ಸಮಾಜ ಸೇವೆಯಿಂದ ಮನಸ್ಸಿಗೆ ನೆಮ್ಮದಿ: ಸಂತೋಷ ಶೆಟ್ಟಿ

ಹುಬ್ಬಳ್ಳಿ,ಜೂ8: ಕೊರೊನಾ ಲಾಕ್ ಡೌನ್ ಸಂದಿಗ್ಧ ಸಂದರ್ಭದಲ್ಲಿ ಸಮಾಜ ಸೇವಕ, ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತರಾದ ಸಂತೊಷ ಆರ್. ಶೆಟ್ಟಿ ಅವರು ಅಂಗವಿಕಲರು, ಪೌರಕಾರ್ಮಿಕರು, ಮನೆಗೆಲಸದವರು, ಕ್ಷೌರಿಕರು, ಅಟೊ ಚಾಲಕರು, ಕಡು ಬಡವರು, ಬಡ ರೈತರಿಗೆ ಒಂದು ತಿಂಗಳ ದಿನಸಿ ಕಿಟ್ ಹಾಗೂ ಒಂದು ಸಸಿಯನ್ನು ನೀಡಿ ನೆರವಿನ ಹಸ್ತ ಚಾಚಿದ್ದಾರೆ.
ಡಾಲರ್ಸ್ ಕಾಲೋನಿಯ ಉದ್ಯಾನದಲ್ಲಿ ನಡೆದ ಕಾಯಕ್ರಮಕ್ಕೆ ನಗರದ ಗೋಕುಲ ರಸ್ತೆ ಪೆÇಲೀಸ್ ಠಾಣೆ ಇನ್ಸಪೆಕ್ಟರ್ ಎಂ.ಜೆ.ಕಾಲಿಮಿರ್ಚಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಡವರಲ್ಲಿಯೇ ದೇವರನ್ನು ಕಾಣಬೇಕು. ಬಡವರ ಸೇವೆಯೇ ನಿಜವಾದ ಪೂಜೆ. ಇಂದಿನ ಕೊರೊನಾದಂತಹ ಸ್ಥಿತಿಯಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ಇಲ್ಲ.ಇದರಿಂದಾಗಿ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುವ ಸ್ಥಿತಿ ಬಂದಿದೆ.ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸಮಾಜ ಸೇವಕ ಸಂತೋಷ ರ್‍ಆ ಶೆಟ್ಟಿ ಅವರ ಕಾರ್ಯ ಮೆಚ್ಚುವಂತಹದ್ದು. ಇಂದು ಕಿಟ್ ಜತೆ ಪಡೆದ ಸಸಿಗಳನ್ನು ಹಚ್ಚಿ ಮುಂದಿನ ಪೀಳಿಗೆಗೆ ಆಮ್ಲಜನಕ ಸಿಗುವಂತೆ ಮಾಡಿ ಎಂದು ಸಲಹೆ ನೀಡಿದರು.
ದಾನಿ, ಸಮಾಜ ಸೇವಕ,ವಿಶ್ವ ಮಾನ್ಯ ಪ್ರಶಸ್ತಿ ಪುರಸ್ಕೃತರ ಸಂತೋಷ ಆರ್ ಶೆಟ್ಟಿ ಮಾತನಾಡಿ, ದುಡಿದ ಹಣದಲ್ಲಿ ಬಡವರಿಗೆ ಒಂದಿಷ್ಟು ಹಂಚುವುದರಿಂದ ಮನಸ್ಸಿಗೆ ನೆಮ್ಮದಿ. ಬಡವರ ಮುಖದಲ್ಲಿಯೇ ದೇವರನ್ನು ಕಾಣಬೇಕು. ಬಡವನ ಹೊಟ್ಟೆ ತುಂಬಿದರೆ ದೇಶ ಶಾಂತವಿದ್ದಂತೆ. ಇದೊಂದು ದೇಶ ಸೇವೆ ಎಂದು ತಿಳಿದು ಕೆಲಸ ಮಾಡುತ್ತಿರುವೆ ಎಂದರು. ಇಂದು ಆಮ್ಲಜನಕ ನೀಡುವುದು ಒಂದು ಪುಣ್ಯದ ಕೆಲಸ. ಅದಕ್ಕಾಗಿ ನಿಮಗೆ ನೀಡಿದ ಸಸಿಗಳನ್ನು ಹಚ್ಚಿ ಸಮಾಜಕ್ಕೆ ಒಂದು ಕೊಡುಗೆ ನೀಡಿ ಎಂದು ಹೇಳಿದರು.
ಅತಿಥಿಯಾಗಿ ಪಂಕಜ ಅಗರವಾಲ, ಶುಭಕರಿ ಮಹಿಳಾ ಮಂಡಳ ಅಧ್ಯಕ್ಷೆ ಲಕ್ಷ್ಮೀ ದೇಸಾಯಿ, ಡಾಲರ್ಸ ಕಾಲೊನಿ ಅಭಿವೃದ್ಧಿಯ ಸಂಘದ ಉಪಾಧ್ಯಕ್ಷೆ ಆಶಾ ಮಿರಜಕರ,ಮನೋಜ ಮಿರಜಕರ,ನಾರಾಯಣ ನಿರಂಜನ, ಕಾರ್ತಿಕ ದೇಸಾಯಿ,ಅನಿಲ ಮಿರಜಕರ,ಸುನೀಲ ಮಿರಜಕರ,ರಾಜು ಮಿರಜಕರ,ಅಭಿಷೇಕ ಮಿರಜಕರ ಹಾಗೂ ಕಾಲೊನಿಯ ಗುರು ಹಿರಿಯರು ಪಾಲ್ಗೊಂಡಿದ್ದರು.
ಮಂಜುನಾಥ ಬಗಾಡೆ ಸ್ವಾಗತಿಸಿದರು.ರವೀಂದ್ರ ರಾಮದುರ್ಗಕರ ನಿರೂಪಿಸಿದರು.ರಘು ಮಿರಜಕರ ವಂದಿಸಿದರು.