಕಳು ಎಲ್ಲಾ ರಂಗಗಳಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ ಮನೆಯಲ್ಲಿ ಹೆಣ್ಣು ಇದ್ದರೆ ಮಾತ್ರ ಸುಂದರವಾದ ಕುಟುಂಬವನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ. ವಿದ್ಯಾರ್ಥಿನಿ ಯರು ಆತ್ಮಾಧೈರ್ಯವನ್ನು ತುಂಬಿಕೊಳ್ಳಬೇಕು. ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡಬೇಕು. ಹೆಣ್ಣು ಮಕ್ಕಳು ಸಂಕೋಚ, ಕೀಳರಿಮೆಯನ್ನು ಬಿಟ್ಟು ಧೈರ್ಯದಿಂದ ಮುಂದೆ ನಡೆದಾಗ ಮಾತ್ರ ಗುರಿ ಮುಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದರು,