ಸಮಾನತೆಗೆ ರಂಗ ಭೂಮಿ ಕೊಡುಗೆ ಆಪಾರ

ಬಳ್ಳಾರಿ ಮಾ 28 : ಸಮೂಹ ಕಲೆಯಾಗಿ ರೂಪಗೊಂಡಿರುವ ರಂಗ ಭೂಮಿಯಲ್ಲಿ ಸಮಾಜದ ಪ್ರತಿಯೊಂದು ವರ್ಗದವರೂ ಪಾಲ್ಗೊಳ್ಳುವುದರಿಂದ ಇಲ್ಲಿ ಅಸಮಾನತೆಯ ಪ್ರಶ್ನೆ ಮೂಡುವುದಿಲ್ಲ. ಹಿಗಾಗಿ ಸಮಾನತೆಗೆ ರಂಗ ಭೂಮಿ ಕೊಡುಗೆ ಆಪಾರ ಎಂದು ಹಣಕಾಸು ವಿಭಾಗದ ಆಧಿಕಾರಿ ಕೆ.ಸಿ ಪ್ರಶಾಣತ್ ಆಭಿಪ್ರಾಯ ಪಟ್ಟರು.
ವಿಎಸ್‍ಕೆ. ವಿವಿಯ ನಾಟಕ ವಿಭಾಗವು ರಂಗ ಭೂಮಿ ದಿನದ ಪ್ರಯೂಕ್ತ ಆಯೋಜಿಸಿದ್ದ ರಂಗ ಸಂಗಿತ, ಕೋಲಾಟ, ಬೀದಿ ನಾಟಕ, ವಿಶ್ವ ರಂಗ ಬೂಮಿ ಸಂದೇಶ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ವಿಭಿನ್ನ ಮನಸ್ಥಿತಿಯವರು ಒಂದೆಡೆ ಕಲೆತು ಕಾರ್ಯ ನಿರ್ವಹಿಸುವುದರಿಂದ ಪರಸ್ವರರಲ್ಲಿ ಗೌರವ ಮಿಗಿಲಾಗಿ ತನ್ನನ್ನು ತಾನು ಅರ್ಥೈಸಿಕೊಳ್ಳುವುದು ಸಾಧ್ಯವಾಗುವುದಲ್ಲದೇ ಸಮಾಜದ ಹಲವು ಆಯಾಮಗಳನ್ನು ಅರಿಯುವಲ್ಲಿ ಸಾಧ್ಯವಾಗುವುದು. ಅವಿದ್ಯಾವಂತೆ ವರ್ಗದವರಾದರೂ ಸರಿ; ನಟನಾ ಕೌಶಲ ಕರಗತವಾಗಿದ್ದಲ್ಲಿ ಅಂಥವರೂ ಕೂಡ ಸಮಾಜದ ಆಗು-ಹೋಗುಗಳಿಗೆ ಸ್ವಂದಿಸುವ ಜವಾಬ್ದಾರಿಯುತ ವ್ಯಕ್ತಿಯಾಗುತ್ತಾರೆ ಎಂದರು .
ನಾಟಕ ವಿಭಾಗದ ಮುಖ್ಯಸ್ಥ ಶಾಂತಾ ನಾಯಕ್ ಮಾತನಾಡಿ, ಬಾಲ್ಯವಿವಾಹ ಬೀದಿ ನಾಟಕ ಮನರಂಜನೆಯ ಉದ್ದೇಶಕ್ಕಾಗಿ, ಮೌಲ್ಯಗಳ ಪ್ರತಿಪಾದನೆಗಾಗಿ ಸೀಮಿತಗೊಂಡಿದ್ದ ಇಂತಹ ಕಲಾ ಪ್ರಕಾರಗಳು ಇಂದು ಅಧ್ಯಯನದ ಶಿಸ್ತುಗಳಾಗಿ ಬೆಳೆದು ನಿಂತಿವೆ. ರಂಗಭೂಮಿ ಮತ್ತು ಸಿನಿಮಾಗಳೂ ಕೂಡಾ ವರ್ತಮಾನದಲ್ಲಿ ಅಧ್ಯಯನದ ವಿಷಯಗಳಾಗಿ ಶೈಕ್ಷಣಿಕ ವಲಯಗಳಲ್ಲಿ ವಿಶ್ಲೇಷಣೆಗೆ ಒಳಗಾಗುತ್ತಿವೆ. ರಂಗಭೂಮಿ ಅಧ್ಯಯನದ ಸಂದರ್ಭದಲ್ಲಿ ಒಟ್ಟಾರೆ ರಂಗಭೂಮಿಯನ್ನು ಅಧ್ಯಯನ ಅನುಕೂಲಕ್ಕಾಗಿ ಜನಪದ ರಂಗಭೂಮಿ, ವೃತ್ತಿರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಎಂದು ವರ್ಗೀಕರಿಸಲಾಗುತ್ತದೆ. ಎಂದು ತಿಳಿಸಿದರು.
ಕುಲ ಸಚಿವ ಶಶಿಕಾಂತ್ ಮಾತನಾಡಿ, ಕಲೆಗಳೆಲ್ಲವನ್ನೂ ತನ್ನೊಡಲಿನೊಳಗೆ ಅಡಗಿಸಿ ಕೊಂಡಿರುವ ರಂಗಭೂಮಿಯು ಇಂದಿನ ತಂತ್ರಜ್ಞಾನ ಯುಗದ ಅಬ್ಬರದಲ್ಲೂ ತನ್ನತನವನ್ನು ಅಚ್ಚಳಿಯದೇ ಸಮಾಜಮುಖಿ ಚಿಂತನೆಯತ್ತ ತೊಡಗಿಸಿ ಕೊಂಡಿರುವುದು ನಿಜಕ್ಕೂ ಅಭಿಮಾನದ ಸಂಗತಿ ಎಂದರು.
ನಾಟಕ ಕಲಾ ವಿಭಾಗದ ಉಪನ್ಯಾಸಕರಾದ ಅಣ್ಣಾಜಿ ಕೃಷ್ಣ ರೆಡ್ಡಿ .ಅತಿಥಿ ಉಪನ್ಯಾಸಕರಾದ ಸಹನ ಪಿಂಜಾರ್ ಸಂದೇಶ ವಾಚನ ಮಾಡಿದರು. ಕನ್ನಡ ,ಅರ್ಥಶಾಸ್ತ್ರ ವಿಭಾಗ ವಿದ್ಯಾರ್ಥಿಗಳಿಂದ ಬಾಲ್ಯ ವಿವಾಹ ಬೀದಿ ನಾಟಕ ಪ್ರದರ್ಶನ. ಪ್ರದರ್ಶನ ಕಲೆ (ನಾಟಕ) ವಿಭಾಗದ ವಿದ್ಯಾರ್ಥಿಗಳು ಮುಕ್ತ ಪತ್ರಿಕೆ ವಿದ್ಯಾರ್ಥಿಗಳು ಹಾಗೂ ಇತರೆ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.