ಸಮಾನತೆಗೆ ಶ್ರಮಿಸಿದ ಮಹಾನ್ ನಾಯಕ ಬಸವಣ್ಣ

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಮೇ.೧೧; ಸಮಾಜದಲ್ಲಿನ ಅಸಮಾನತೆಯ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಸಮಾನತೆಯ ಹರಿಕಾರರಾಗಿದ್ದರು ಎಂದು ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಜಗಜ್ಯೋತಿ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಎಂಟುನೂರು ವರ್ಷಗಳ ಹಿಂದೆಯೇ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜವನ್ನು ಸುಧಾರಣೆಗೆ ತರಲು ಶ್ರಮಿಸಿದ್ದರು ಎಂದ ಅವರು ಹೇಮರೆಡ್ಡಿ ಮಲ್ಲಮ್ಮ ಕೂಡ ಬಸವಣ್ಣನವರ ತತ್ವದ ಆಧಾರದ ಮೇಲೆ ಸಾಗಿದ್ದರು ಎಂದರು.ತಹಶೀಲ್ದಾರ ಗಿರೀಶಬಾಬು ಮಾತನಾಡಿ ಸಮಾಜದಲ್ಲಿ ಬೇರುಬಿಟ್ಟಿದ್ದ ಮೇಲು-ಕಿಳು, ಜಾತಿ ವ್ಯವಸ್ಥೆ ವಿರುದ್ಧ ಬಸವಣ್ಣನವರು ನಿರಂತರ ಹೋರಾಟ ಮಾಡಿದರು, ಅವರ ತತ್ವಾದರ್ಶಗಳನ್ನು ನಾವೇಲ್ಲಾರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರೇಡ್-೨ ತಹಶೀಲ್ದಾರ್ ನಟರಾಜ, ಪುರಸಭಾ ಸದಸ್ಯ ಗೊಂಗಡಿ ನಾಗರಾಜ ಸಮಾಜದ ಮುಖಂಡರಾದ ಪಾಟೀಲ್ ಬೆಟ್ಟನಗೌಡ, ಟಿ.ಎಚ್.ಎಂ.ಮಲ್ಲಿಕಾರ್ಜುನ ,  ಅಂಬ್ಲಿ ಮಂಜುನಾಥ, ಚನ್ನನಗೌಡ, ಅಡವಿಹಳ್ಳಿ ಪೂಜಾರ ಬಸವರಾಜ, ಕೆ.ಎಂ.ಬಸವರಾಜಯ್ಯ, ದೇವರಾಜ, ಶೇಖರ ಪಾಟೀಲ್, ಬಸವನಗೌಡ, ರಾಜು, ದಿವಾಕರ, ಪ್ರಭಾಕರ, ನಾಗರಾಜ, ಸುಮಾ ಮಹೇಶ, ರುದ್ರಮುನಿ ಸೇರಿದಂತೆ ಇತರರು ಇದ್ದರು.