
ಇಂಡಿ:ಮಾ.16:ಸಮಾಜಗಳು ಮುಂದೆ ಬರಬೇಕಾದರೆ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಡಾಕ್ಟರ್, ಇಂಜಿನಿಯರ, ಐಎಎಸ್‍ನಂತ ಅಧಿಕಾರಿಯಾದಾಗ ಮಾತ್ರ ಸರ್ವ ವಿಧದಲ್ಲೂ ಅಭಿವೃದ್ದಿ ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಹರಳಯ್ಯ ಸಮಾಜ ಬಾಂದವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಶಂಕರ ಪಾರ್ವತಿ ಮಂಗಲ ಕಾರ್ಯಾಲಯದಲ್ಲಿ ಶ್ರೀ ಶಿವಶರಣ ಸಮಗಾರ ಹರಳಯ್ಯನವರ ನೂತನ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಹರಳಯ್ಯ ಚರ್ಮಕಾರರ ಪ.ಜಾ.ವಿವಿದೊದ್ದೇಶಗಳ ಸಹಕಾರ ಸಂಘ ನಿ ಕಟ್ಟದ ಭೂಮಿ ಪೂಜಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಆಲಮೇಲ ವಿರಕ್ತ ಮಠದ ಪಪೂ ಜನದೇವಮಲ್ಲಿಬೊಮ್ಮ ಮಹಾಸ್ವಾಮಿಗಳು ಆಶಿರ್ವಚನ ನೀಡಿ, ನಾಗಠಾಣ ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾ ಹರಳಯ್ಯ ಸಮಾಜದ ಪ್ರಧಾನಕಾರ್ಯದರ್ಶಿ ಅಶೀಕ ಸೌದಾಗರ, ಇಂಡಿ ತಾಲೂಕಾ ಹರಳಯ್ಯ ಸಮಾಜದ ಉಪಾಧ್ಯಕ್ಷ ಮಹೇಶ ಹೊನ್ನಬಿಂದಗಿ, ರಾಜಕುಮಾರ ಚಾಬುಕಸವಾರ , ಕಾಶಿನಾಥ ಹೊಸಮನಿ , ಶಿಕ್ಷಕ ಹೂಗಾರ ಮಾತನಾಡಿದರು.
ಸಮಾಜದ ಅಧ್ಯಕ್ಷ ವಿಠ್ಠಲ ಮಾವಿನಹಳ್ಳಿ, ಹರಳಯ್ಯ ಬ್ಯಾಂಕ ಅಧ್ಯಕ್ಷ ಜೆಕೆ ಬಗಲಿ, ಪುರಸಭೆ ಅಧ್ಯಕ್ಷೆ ಶ್ರೀಮತಿ ಬನ್ನೇಮ್ಮ ಹದರಿ, ಜಿಲ್ಲಾ ಸಮಾಜದ ಅಧ್ಯಕ್ಷ ಮಹಾದೇವ ಕಬಾಡೆ, ಇಂಡಿ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವ್ವಿ.ಹರಳಯ್ಯ, ಅಂಜುಟಗಿ ಗ್ರಾಪಂ ಅಧ್ಯಕ್ಷ ಶ್ರೀಮತಿ ಸುಜಾತಾ ಹರಳಯ್ಯ, ಭತಗುಣಕಿ ಗ್ರಾಪಂ ಅಧ್ಯಕ್ಷ ಈರಪ್ಪ ಹೊನ್ನಕೊರೆ ವೇದಿಕೆ ಮೇಲಿದ್ದರು.
ಚಂದ್ರಶೇಖರ ಕಟ್ಟಿಮನಿ, ಗಣೆಶ ಹೊನ್ನಮೊರೆ, ಸಿದ್ದಪ್ಪ ಬಗಲಿ, ಮಹಾದೇವ ಕಟ್ಟಿಮನಿ, ಡಾ|| ಲಕ್ಷ್ಮಿಶ ಕಟ್ಟಿಮನಿ, ಮಲ್ಲಪ್ಪ ಕಟ್ಟಿಮನಿ, ಕೆಡಿಪಿ ಸದಸ್ಯ ಹಣಮಂತ ಚಾಬುಕಸವಾರ, ಎನ್.ಎಸ್.ಕಟ್ಟಿಮನಿ ಮತ್ತಿತರಿದ್ದರು.