ಸಮಾಜ ಗಟ್ಟಿಗೊಳಿಸಲು ವಧು-ವರ ಸಮಾವೇಶಗಳು ಅವಶ್ಯಃ ಡಾ. ಬಾಬುರಾಜೇಂದ್ರ ನಾಯಿಕ್

ವಿಜಯಪುರ, ಆ.1-ಸಮಾಜ ಹಾಗೂ ಸಮೂದಾಯಗಳನ್ನು ಗಟ್ಟಿಗೊಳಿಸಿ ಬಾಂಧವ್ಯ ಬೇಸೆಯುವಲ್ಲಿ ವಧು-ವರ ಸಮಾವೇಶಗಳು ಸಾಕ್ಷಿಯಾಗಲಿದೆ ಎಂದು ಭಾ.ಜ.ಪ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕರು ಹಾಗೂ ಲಾಯನ್ಸ್ ಕ್ಲಬ್ ಆಪ್ ವಿಜಯಪುರ ಪರಿವಾರದ ಜಿಲ್ಲಾಧ್ಯಕ್ಷರಾದ ಡಾ.ಬಾಬುರಾಜೇಂದ್ರ ನಾಯಿಕ್ ಅವರು ಹೇಳಿದರು.
ನಗರದ ಮಧುವನ ಹೋಟೆಲ್‍ನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ವಧುವರರ ಸಮಾವೇಶದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಬಂಜಾರಾ ಸಮುದಾಯ ಒಗ್ಗೂಡಿ ಕೆಲಸ ಮಾಡಬೇಕಿದೆ, ಸಮಾಜದ ಒಗ್ಗಟ್ಟು ಮತ್ತು ಬಾಂಧವ್ಯ ಗಟ್ಟಿಗೊಟಿಸುವ ಕೆಲಸ ನಮ್ಮೆಲ್ಲರ ಗೊಣೆಗಾರಿಕೆಯಾಗಿದ್ದು, ಇಂತಹ ಕಾರ್ಯಕ್ರಮಗಳಿಂದ ಮಾತ್ರ ನಮ್ಮ ಸಮಾಜದಲ್ಲಿ ಒಂದು ಬಾಂಧವ್ಯ ಹುಟ್ಟಲು ಸಾಧ್ಯ ಎಂದು ಹೇಳಿದರು.
ದೇಶದಾದ್ಯಂತ ಬಂಜಾರಾ ಸಮುದಾಯದ ಜನರು ಅತ್ಯಂತ ಹೆಚ್ಚಿನ ಸಂಖ್ಯೆಯ ಇದ್ದರು ಕೂಡಾ ಅನ್ಯ ಧರ್ಮಗಳ ವ್ಯಾಮೋಹಕ್ಕೆ ಒಳಗಾಗಿ ಮತಾಂತರದಂತ ಕೊಡುಕುತನಕ್ಕೆ ಹೊರಟಿದ್ದಾರೆ. ಈ ಕಾರಣಕ್ಕಾದರು ನಾವೆಲ್ಲರು ನಮ್ಮ ತನವನ್ನು ಉಳಿಸಿಕೊಳ್ಳಲ್ಲು ಹಾಗೂ ನಮ್ಮ ಭವ್ಯ ಸಂಸ್ಕøತಿಯನ್ನು ಜಗತ್ತಿನಾದ್ಯಂತ ಪಸರಿಸಲು ಈ ಕಾರ್ಯಗಳು ಆಗಾಗ ನಮ್ಮ ಸಮಾಜದಲ್ಲಿ ನಡೆಯಬೇಕಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ರಾಜ್‍ಪಾಲ್ ಚೌಹಾಣ ಅವರು ಮಾತನಾಡಿ ವಧು-ವರ ಸಮಾವೇಶ ಎರಡು ಸಂಬಂಧಗಳನ್ನು ಜೋಡಿಸುವ ಒಂದು ಒಳ್ಳೆಯ ಕಾರ್ಯವಾಗಿದ್ದು ಇಂತಹ ಕಾರ್ಯಕ್ರಮಗಳು ನಮ್ಮ ಸಮಾಜದಲ್ಲಿ ಅತಿ ವಿರಳ ಅಂತಹ ಕಾರ್ಯಕ್ರಮವನ್ನು ಮೋದಲ ಬಾರಿಗೆ ನಮ್ಮ ವಿಜಯಪುರ ಜಿಲ್ಲೆಯಲ್ಲಿ ಕೈಗೊಂಡಿರುವುದು ಒಂದ ಸಂತಸದ ಸಂಗತಿ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ ತೊರವಿಯ ಮಹಾಸ್ವಾಮಿಜಿಗಳಾದ ಗೋಪಾಲ ಮಹಾರಾಜರು ಒಂದು ಗಂಡು ಹೆಣ್ಣಿನಲ್ಲಿ ಒಂದೊಳ್ಳೆಯ ಸಂಬಂಧ ಬೆಸೆಯಲು ಬೇಕಿರುವು ಸಮಾಜ ಉಧ್ಯೋಗವಾಗಲಿ, ಆಸ್ತಿಯಾಗಲಿ ಅಥವಾ ಶ್ರೀಮಂತಿಕೆಯಾಗಲಿ ಅಲ್ಲ ಅವರಲ್ಲಿ ಬೇಕಿರುವುದು ಒಬ್ಬರನ್ನೊಬ್ಬರು ಅರ್ಥಿಸಿಕೊಂಡು ಮುನ್ನಡೆಯಬೇಕು. ಆಗಮಾತ್ರ ಸುಂದರ ಜೀವನ ರೂಪಿಸಿಕೊಳ್ಳಲು ಸಧ್ಯ ಎಂದು ಹೇಳಿದರು.
ಹಿರಿಯ ಮಹಿಳಾ ಸಾಹಿತಿಗಳಾದ ಇಂದುಮತಿ ಲಮಾಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕ, ಹಾಗೂ ಕಲಾವಿದರಾದ ಸೋಮಶೇಖರ ಆಯೋಜಕರಾದ ಗಣಪತಿ ಚಹ್ವಾಣ, ಆನಂದ ರಾಠೋಡ, ಎಂ.ಬಿ ಶ್ರೀಧರ, ಎಂ.ಬಿ ಶಶಿಧರ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಸಮುದಾಯ ನಮ್ಮದು ನಮ್ಮ ಸಮುದಾಯದ ಒಗ್ಗಟ್ಟು ಕಳೆದುಕೊಟ್ಟುತ್ತಿದೆ. ಯಾವ ಯಾವುದೊ ಆಸೆಗೆ ಮಾರು ಹೋಗಿ ಸಮಾಜದಿಂದ ಬೇರ್ಪಟ್ಟ ಇನ್ನೊಂದು ಸಮಾಜಕ್ಕೆ ಮಾರು ಗೊಗುತ್ತಿದ್ದಾರೆ ಆ ಕಾರಣಕ್ಕಾಗಿ ನಾವು ನಮ್ಮ ಸಮಾಜ ಉಳಿಸಿ ಬೆಳೆಸುವ ಕಾರ್ಯ ಮಾಡಬೃಕು ಎಂದರು,