ಸಮಾಜ ಸೇವೆಯಲ್ಲಿ ವಳಕೇರಿ ಕುಟುಂಬ ಅಭಯ ಹಸ್ತ : ಬಡಿಗೇರ

ಕಲಬುರಗಿ.ಏ.20: ಕಲಬುರಗಿ ಜಿಲ್ಲೆಯ ಇತಿಹಾಸದಲ್ಲಿ ಸಮಾಜ ಸೇವೆ ಮಾಡುವಲ್ಲಿ ನಗರದ ವಳಕೇರಿ ಕುಟುಂಬದ ಸದಸ್ಯರು ಮೇಲುಗೈ ಸಾಧಿಸಿದ್ದಾರೆ. ಸಮಾಜ ಪರಿವರ್ತನೆ ಮತ್ತು ಸಕ್ರಿಯ ರಾಜಕಾರಣಕ್ಕೆ ವಳಕೇರಿ ಕುಟುಂಬದ ಸದಸ್ಯರು ಶತಾಯ ಗತಾಯ ಶ್ರಮವಹಿಸುತ್ತಾ ಬರುತ್ತಿದ್ದಾರೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಹೇಳಿದರು.
ಅವರು, ನಗರದ ಸರಕಾರಿ ವೃದ್ಧಾಶ್ರಮದಲ್ಲಿ ಹಮ್ಮಿಕೊಂಡ ದಿ.ಬಸವಂತರಾವ ವಳಕೇರಿ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇದೆ ಸಂಧರ್ಭದಲ್ಲಿ ಮಾತನಾಡಿದ ನಂದಿಕೂರ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಪವನಕುಮಾರ ವಳಕೇರಿ ಮಾತನಾಡಿ, 1982 ರಲ್ಲಿ ದಿ. ಬಸವಂತರಾವ ವಳಕೇರಿಯವರು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಅನೇಕ ಜನಪರ ಕಾರ್ಯಕ್ರಮಗಳ ಜೊತೆಗೆ ಸಿ.ಐ. ಬಿ. ಕಾಲೋನಿ ನಿರ್ಮಾಣ ಮಾಡಿ ಅನೇಕ ಜನರಿಗೆ ನಿವೇಶನಗಳು ಮಂಜೂರು ಮಾಡಿದ್ದರು ಮತ್ತು ಏರಡು ಬಾರಿ ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯರಾಗಿಯೂ ಅವಿರತ ಸೇವೆ ಸಲ್ಲಿ ಸಿದ್ದಾರೆ ಎಂದು ಹೇಳಿದರು. ಸಮಾರಂಭದಲ್ಲಿ ಕುಸನೂರ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಜಗದೀಶಕುಮಾರ ವಳಕೇರಿ, ಯುವ ಸಾಹಿತಿ ವಿಜಯಕುಮಾರ ತೇಗಲತಿಪ್ಪಿ, ಸುಶೀಲಕುಮಾರ ವಳಕೇರಿ, ಸತಬೀರ್ ಸಿಂಗ್,ವೆಂಕಟೇಶ ಚಿದ್ರಿ ಶರಣರಾಜ್ ಛಪ್ಪರಬಂದಿ ನಾಗೆಂದ್ರಪ್ಪ ಮಾಡ್ಯಾಳ ಇದ್ದರು.
ನಂತರ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಸಿಹಿ ತಿಂಡಿ ತಿನಿಸುಗಳನ್ನು ವಿತರಿಸಲಾಯಿತು