ಸಮಾಧಾನದಿಂದ ಚುನಾವಣೆ ನಡೆಸಿ

ಭಾಲ್ಕಿ:ಎ.17:ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವ ಪಿಆರ್‍ಓ ಸೇರಿದಂತೆ ಇತರೆ ಚುನಾವಣೆ ಸಿಬ್ಬಂದಿ ಸಮಾಧಾನದಿಂದ ಮತ್ತು ಏಕಾಗೃತೆಯಿಂದ ಹಾಗೂ ನಿರ್ಭಯದಿಂದ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಎಆರ್‍ಓಆದ ತಹಸೀಲ್ದಾರ ಪ್ರೇಮಸಿಂಗ ಪವಾರ ತಾಕೀತು ಮಾಡಿದರು.

ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಪಿಆರ್‍ಓರವರಿಗಾಗಿ ಹಮ್ಮಿಕೊಂಡ ಇವಿಎಂ,ವಿವಿಪ್ಯಾಟ್,ಸಿಯು,ಬಿಯು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಚುನಾವಣೆ ಕರ್ತವ್ಯದಲ್ಲಿ ಪಾಲ್ಗೊಳ್ಳುವವರಿಗೆ ಬದಲಾದ ಚುನಾವಣಾ ಮಾರ್ಗಸೂಚಿ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಮಾಸ್ಟರ್ ಟ್ರೇನರ್ ಮಲ್ಲಿಕಾರ್ಜುನ ಕನಾಳೆ ಮಾತನಾಡಿ,ಮೇ 10 ರಂದು ಚುನಾವಣೆ ಬೆಳಿಗ್ಗೆ 7.00ಗಂಟೆಯಿಂದ ಸಾಯಂಕಾಲ 6.00ಗಂಟೆವರೆಗೆ ನಡೆಯುತ್ತದೆ.ಚುನಾವಣೆ ದಿನದಂದು ಮುಂಜಾನೆ ಪಿಆರ್‍ಓ ಪೋಲಿಂಗ ಏಜೆಂಟರ್ ಸಮಕ್ಷಮದಲ್ಲಿ ಅಣಕು ಮತದಾನ ಮಾಡಿ ತೋರಿಸುವುದು ಕಡ್ಡಾಯವಾಗಿದೆ. ಮತಯಂತ್ರಗಳಾದ ಸಿಯು,ಬಿಯು,ವಿವಿಪ್ಯಾಟ್ ಯುನಿಟ್‍ಗೆ ಜೋಡಣೆ ಮತ್ತು ಚಾಲೆಂಜ್ ಮತ ಮತ್ತು ಟೆಂಡರ್ ಬ್ಯಾಲೇಟ್,ವಿಭಿನ್ನತಾ ಗುರುತಿನ ಮುದ್ರೆ,ಗ್ರೀನ ಪೇಪರ್ ಸೀಲ್ ಬಳಕೆ ಕುರಿತು ಸವಿವರವಾದ ಮಾಹಿತಿ ನೀಡಿದರು.

ಕಂಟ್ರೋಲ್

ಚುನಾವಣಾಧಿಕಾರಿ ಜಗದೇವ ಬಿ.,ಚುನಾವಣಾ ಸಿಬ್ಬಂದಿಗಳಾದ ರಘು ಪಿ.,ಶ್ರೀಶೈಲ್,ಮಾಸ್ಟರ್ ಟ್ರೇನರ್ ಸುಖದೇವ ಬಿರಾದಾರ,ಮಾರುತಿ ಸಗರ,ಸೆಕ್ಟರ್ ಅಧಿಕಾರಿ ಮಹಮ್ಮದ ಅಥರಅಲಿ ಸೇರಿದಂತೆ ಪಿಆರ್‍ಓ ಇದ್ದರು.