ಸಮಾಜ ಸುಧಾರಣೆಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು

ಔರಾದ್:ಡಿ.31: ಸಮಾಜ ಸುಧಾರಣೆ ಹಾಗೂ ಜನರ ಮನಪರಿವರ್ತನೆ ಮಾಡುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಸಹಬಾಳ್ವೆ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಸ್ವಾಮಿ ಹೇಳಿದರು.

ತಾಲ್ಲೂಕಿನ ಕೊಳ್ಳೂರ ಗ್ರಾಮದ ಚಂದಾ ಸ್ಟುಡಿಯೊದಲ್ಲಿ ಈಚೆಗೆ ಸಹಕಾರ ಬೆಳಕು ಪಾಕ್ಷಿಕ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪತ್ರಿಕೆಗಳಲ್ಲಿ ಸಾಮಾಜಿಕ ಕಳಕಳಿ ಇರುವ ವರದಿಗೆ ಪ್ರತಿಯೊಬ್ಬರು ಸ್ಪಂದಿಸಬೇಕು. ಅಂದಾಗ ಮಾತ್ರ ವರದಿಗೆ ಪ್ರಾಮುಖ್ಯತೆ ಬರಲಿದೆ. ಪತ್ರಿಕೆಗಳು ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಜೀವನಾಡಿಯಾಗುವ ಮೂಲಕ ಸಮಾಜಕ್ಕೆ ಪರಿಚಯಿಸುವ ಕಾರ್ಯ ಪತ್ರಿಕೆಗಳು ಮಾಡುತ್ತಿದ್ದು ಪ್ರತಿಯೊಬ್ಬರು ಪತ್ರಿಕೆಗಳನ್ನು ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕರಾದ ಶಾರದಾಬಾಯಿ ರ‍್ಯಾಕಲೆ, ಸುರ್ಯಕಾಂತ ರ‍್ಯಾಕಲೆ ದಂಪತಿ ಗಳನ್ನು ಸನ್ಮಾನಿಸಲಾಯಿತು. ಸಿದ್ದಪ್ಪ ಕಂಗಟೆ, ಬಸವರಾಜ ಖಂಡೆ, ಹಣಮಂತರಾವ ಪಾಟೀಲ, ಉಪ್ಪಾರಿ ದತ್ತಾತ್ರಿ ಚಂದಾ, ರಾಜಕುಮಾರ್ ನಾಗಶಟ್ಟೆ, ಸಂಜುಕುಮಾರ ಅತನೋರೆ, ರಿಯಾಜಪಾಶ ಕೊಳ್ಳೂರ, ಚಂದ್ರಕಾಂತ ಚಂದಾ ಸೇರಿದಂತೆ ಇತರರು ಉಪಸ್ಥಿತರಿದ್ದರು.