ಸಮಾಜ ತಿದ್ದುವ ಶಕ್ತಿ ಕನ್ನಡ ಸಾಹಿತ್ಯ ಪರಿಷತ್ತಿಗಿದೆ: ದೊಡ್ಡಣ್ಣ ಬಜಂತ್ರಿ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.26 :ಕನ್ನಡ ಸಾಹಿತ್ಯ ಪರಿಷತ್ತು ನೂರ ವರ್ಷಗಳ ಇತಿಹಾಸವಿದೆ. ಈ ಮುಖಾಂತರ ನಾಡು, ನುಡಿ, ಸಂಸ್ಕøತಿಗಾಗಿ ಶ್ರಮಿಸಿದ ಜೀವಿಗಳು ಸ್ಮರಿಸುವ ಮತ್ತು ಸಮಾಜಕ್ಕೆ ಸಂದೇಶ ನೀಡುವ ಕೆಲಸ ಮಾಡುತ್ತ ಬಂದಿದೆ ಎಂದು ದೊಡ್ಡಣ್ಣ ಬಜಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು. ಭಾನುವಾರ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಜರುಗಿದ ಮ.ಮ. ಹುಂಡೇಕಾರ, ಸಾ.ಮ. ಹುಂಡೇಕಾರ ಅವರ ಸ್ಮರಣಾರ್ಥ ಏರ್ಪಡಿಸಿದ ದತ್ತಿ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿರುವ ಮೇಲುಕೀಳು ತೊಡೆದು ಸಮ ಸಮಾಜ ನಿರ್ಮಾಣ ಮಾಡುವ ಶಕ್ತಿ ಸಾಹಿತ್ಯಕ್ಕೆ ಇದೆ. ಪ್ರತಿ ದಿನವೂ ಕ್ರಿಯಾಶೀಲವಾಗಿ ಸಾಹಿತ್ಯದ ಚಟುವಟಿಗಳು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತ ಬಂದಿದೆ. ಈ ರೀತಿ ಸಮಾಜ ತಿದ್ದುವ ಶಕ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ ಎಂದರು.
ಉಪನ್ಯಾಸಕರಾಗಿ ಮಲ್ಲಮ್ಮ ಬಿರಾದಾರ ಅವರು ಜನಪದ ಸಾಹಿತ್ಯ ಕುರಿತು ಮಾತನಾಡಿ, ಜನಪದ ಸಾಹಿತ್ಯ ಸಾವನ್ನು ಧಿಕ್ಕರಿಸುವ ಜೀವಂತ ಪಳೆಯುಳಿಕೆ, ಮಣ್ಣನ್ನು ಪೂಜಿಸುವ ಮತ್ತು ಪ್ರೀತಿಸುವ ಸಂಸ್ಕಾರ ಜನಪದರಿಗಿದೆ, ಜನಪದ ಸಾಹಿತ್ಯ ಕಲೆಗಳು ಮಾನವ ಸಂಸ್ಕೃತಿ ಸಂಪ್ರದಾಯಗಳ ಆಚರಣೆ ಸಮಾಜದಲ್ಲಿ ಸಾಮರಸ್ಯ ತರುತ್ತವೆ ಎಂದರು.
