ಸಮಾಜ ತಿದ್ದುವ ಸಾಹಿತ್ಯ ರಚನೆ ಆಗಬೇಕು

ಕೋಲಾರ. ಜೂ.೧೨-: ಬಡಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಹಾಗೂ ಅವರ ಕಷ್ಟಕಾರ್ಪಣ್ಯಗಳನ್ನು ಸಮಾಜಕ್ಕೆ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಸಾಹಿತಿಗಳಿಂದ ಆಗಬೇಕು ಎಂದು ಹಿರಿಯ ಸಾಹಿತಿ ಕೊ.ನ. ಪರಮೇಶ್ವರನ್ ತಿಳಿಸಿದರು.
ಜಯನಗರದಲ್ಲಿನ ರಮ್ಮ ಸ್ವಗೃಹದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ ಎಸ್?ಟಿ ನೌಕರರ ಸಮನ್ವಯ ಸಮಿತಿಯು ತಮಗೆ ನೀಡಿದ “ಸಾಹಿತಿ ಡಾ. ಸಿದ್ದಲಿಂಗಯ್ಯ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು..
ಸ್ವತಃ ಜನಸಾಮಾನ್ಯರ ಕಷಗಳನ್ನು ನೋಡಿ ಬೆಳೆದು ಅದರ ಅನುಭವವನ್ನು ಸಾಹಿತ್ಯ ರೂಪಕ್ಕೆ ನೀಡಿದ ಆದರ್ಶ ಪುರುಷರ ನೆನಪು ಶಾಶ್ವತಗೊಳಿಸಲು ಆಗಿಂದಾಗೆ ಕನ್ನಡ ಸಾಹಿತ್ಯವನ್ನು . ಚಿಂತನ ಮಂಥನಕ್ಕೆ ಒಳಪಡಿಸಬೇಕು ಎಂದರು.
ವಿದ್ಯಾರ್ಥಿ ದೆಸೆಯಿಂದಲೇ ನಮಗೆ ಆದ ಅನುಭವವನ್ನು ಸಾಹಿತ್ಯ ರೂಪಕ್ಕೆ ನೀಡಿದ ಆದರ್ಶ ವ್ಯಕ್ತಿತ್ವದ ಸಿದ್ದಲಿಂಗಯ್ಯ ರವರ ಸಾಹಿತ್ಯ ಶ್ರೇಷ ಮತ್ತು ಆದರ್ಶನಿಯ ಎಂದು ಬಣ್ಣಿಸಿದರು.
ಪ್ರಶಸ್ತಿ ಪ್ರಧಾನ ಮಾಡಿದ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ರಾಮಾ೦ಜನೇಯ ಮಾತನಾಡಿ ಅನೇಕ ದಲಿತ. ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಆಶಾ ಗೋಪುರ ವಾಗಿದ್ದ ಸಿದ್ಧಲಿಂಗಯ್ಯನವರ ಸಾಹಿತ್ಯ ಅವರ ನೋವಿನ ಕೂಗಿನಿಂದ ಮೂಡಿ ಬಂದದ್ದು, ಇಂತಹ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಜನ ಮಾನಸದಲ್ಲಿ ಉಳಿಯುವಂತೆ ಮಾಡುವ ಪ್ರಯತ್ನ ಪ್ರತಿಯೊಬ್ಬರಿಂದಲೂ ಆಗಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಡಿ.ಎಸ್. ಮುಕುಂದ ಮಾತನಾಡಿ ಹಲವಾರು ವಷಗಳ ಹಿಂದೆ ಶೋಷಣೆ ದಬ್ಬಾಳಿಕೆ ಹಾಗೂ ಜಾತಿ ತಾರತಮ್ಯವನ್ನು ಎಳೆ ಎಳೆಯಾಗಿ ಬಿಚ್ಚಿಕೊಟ್ಟು ಅದನ್ನು ಕಾವ್ಯದ ರೂಪಕ್ಕೆ ನೀಡಿ ಜನಸಾಮಾನ್ಯರ ಮತ್ತು ಸರ್ಕಾರದ ಮನ ಸೆಳೆಯುವ ಸಾಹಿತ್ಯ ರಚನೆ ಸಾಹಿತ್ಯ ಅಭಿಮಾನಿಗಳಿಂದ ಇಂದ ಆಗಬೇಕು ಎಂದರು
ಸಮಾರಂಭದ ಅಧ್ಯಕ್ಷತೆಯನ್ನು ಸಮನ್ವಯ ಸಮಿತಿಯ ಜಿಲ್ಲಾ ಗೌರವಾಧ್ಯಕ್ಷ ಜಿ.ಶ್ರೀನಿವಾಸ್ ವಹಿಸಿದ್ದು ಸಮಿತಿಯ ರಾಜಪ್ಪ, ವೆಂಕಟೇಶಪ್ಪ, ನಾರಾಯಣಸ್ವಾಮಿ, ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು