ಸಮಾಜ ಸುಧಾರಣೆಗೆ ಮಾಧ್ಯಮ ಸಹಕಾರ ಅಗತ್ಯ

ಹುಮನಾಬಾದ್:ಜು.24: ದೇಶ ಮತ್ತು ಸಮಾಜ ಸುಧಾರಣೆ ಮಾಡುವಂತಹ ಮಹಾನ ಶಕ್ತಿ ಲೇಖನಿಯಲ್ಲಿದೆ, ಎಂದು ಶಾಸಕ ಡಾ.ಸಿದ್ದ ಪಾಟೀಲ ಹೇಳಿದರು.
ಇಲ್ಲಿನ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳಕರ್ ಅವರ 58ನೇ ಹುಟ್ಟು ಹಬ್ಬದ ಅಂಗವಾಗಿ ಶಿವಾನಂದ ಮಂಠಾಕರ್ ಗೆಳೆಯರ ಬಳಗದಿಂದ ಭಾನುವಾರ ಹಮ್ಮಿಕೂಂಡಿದ್ದ ಪತ್ರಿಕಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಕರ್ತರು ಸಮಾಜ ಸುಧಾರಿಸುವ ಕೆಲಸ ಮಾಡಬೇಕು. ನ್ಯಾಯಾಂಗ, ಕಾಯಾರ್ಂಗ, ಶಾಸಕಾಂಗ ಮತ್ತು ಪತ್ರಿಕಾರಂಗದ ಕಾರ್ಯ ಬಹಳ ಮಹತ್ವದಾಗಿದೆ, ಎಂದ ಅವರು ಪ್ರಸಾರಂಗ ವಿಲ್ಲದೆ ರಾಜ್ಯಾಂಗ ಕಾಯಾರ್ಂಗ ಮತ್ತು ನ್ಯಾಯಾಂಗ ಮುನ್ನಡೆಯಲು ಕಷ್ಠವಾಗುತ್ತದೆ. ನ್ಯೂನೆತೆಯನ್ನು ಸರಿಪಡಿಸುವಂತಹ ಶಕ್ತಿ ಮತ್ತು ಜವಾಬ್ದಾರಿ ಪತ್ರಿಕೆ ಮೇಲಿದೆ ಎಂದು ತಿಳಿಸಿದರು.
ಭಾರತೀಯ ಜನತಾ ಪಾರ್ಟಿ ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳಕರ್ ಅವರು ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿ, ಪತ್ರಕರ್ತರು ಮತ್ತು ಪತ್ರಿಕಾರಂಗ ದೇಶ ಸುಧಾರಣೆಯಲ್ಲಿ ತನ್ನದೆ ಆದ ರೀತಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹ ಪತ್ರಕರ್ತರನ್ನು ಗುರುತಿಸಿ ಪೆÇ್ರೀತ್ಸಾಹಿಸುವ ಜವಾಬ್ದಾರಿ ಎಲ್ಲರ ಮೇಲಿದೆ, ಎಂದರು. ಶಾಸಕರಾದ ಶರಣು ಸಲಗರ್, ಡಾ.ಶೈಲೇಂದ್ರ ಬೆಲ್ದಾಳೆ, ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ದುರ್ಯೋಧನ ಹುಗಾರ, ಹಿರಿಯ ಸಾಹಿತಿ ಶಿವಶಂಕರ ತರನಳ್ಳಿ, ಪತ್ರಕರ್ತರಾದ, ಶೈಲೇಂದ್ರ ಕಾವಾಡಿ, ಸಂಜುಕುಮಾರ ಜುನ್ನಾ, ಸಂಜಯ ದಂತಕಾಳೆ, ನವೀನ ಗಂಜಿ, ರಾಜು ಪೂಜಾರಿ, ಮಾತನಾಡಿದರು.
ಪತ್ರಕರ್ತರಾದ, ಶಶಿಕಾಂತ ಭಗೋಜಿ, ಪ್ರಶಾಂತ (ಪರಶುರಾಮ) ಹೂಸಮನಿ, ವೇಂಕಟ ಜಾಧವ್, ಗುಂಡು ಅತಿವಾಳ, ರೀಜ್ವಾನ ಆರ್ಯನ್, ದಿಲೀಪ ಮೇತ್ರೆ, ಶಿವಶರಣ ಚಾಂಗಲೇರಿ, ಸೇರಿದಂತೆ ಚಿಟಗುಪ್ಪ ವರದಿಗಾರರು ಇದ್ದರು.