ಸಂಗಮೇಶ ಬದಾಮಿ ಅವರು ವಿಜಯಪುರ ಜಿಲ್ಲೆಯಲ್ಲಿ ರಂಗಭೂಮಿ ಬೆಳದು ಬಂದ ಬಗೆ ಮತ್ತು ಅದು ಸಮಾಜಕ್ಕೆ ನೀಡಿದ ಕಾಣಿಕೆ ಕುರಿತು ಮಾತನಾಡಿ, ರಂಗಭೂಮಿ ಸಮಾಜದ ಕನ್ನಡಿ. ಅದು ನಮ್ಮ ಬಿಂಬ ಪ್ರತಿನಿಧಿಸುತ್ತದೆ, ಸಾಂಸ್ಕೃತಿಕ ನಿರ್ಮಾಣ ಮಾಡುವಲ್ಲಿ ರಂಗಭೂಮಿ ಪಾತ್ರ ದೊಡ್ಡದು ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ ಸುಮಾ ಬೋಳರಡ್ಡಿ, ಮಕ್ಕಳಲ್ಲಿ ಸಂಸ್ಕಾರ ನೀಡುವದು ಬಹಳ ಮುಖ್ಯ, ಪರಿಷತ್ತು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವದರ ಮೂಲಕ ಸಮಾಜವನ್ನು ನೈತಿಕ ಮಾರ್ಗದಲ್ಲಿ ತರಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಸಂಗಮೇಶ ಮೇತ್ರಿ, ವಿಜಯಪುರ ಜಿಲ್ಲೆ ಜನಪದ ರಂಗಭೂಮಿಯ ಹೆಬ್ಬಾಗಿಲು, ಜನಪದ ಆಟಗಳು ಉತ್ತರ ಕರ್ನಾಟಕ ತುಂಬ ಬೆಳಯಲು ಕಾರಣ. ವಿಜಯಪುರ ಜಿಲ್ಲೆಯ ರಂಗ ಕಲಾವಿದರು ಅದೃಶಪ್ಪ ಮಾನ್ವಿ ಅಂತಹ ಕಲಾವಿದರ ಹುಟ್ಟೂರು ವಿಜಯಪುರ ಜಿಲ್ಲೆಯಾಗಿದೆ ಎಂದರು.
ಸುಖದೇವಿ ಅಲಬಾಳಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆ ಮೇಲೆ ದತ್ತಿ ದಾನಿಗಳಾದ ವಿವೇಕ ಹುಂಡೇಕಾರ, ವಿಜಯ ಹುಂಡೇಕಾರ, ಎಂ.ಎ. ಅವಟಿ, ದತ್ತಿ ಸಂಚಾಲಕÀ ರಾಜಾಸಾಹೇಬ ಶಿವನಗುತ್ತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಜಯಪುರ ನಗರ ಘಟಕ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳಣ್ಣವರ, ತಿಕೋಟಾ ತಾಲೂಕ ಅಧ್ಯಕ್ಷ ಸಿದ್ದ್ರಾಮಯ್ಯ ಲಕ್ಕುಂಡಿಮಠ, ಕಮಲಾ ಮುರಾಳಿ, ವಿದ್ಯಾವತಿ ಅಂಕಲಗಿ, ರಜಾಕ ಮುಲ್ಲಾ, ರಮೇಶ ಜಾಧÀವ, ಜಿ.ಎಸ್. ಬಳ್ಳೂರ, ರಾಮನಗೌಡ ಪಾಟೀಲ, ಸುನೀಲ ಒಣರೊಟ್ಟಿ, ಶಾಂತಾ ವಿಭೂತಿ, ಎಸ್.ಜಿ. ಜಂಗಮಶೆಟ್ಟಿ, ಕೆ.ಎಫ್. ಅಂಕಲಗಿ, ಗಂಗಮ್ಮ ರೆಡ್ಡಿ, ಎ.ಜಿ. ಪಾಟೀಲ, ಅಲಿಸಾಬ ಕಡಕೆ, ಅಹ್ಮದ ವಾಲೀಕಾರ, ಎಂ.ಎಂ. ಅಂದಾನಿಮಠ, ಅನಿತಾ ಕಾಂಬಳೆ, ಈರಣ್ಣ ಮಾಮನೆ, ಶರಣಪ್ಪ ಬಿರಾದಾರ ಮುಂತಾದದವರು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷÀ ಹಾಸಿಂಪೀರ ವಾಲೀಕಾರ ಸ್ವಾಗತಿಸಿ ಪರಿಚಯಿಸಿದರು. ಮಹಾದೇವಿ ತೆಲಗಿ ನಿರೂಪಿಸಿದರು.