ಸಮಾಜ ಸೇವಕ ಜಿ.ರಾಮಕೃಷ್ಣ ಅವರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ

ಗಂಗಾವತಿ ನ 29 : ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷರಾದ
ಜಿ. ರಾಮಕೃಷ್ಣ ಅವರು ಗ್ರಾಮೀಣ ಮಟ್ಟದಲ್ಲಿ ಆರ್ಥಿಕವಾಗಿ ಹಿಂದುಳಿದ ಜನಾಂಗದ
ಕಲ್ಯಾಣಕ್ಕಾಗಿ ವಿದ್ಯೆ, ಆರೋಗ್ಯ, ಸಾಂಸ್ಕøತಿಕ, ಸಾಮಾಜಿಕ, ಕ್ರೀಡಾ ಮುಂತಾದ
ರಂಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಸಮಾಜಸೇವೆಯನ್ನು ಗುರುತಿಸಿ ಸಿಂಧನೂರು
ತಾಲೂಕು ಕಮ್ಮವಾರಿ ಸಂಘದವತಿಯಿಂದ ದಿನಾಂಕ: 25.11.2021 ರಂದು ಇವರಿಗೆ ಸಿಂಧನೂರು
ತಾಲೂಕಿನ ಹೊಸಳ್ಳಿ ಇ.ಜೆ ಕ್ರಾಸ್‍ನಲ್ಲಿರುವ ಯಲಮಂಚಲಿ ವಾಸುದೇವ ರಾವ್ ಕಲ್ಯಾಣ
ಮಂಟಪದಲ್ಲಿ “ಸೇವಾ ರತ್ನ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜನತಾರಾಣಿ ಟ್ರಸ್ಟ್ ಬೆಂಗಳೂರು ಅಧ್ಯಕ್ಷರಾದ ಯಲಮಂಚಲಿ
ವಾಸುದೇವರಾವ್, ಸಿಂಧನೂರು ತಾಲೂಕ ಕಮ್ಮವಾರಿ ಸಂಘದ ಅಧ್ಯಕ್ಷರಾದ ಪಿ. ಮುರಳಿ,
ಉಪಾಧ್ಯಕ್ಷರಾದ ಬಿ. ಹರ್ಷ, ಪ್ರಧಾನ ಕಾರ್ಯದರ್ಶಿ ಯಾದ ನಲ್ಲ ವೆಂಕಟೇಶ್ವರರಾವ್
ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.