ಸಮಾಜ ಸೇವೆಗೂ ಪತ್ರಕರ್ತರು ಬದ್ದ

ಹೊಸಕೋಟೆ, ಜು.೧೫: ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವಜೊತೆಗೆ ಸಮಾಜ ಸೇವೆಗೆ ಬದ್ದಎಂದುಕರ್ನಾಟಕ ಸಂಪಾದಕರು& ವರದಿಗಾರರ ಸಂಘದಜಿಲ್ಲಾಧ್ಯಕ್ಷರಾದ ಎಂ ರಾಮೇಗೌಡ ತಿಳಿಸಿದರು
ಹೊಸಕೋಟೆತಾಲ್ಲೂಕಿನ ಸೂಬೆಲೆಯ ಸಂಘದಕಚೇರಿಯಲ್ಲಿಕರೆದ ಸಭೆಯಲ್ಲಿ ಮಾತನಾಡಿಇದೇ ತಿಂಗಳ ೩೦ ನೇ ತಾರೀಖಿನಂದುಉಚಿತಆರೋಗ್ಯ&ನೇತ್ರತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣಾಕಾರ್ಯಕ್ರಮವನ್ನು ಸೂಲಿ ಬೆಲೆಯ ವಿವೇಕಾನಂದ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು ಹವಾಮಾನ ವೈಪರೀತ್ಯಗಳಿಂದ ಜನರಿಗೆಆರೋಗ್ಯದಲ್ಲಿಏರುಪೇರಾಗಿದ್ದು ಬಡವರ್ಗದ ಹಿರಿಯ ನಾಗರೀಕರು ಮಹಿಳೆಯರು & ಮಕ್ಕಳಿಗೆ ಅನುಕೂಲವಾಗಲೆನ್ನುವ ಹಮ್ಮಿಕೊಳ್ಳಲಾಗಿದ್ದು ನಾಗರಿಕರುಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ನಂತರ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ತಾಲ್ಲೂಕುಅಧ್ಯಕ್ಷಉಮೇಶ್‌ರವರು ಮಾತನಾಡಿ ಸ್ನೇಹಆಸ್ಪತ್ರೆಯ ಸಹಭಾಗಿತ್ವದಲ್ಲಿಉಚಿತಆರೋಗ್ಯ ಶಿಬಿರ ಹಮ್ಮಿಕೊಂಡಿದ್ದುಖ್ಯಾತ ವೈದ್ಯರಾದಡಾಆಂಜಿನಪ್ಪರವರು ಸಹ ಶಿಬಿರದಲ್ಲಿ ಭಾಗವಹಿಸಲಿದ್ದು ಸೂಲಿಬೆಲೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸದುಪಯೋಗ ಪಡೆದುಕೊಳ್ಳಬೇಕೆಂದರು.
ಈ ಸಂಧರ್ಭದಲ್ಲಿ ಸಂಘದರಾಜ್ಯ ನಿರ್ದೇಶಕರಾದ ಟಿ ನಾಗರಾಜ್‌ಜಿಲ್ಲಾ ಕಾರ್ಯದರ್ಶಿ ನಟರಾಜ್ ಎಂ.ಎನ್.ಆರ್.ತಾಲ್ಲೂಕು ಗೌರವಾಧ್ಯಕ್ಷರಾದ ಹರೀಶ್, ಉಪಾಧ್ಯಕ್ಷರಾದ ಹಸೇನ್, ನಿರ್ದೇಶಕರಾದ ಇಮ್ತಿಯಾಜ್ ತರಬಹಳ್ಳಿ ,ಮಂಜು , ಶಶಿ,ಲೋಕೇಶ್ ಮತ್ತಿತರರುಇದ್ದರು.