ಸಮಾಜ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ: ಮಹೇಶ್ವರಿ ವಾಲಿ

ಕಲಬುರಗಿ;ಮೇ.21: ‘ಸಮಾಜ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ. ಸಮಾಜ ಸೇವೆ ಒಂದು ಪುಣ್ಯದ ಕೆಲಸವಾಗಿದೆ. ತಮ್ಮ ಕೆಲಸದಲ್ಲಿ ಯಾರು ಅಪ್ರಾಮಾಣಿಕತೆಯಿಂದ ಇರುತ್ತಾರೆ ಅವರು ಎಷ್ಟೆ ಹಣ ಗಳಿಸಿದರೂ ಅವರಿಗೆ ನೆಮ್ಮದಿ ಬದುಕು ಇರುವುದಿಲ್ಲ. ಮನುಷ್ಯ ಇಂದು ಕೇವಲ ಹಣ ಗಳಿಕೆಗೆ ಮಾತ್ರ ಸೀಮಿತನಾಗಿರುವುದರ ಜತೆಗೆ ಸ್ವಾರ್ಥಿಗಳಾಗಿದ್ದಾರೆ. ಕೇವಲ ತಾವು ಹಾಗೂ ತಮ್ಮ ಕುಟುಂಬ ಕಷ್ಠೆ ಸೀಮಿತರಾಗಿದ್ದು, ಸಮಾಜದ ಅಭಿವೃದ್ಧಿಗೆ ಹಣವುಳ್ಳವರು ಶ್ರಮಿಸುತ್ತಿರುವುದು ವಿರಳವಾಗಿದೆ. ಯಾರನ್ನಾದರೂ ಬೆಟ್ಟು ಮಾಡುವ ಬದಲು ಅವರಿಗೆ ಅವಕಾಶ ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡಬೇಕು. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಂಕಲ್ಪ ತೊಟ್ಟರೆ ಮಾತ್ರ ಸಮಾಜದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಮಾಜ ಸೇವಕಿ ಅವರು ತಮ್ಮ ಮನದಾಳದ ಮಾತನ್ನು ಸಮಾಜ ಸೇವಕಿ ಮಹೇಶ್ವರಿ ವಾಲಿ ಅವರು ಹೇಳಿದರು.

ಕೋವಿಡ್-19 2ನೇ ಅಲೆಯಲ್ಲಿ ಸುಮಾರು 250 ಬಡ ನಿರ್ಗತಿಕರಿಗೆ ಪ್ರತಿ ದಿನ ಅನ್ನ ಸಂತರ್ಪಣೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರತಿ ದಿನ ಬಡ ನಿರ್ಗತಿಕರ ಮನೆಗಳಿಗೆ ಗುಡಿಸಲುಗಳಿಗೆ ತೆರಳಿ ಅನ್ನ ಸಂಪರ್ತಣೆ ಮಾಡಿ ಅವರೊಂದಿಗೆ ತಾವು ಊಟವನ್ನು ಮಾಡುವಂತಹ ಮಹಾನ ದಯಾಳುಗಳು ಎಂದು ಗುಡಿಸಲಿನಲ್ಲಿ ವಾಸಿಸುವಂತಹ ಬಡ ನಿರ್ಗತಿಕರು ಹೇಳಿದರುವಂತಹ ಮಾತಾಗಿದೆ.

ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಬಡ ಕುಟುಂಬಗಳಿಗೆ ಆಹಾರದ ಕಿಟ್ಟ್, ಬಟ್ಟೆಗಳು, ಹಾಗೂ ಗುಡಿಸಲುಗಳಿಗೆ ತೆರಳಿ ಅಲ್ಲಿ ವಾಸಿಸುವ ಕುಟುಂಬಗಳಿಗೂ ಆಹಾರದ ಕಿಟ್ಟ್, ಹಾಗೂ ಬಟ್ಟೆಗಳನ್ನು ವಿತರಿಸುತ್ತ ಸಮಾಜ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಅದೇ ರೀತಿಯಾಗಿ ನಗರದಲ್ಲಿ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತರಳಿ ಅನ್ನ ಸಂತರ್ಪಣೆ ಆಹಾರದ ಕಿಟ್ಟ್‍ಗಳನ್ನು ವಿತರಿಸಿ ಅವರುಗಳ ಜೊತೆಗೂಡಿಕೊಂಡು ಅವರುಗಳಿಗೆ ಊಟವನ್ನು ಬಡಿಸಿ ಅವರುಗಳ ಜೊತೆ ತಾವು ಕುಳಿತುಕೊಂಡು ಊಟ ಮಾಡುತ್ತಾ ಅವರುಗಳ ಕಷ್ಠಗಳನ್ನು ಕೇಳುತ್ತ ಅವುಗಳನ್ನು ಆಲಿಸಿ ಅವರ ಕೈಲಾದ ಸಹಾಯವನ್ನು ಮಾಡುವಂತಹ ಗುಣವಂತಿ ಮಹೇಶ್ವರಿ ವಾಲಿ ಅವರದ್ದಾಗಿದೆ.