ಸಮಾಜ ಮುಖಿ ಸೇವೆ ಮಾಡುವವರು ಅಭಿಮಾನ ಬಳಗಕ್ಕೆ ಬನ್ನಿ-ಕಾರ್ತಿಕ್ ಘೋರ್ಪಡೆ

ಸಂಡೂರು :ಅ:31: ಪ್ರತಿಯೊಬ್ಬ ಸದಸ್ಯರೂ ಸಹ ಸಮಾಜ ಮುಖಿಯಾಗಿ ಸೇವೆ ಮಾಡುತ್ತೇವೆ ಎಂಬ ಗಟ್ಟಿ ನಿರ್ಧಾರದಿಂದ ಮಾತ್ರ ಈ ಅಭಿಮಾನಿ ಬಳಗಕ್ಕೆ ಬನ್ನಿ ಸಮಾಜ ಸೇವೆ ಮಾಡಿ ಎಂದು ಬಿಜೆಪಿ ಮುಖಂಡ ಕಾರ್ತಿಕ್ ಘೋರ್ಪಡೆ ತಿಳಿಸಿದರು.
ಅವರು ಇಂದು ಪಟ್ಟಣದ ಕೃತಿಕಾ ನಿವಾಸದಲ್ಲಿ ನೂತನ ಶ್ರೀ ಕಾರ್ತಿಕೇಯ ಎಂ.ಘೋರ್ಪಡೆ ಅಭಿಮಾನಿ ಬಳಗಕ್ಕೆ ಚಾಲನೆ ನೀಡಿ ಮಾತನಾಡಿ ಬಹಳಷ್ಟು ಯುವಕರು ಬಹುದಿನಗಳಿಂದ ಸಂಘವನ್ನು ಕಟ್ಟಿ ಸಮಾಜದಲ್ಲಿ ಸಾರ್ವಜನಿಕರ ಸೇವೆಯನ್ನು ಮಾಡುತ್ತೇವೆ ಎಂದು ಮನವಿ ಹಾಗೂ ಒತ್ತಾಯ ಮಾಡಿದ ಹಿನ್ನಲೆಯಲ್ಲಿ ಇಂದು ನೊಂದಣಿಯ ಮೂಲಕವೇ ಪ್ರಾರಂಭವಾಗಿದೆ, ಅದ್ದರಿಂದ ಸಾರ್ವಜನಿಕ ಸೇವೆಗೆ ಚ್ಯುತಿ ಬರದಂತೆ ಕೆಲಸ ಮಾಡುವವರು ಮಾತ್ರ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನೂತನ ಶ್ರೀ ಕಾರ್ತಿಕೇಯ ಎಂ.ಘೋರ್ಪಡೆ ಅಭಿಮಾನಿ ಬಳಗದ ಅಧ್ಯಕ್ಷರಾಗಿ ವದ್ದಟ್ಟಿಅಂಬರೀಶ್, ಗೌರವಾಧ್ಯಕ್ಷರಾಗಿ ಸಿ.ಎಸ್. ನರೇಂದ್ರಪಾಟೀಲ್, ಉಪಾಧ್ಯಕ್ಷರಾಗಿ ಎಂ.ಷಣ್ಮುಖಪ್ಪ, ಬಂಡ್ರಿಯ ಎನ್.ಎಂ. ಮಂಜುನಾಥ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ವಾಮದೇವ, ಖಜಾಂಚಿಯಾಗಿ ಡಿ.ಪ್ರಹ್ಲಾದ್, ಸಂಘಟನಾ ಕಾರ್ಯದರ್ಶಿಯಾಗಿ ದರೋಜಿ ರಮೇಶ್, ಕಾರ್ಯದರ್ಶಿಗಳಾಗಿ ಕೆ.ವಿಜಯಕುಮಾರ್, ಎಲ್.ಕುಮಾರ್ ನಾಯ್ಡುಇವರನ್ನು ಆಯ್ಕೆಮಾಡಿ ನೊಂದಣಿ ಅದೇಶ ಪ್ರಮಾಣ ಪತ್ರವನ್ನು ನೀಡಿದರು. ಸಮಾರಂಭದಲ್ಲಿ ಹಲವಾರು ಅಭಿಮಾನಿಗಳು ಉಪಸ್ಥಿತರಿದ್ದು ನಿಷ್ಠೆಯಿಂದ ಸಮಾಜದ ಸೇವೆಯನ್ನು ಮಾಡುವುದಾಗಿ ಪ್ರತಿಜ್ಞೆ ಗೈದರು.