ಸಮಾಜ ಸೇವೆಗೆ ಸದಾ ಸಿದ್ಧ : ಶಾಮ್‌ಸಿಂಗ್


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮಾ.14: ಸಮಾಜ ಸೇವೆಗೆ ನಮ್ಮ‌ ಸಿಂಗ್ ಮನೆತನ ಯಾವಾಗಲೂ ಸಿದ್ಧ ಎಂದು ಗಣಿ ಮಾಲೀಕ ಎಸ್.ಬಿ ಶಾಮ್ ರಾಜ್ ಸಿಂಗ್ ಹೇಳಿದರು.
ಅವರು ಮರಿಯಮ್ಮನಹಳ್ಳಿಗೆ ಸಮೀಪದ ದೇವಲಾಪುರ ಗ್ರಾಮದಲ್ಲಿ ಗಾದಿಲಿಂಗ ಬಸವೇಶ್ವರ ದೇವಸ್ಥಾನದ ತಡೆಗೋಡೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸಮಾಜ ನಮಗೆ ಏನು ಕೊಟ್ಟಿದೆ ಅನ್ನುವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂದು ನಮ್ಮನ್ನ ನಾವೆ ಪ್ರಶ್ನೆ ಹಾಕಿಕೊಳ್ಳಬೇಕು. ಆಗ ಮಾತ್ರ ನಾವು ಸಮಾಜಕ್ಕೆ ಏನಾದರೂ ಕೊಡುಗೆ ಕೊಡುವುದಕ್ಕೆ ಸಾದ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಾವು ಎಷ್ಟೇ ಬೆಳೆದರೂ ಬೆಳೆದು ಬಂದ ಹಾದಿಯನ್ನ ಯಾವುತ್ತೂ ಮರೆಯಬಾರದು ಎಂದು ಸಲಹೆ ನೀಡಿದರು ಅಲ್ಲದೇ ಅವರಿಗೆ ದೇವಲಾಪುರ ಗ್ರಾಮದ ಕುರಿತು ಇರುವಕಾಳಜಿ ಹಾಗೂ ಅವಿನಾಭಾವ ಸಂಬಂಧದ ಕುರಿತು ವಿವರಿಸಿದರು. ಜೊತೆಗೆ ಮುಂದಿನ ದಿನಗಳಲ್ಲಿ ಈ ಗ್ರಾಮದ ಜನತೆಗೆ ಉದ್ಯೋಗ ನೀಡುವ ದೃಷ್ಠಿಯಿಂದ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಭವಿಷ್ಯದ ಯೋಜನೆಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಗ್ರಾಮದ ಯುವಕರು ಎಸ್.ಬಿ ಶಾಮ್ ರಾಜ್ ಸಿಂಗ್‌ರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ  ಶಾಮ್ ರಾಜ್ ಸಿಂಗ್ ನ ಆಪ್ತ ಸಹಾಯಕ ಯು ಸಿದ್ದಪ್ಪ, ಗ್ರಾಮಸ್ಥರಾದ ಸಿದ್ದಲಿಂಗಯ್ಯ ಸ್ವಾಮಿ, ಪಕ್ಕೀರಪ್ಪ, ಪಂಪಾಪತಿ, ಅಂಗಡಿ ಹುಲುಗಪ್ಪ, ಮೇಘಾನಾಯ್ಕ್, ಯು.ನಾಗರಾಜ, ಅರ್ಜುನ, ಬಸವರಾಜ, ಹಿರೇಮನಿ ಪರಶುರಾಮ, ಹೆಚ್.ಹುಲ್ಲೇಶ್, ಯು.ರಾಜೇಶ್, ಮಡಿವಾಳರ ದುರುಗೇಶ್, ಮಂಜುನಾಥ ಹಾಗೂ ಇತರರು ಇದ್ದರು.