ಸಮಾಜ ಸೇವಾಕರಿಗೆ ನಂದಿಪುರ ಶ್ರೀಗಳಿಂದ ಸನ್ಮಾನ

ಹಗರಿಬೊಮ್ಮನಹಳ್ಳಿ:ಸೆ.09  ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದ ಡಾ.ಶ್ರೀಮಹೇಶ್ವರ ಸ್ವಾಮಿಜೀ ಅವರು ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದ ಸಮಾಜ ಸೇವಕರನ್ನು ಸನ್ಮಾನಿಸಿದರು.  
ಈ ವೇಳೆ ಬಿಜೆಪಿ ಪಕ್ಷದ ನಗರ ಘಟಕದ ಅಧ್ಯಕ್ಷ ಜಗದೀಶ್, ಸಮಾಜ ಸೇವಕರಾದ ಸಂಚಿ ಶಿವಕುಮಾರ್, ನಾಗಭೂಷಣ್ ಗದ್ದಿಕೇರಿ, ತಳವಾರ್ ಕೊಟ್ರೇಶ್, ವಿರೇಶ್ ಗೌಡ, ಎಂ ಗುರುಬಸವರಾಜ, ವಿಶ್ವನಾಥ, ಅವರುಗಳನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡ ರಾಜು ಪಾಟೀಲ್,ಕುಂಬಾರ ರೇವಣಸಿದ್ದಪ್ಪ ಇತರರು ಉಪಸ್ಥಿತರಿದ್ದರು.