ಸಮಾನತೆಗಾಗಿ ಹೋರಾಡಿದವರು ಗುರುನಾನಕರು

(ಸಂಜೆವಾಣಿ ವಾರ್ತೆ)
ಔರಾದ :ನ.9: ಗುರು ನಾನಕರು ಜಾತಿವಾದ ಬಗ್ಗೆ, ಮಹಿಳೆಯರ ಸಮಾನ ಸ್ಥಾನಮಾನಗಳ ಸಮಾನತೆಯಾಗಿ ಹೋರಾಡಿದವರು ಗುರುನಾನಕರು ಎಂದು ಗುಡಪಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ ಹೇಳಿದರು.
ತಾಲೂಕಿನ ಸಂತಪುರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಗುರು ನಾನಕ ಜಯಂತಿ ಹಾಗೂ ಶರಣೆ ನೀಲಾಂಬಿಕಾ ರವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಸಿಖ್ಖರ ಪವಿತ್ರ ಗ್ರಂಥವಾದ ‘ಗುರು ಗ್ರಂಥ ಸಾಹೇಬ್’ವನ್ನು ಗುರುನಾನಕ್ ಜಯಂತಿ ಎಂದು ಬೋಧಿಸಿ ಗುರುನಾನಕ್ ರವರ ಸಂದೇಶಗಳ ಮಹತ್ವವನ್ನು ಸಾರಲಾಗುತ್ತದೆ. ಜ್ಞಾನಕ್ಕೆ ಸದಾ ಪೆÇ್ರೀತ್ಸಾಹ ದೊರಕುತ್ತದೆ ಹಾಗಾಗಿ ವಿದ್ಯಾರ್ಥಿಗಳು ಸತತ ಜ್ಞಾನ ಗ್ರಹಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಪ್ರಾಂಶುಪಾಲ್ ನವೀಲಕುಮಾರ ಉತ್ಕಾರ್ ಮಾತನಾಡಿ ಗುರು ನಾನಕರು ಸಹಜ ಹಾಗೂ ಸರಳ ವ್ಯಕ್ತಿತ್ವ ಹೊಂದಿದವರು. ಗುರು ನಾನಾಕರವರು ಆಕರ್ಷಕ ವ್ಯಕ್ತಿ ಇರುವುದರಿಂದ ಅವರ ಹಿಂಬಾಲಕರನ್ನು ಸಿಖ್ಖರು ಎಂದು ಕರೆಯುತ್ತಿದ್ದರು. ದೇಶಕ್ಕೆ ಸೌಹಾರ್ದತೆಯ ಕೊಡುಗೆ ನೀಡು ಮೂಲಕ ಗುರುನಾನಕ್ ರವರ ಆದರ್ಶಗಳು ಎಂದೆಂದಿಗೂ ಪ್ರಸ್ತುತ ಎಂದರು. ಶರಣೆ ನೀಲಾಂಬಿಕೆ ತಾಯಿಯವರು ಶುದ್ಧ ಕಾಯಕದಲ್ಲಿ ದೇವರನ್ನು ಕಂಡಂತವರು ಹಲವಾರು ಜನರ ಮನ ಪರಿವರ್ತಿಸಿ ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಶಿವಪುತ್ರ ಧರಣಿ ಮಾತನಾಡಿದರು. ಕಲ್ಲಪ್ಪ ಬುಟ್ಟೆ, ಈರಮ್ಮ ಕಟಗಿ,ಸುಧಾ ಕೌಟಿಗೆ, ವನದೇವಿ ಎಕ್ಕಳೆ, ವೀರಾತಾಯಿ ಕಾಂಬಳೆ ಮತ್ತು ಇತರರು ಉಪಸ್ಥಿತರಿದ್ದರು