ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಜನತೆ ಪ್ರೋತ್ಸಾಹಿಸಬೇಕು : ಬಾಡದ ಆನಂದರಾಜ್

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೧೩ :  ಉದ್ಯಮಿಯಾದರೂ ಬಡವರ ಬಗ್ಗೆ ಕಾಳಜಿ ಹೊಂದಿದ್ದು ದುಡಿದ ಹಣದಲ್ಲೇ ಸಮಾಜ ಸೇವೆ ಮಾಡುತ್ತಿರುವ ಎಂ ಆನಂದ್ ಇಂದಿನ ಯುವಕರಿಗೆ ಮಾದರಿ ಎಂದು ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟ ಮುಖಂಡರಾದ ಬಾಡದ ಆನಂದರಾಜು ತಿಳಿಸಿದರು. ವಿದ್ಯಾನಗರದ ಗಾಂಧಿ ವೃತ್ತದಲ್ಲಿ ಹೃದಯವಂತರ ಬಳಗದ ವತಿಯಿಂದ ಎಂ ಆನಂದ್ ಹುಟ್ಟುಹಬ್ಬವನ್ನ ಕೇಕ್ ಕತ್ತರಿಸಿ ಸರಳವಾಗಿ ಆಚರಣೆ ಮಾಡಿದ ಹೃದಯವಂತರ ಬಳಗ ಶುಭ ಕೋರಿತು. ಕೋವಿಡ್ ಹಾಗೂ ಬರಗಾಲ ಸಂದರ್ಭದಲ್ಲಿ ಆನಂದ್ ನೀರು ಸರಬರಾಜು ಹಾಗೂ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಿ ಅಶಕ್ತರಿಗೆ ನೆರವಾಗಿದ್ದರು. ಕೆಲವರಿಗೆ ಆರ್ಥಿಕ ಸಹಾಯ ಕೂಡ ಮಾಡಿದ್ದರು. ಕಷ್ಟ ಎಂದು ಬಂದರೆ ಸಹಾಯ ಮಾಡುವ ಗುಣ ಅವರಲ್ಲಿದೆ ಆನಂದ್ ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು. ತಾನು ದುಡಿದ ಹಣದಲ್ಲೇ  ಇತರರಿಗೆ ನೆರವಾಗುತ್ತಿದ್ದಾರೆ ಇಂದಿಗೂ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ ದಾವಣಗೆರೆಯಲ್ಲಿರುವ ದಾನಿಗಳ ಹೆಸರಲ್ಲಿ ಇವರು ಸಹ ಒಬ್ಬರು ಎಂದರು. ಸಣ್ಣವರೇ ಆಗಲಿ ಹಿರಿಯರೇ ಆಗಲಿ ಗೌರವದಿಂದ ನಡೆದುಕೊಳ್ಳುವುದು ಆನಂದ್ ಅವರ ದೊಡ್ಡಗುಣ ಎಂದರು. ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೂ ನೆರವಾಗುವ ಮೂಲಕ ಅವರ ಭವಿಷ್ಯಕ್ಕೆ ಸಹಕಾರಿಯಾಗಿದ್ದಾರೆ. ಇವರ ಹುಟ್ಟುಹಬ್ಬ ಹಿನ್ನೆಲೆ ಗೆಳೆಯರ ಬಳಗ ಶುಭ ಕೋರಿದ್ದು ಮುಂದೆಯೇ ಇದೇ ರೀತಿ ಸಮಾಜ ಸೇವೆ ಮಾಡಿ ಉತ್ತುಂಗ ಸ್ಥಾನ ಪಡೆಯಲಿ ಎಂದು ಬಾಡದ ಆನಂದರಾಜು ಹಾರೈಸಿದರು.ಮಾಜಿ ಮಹಾಪೌರ ಎಸ್.ಟಿ.ವಿರೇಶ್ ಮಾತನಾಡಿ ಎಂ.ಆನಂದ್ ಅವರು ಜನಪರ ಕಾರ್ಯ ಮಾಡುತ್ತಿದ್ದಾರೆ.ಸಂಪತ್ತು ಬಹಳಷ್ಟು ಜನರಿಗಿರುತ್ತದೆ ಆದರೆ ಕೊಡುವವಂತಹ ಮನಸ್ಸು ಇರುವುದಿಲ್ಲ. ಕೆಲವೊಬ್ಬರಿಗೆ ಸಂಪತ್ತಿನೊಂದಿಗೆ ಸಹಾಯ ಮಾಡುವ ಮನಸ್ಸು ಇರುತ್ತದೆ ಅಂತಹವರಲ್ಲಿ ಬಿಜೆಪಿ ಮುಖಂಡರಾದ ಎಂ ಆನಂದರ್ ಸಹ ಒಬ್ಬರು.ಬಹಳಷ್ಟು ಮಂದಿ ಅವರಿಂದ ಸಹಾಯ ಪಡೆದಿದ್ದಾರೆ.ಅವರೊಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ.ಬೇರೆ ರಾಜ್ಯದವರ ಪೈಪೋಟಿ ನಡುವೆಯೂ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆಂದರು.ಈ ಸಂದರ್ಭದಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ಲೋಕಿಕೆರೆ ನಾಗರಾಜ್  ಮಾಯಾಕೊಂಡ ಬಿಜೆಪಿ ಯುವ ನಾಯಕ ಜಿಎಸ್.ಶ್ಯಾಮ್.ಎಸ್ಪಿ ಶ್ರೀನಿವಾಸ್ ಅಮರೇಶ್.ಹನುಮೇಗೌಡ ಮುರುಳಿ ಯಾದವ್.ಶಂಕರ್.ಯಲವಟ್ಟಿ ಉಮೇಶ್ ಧನ್ಯಕುಮಾರ್ ನಾಗರಾಜ್ ನಾಯ್ಕ್ ಇನ್ನೂ ಮುಂತಾದವರಿದ್ದರು.