ಸಮಾಜ ಸುಧಾರಣೆಗೆ ಹಡಪದ ಅಪ್ಪಣ್ಣ ನವರ ಕೊಡುಗೆ ಅಪಾರ

ಶಹಾಬಾದ್:ಜು.5:ಸಮಾಜ ಸುಧಾರಣಗೆಗೆ ಆದ್ಯ ವಚನಕಾರ ಶಿವಶರಣ ಹಡಪದ ಅಪ್ಪಣ್ಣ ಅವರು ಮಹತ್ತರವಾದ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ಮುಖ್ಯಗುರು ಸಂಗೀತಾ ದೇವರಮನಿ ಹೇಳಿದರು..

ಅವರು ನಗರದ ಚವ್ಹಾಣ್ ಶಿಕ್ಷಣ ಸಂಸ್ಥೆಯ ಶ್ರೀಮತಿ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟಿ ಶಾಲೆಯಲ್ಲಿ ಹಮ್ಮಿಕೊಂಡ ನಿಜಸುಖಿ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು. ಬಸವಣ್ಣ ಅವರ ಯಶಸ್ಸಿನ ಹಿಂದಿನ ಶಕ್ತಿಯಾಗಿ ಗುರುತಿಸಿಕೊಂಡಿದ್ದ ಅಪ್ಪಣ್ಣ ಅವರು, ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಗಳನ್ನು ದೂರು ಮಾಡಲು ಶ್ರಮಿಸಿದರು ಎಂದರು. ನಂದಗೋಕುಲ ಶಾಲೆಯ ಮುಖ್ಯಗುರು ಅಂಬಿಕಾ ಜಿಂಗಾಡೆ ಮಾತನಾಡಿ ಹಡಪದ ಅಪ್ಪಣ್ಣನವರ ವಚನ ಆಶಯಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು. ಶಿಕ್ಷಕರಾದ ಸವಿತಾ ಬೆಳಗುಂಪಿ, ಆರತಿ ವೆಂಕಟೇಶ, ಪಾರ್ವತಿ ಚಟ್ಟಿ, ಸುಜಾತ ಕುಂಬಾರ, ನಿರ್ಮಲಾ ಬಿರಾದರ, ಶರಣಮ್ಮ, ಸೈಯದಾ ಉಜ್ಮಾ, ಸೌಮ್ಯ ಕುಲಕರ್ಣಿ, ಸುಧಾ ಚವ್ಹಾಣ್, ಕಾಳಿಕಾ, ಶಿಕ್ಷಕರು ಸಿಬ್ಬಂದಿ ಪಾಲ್ಗೊಂಡಿದರು.